ಅಂಕೋಲಾ(ಫೆ.15): ಬೈಕ್‌ ಅಪಘಾತಕ್ಕೀಡಾಗಿ ತಾಯಿ-ಮಗ ಸ್ಥಳದಲ್ಲಿಯೇ ಸಾವು ಕಂಡ ಘಟನೆ ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿಯ ದುಗ್ಗನಬೈಲ್‌ ಬಳಿ ನಡೆದಿದೆ.

ಅಂಗಡಿಬೈಲ್‌ ಮೂಲದ ಹರಿಹರ ರವಿ ಸಿದ್ಧಿ (26) ಹಾಗೂ ಈತನ ತಾಯಿ ಬೇಬಿ ರವಿ ಸಿದ್ಧಿ (45) ಮೃತಪಟ್ಟವರು. ಬೈಕ್‌ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿರುವ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೃತರು ಶನಿವಾರ ರಾತ್ರಿ ಕೊಡ್ಲಗದ್ದೆಗೆ ಯಕ್ಷಗಾನ ನೋಡಲು ತೆರಳಿದ್ದರು ಎನ್ನಲಾಗಿದ್ದು, ಯಕ್ಷಗಾನ ಮುಗಿಸಿ ಹಿಂದಿರುಗಬೇಕಾದರೆ ನಿದ್ದೆಯ ಮಂಪರಿನಲ್ಲಿ ಈ ದುರ್ಘಟನೆ ನಡೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ರಸ್ತೆ ದಾಟುತ್ತಿದ್ದ ಭಿಕ್ಷುಕನನ್ನ ಬಲಿ ಪಡೆದ ಯಮಸ್ವರೂಪಿ ಬಿಎಂಟಿಸಿ ಬಸ್‌

ಬೆಳಗ್ಗೆ 6-30ರ ಸುಮಾರಿಗೆ ಹೆದ್ದಾರಿ ಅಂಚಿನಲ್ಲಿ ಮೃತ ದೇಹಗಳು ಪತ್ತೆಯಾಗಿದ್ದವು. ಸ್ಥಳಕ್ಕಾಗಮಿಸಿದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.