ಬಂಡೆಗೆ ಸಿಡಿಮದ್ದು ಸ್ಫೋಟಿಸಿ ಬೆಂಕಿ: ಸುಟ್ಟು ಕರಕಲಾದ ಮಾವಿನ ತೋಟಗಳು!
ಸಿಡಿಮದ್ದು ಸ್ಫೋಟಗೊಂಡು ಬೆಂಕಿ| ನೀಲಗಿರಿ ತೋಪು, ರೈತರು ಬೆಳೆಸಲಾಗಿದ್ದ ಮಾವಿನ ತೋಟಗಳಿಗೆ ಬೆಂಕಿ| ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ|
ದೊಡ್ಡಬಳ್ಳಾಪುರ(ಏ.03): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಡಿ ಬೆಟ್ಟದ ತಪ್ಪಲಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸಂದರ್ಭದಲ್ಲಿ ಬಂಡೆಗಳಿಗೆ ಇಡಲಾಗಿದ್ದ ಸಿಡಿಮದ್ದು ಸ್ಫೋಟಗೊಂಡು ಬೆಂಕಿಹೊತ್ತಿಕೊಂಡ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನೀಲಗಿರಿ ತೋಪು, ರೈತರು ಬೆಳೆಸಲಾಗಿದ್ದ ಮಾವಿನ ತೋಟಗಳು ಸುಟ್ಟು ಹೋಗಿವೆ.
ಬೀಮ ರಾವುತ್ತನಹಳ್ಳಿ, ಲಿಂಗಾಪುರ ಗ್ರಾಮಗಳಿಗೆ ಸೇರಿರುವ ರೈತರ ತೋಟಗಳೆ ಹೆಚ್ಚಾಗಿ ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಪರಿಶ್ರಮದಿಂದಾಗಿ ಹಳೇಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಂದಿಸಲಾಗಿದೆ.
ಸಿಲಿಂಡರ್ ಸ್ಫೋಟ, ಬಾಲಕಿಗೆ ಗಾಯ, ತಪ್ಪಿದ ಭಾರೀ ದುರಂತ
ಬೆಂಕಿಯಿಂದ ಮಾವಿನ ತೋಟ, ನೀಲಗಿರಿ ತೋಪುಗಳಿಗೆ ಹಾನಿಗೆ ಒಳಗಾಗಿರುವ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ.