ನೆಲಮಂಗಲ(ಮಾ.28): ನಗರದ ದೇವಾಂಗ ಬೀದಿಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್‌ ಸ್ಪೋಟಗೊಂಡ ಘಟನೆ ನಡೆದಿದೆ. ಒಂದೇ ಕುಟುಂಬದ 13 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಆಯಿಸ್‌ ಫಾತಿಮಾ ಎಂಬ 10 ವರ್ಷದ ಬಾಲಕಿಗೆ ಸಣ್ಣಪುಟ್ಟ ಸುಟ್ಟ ಗಾಯಗಾಳಗಿವೆ. ಮನೆಯಲ್ಲಿ ಬೆಲೆಬಾಳುವ ಸುಮಾರು ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. 

ನೆಲಮಂಗಲದಿಂದ ಹಾಸನಕ್ಕೆ ಜನರನ್ನು ಸಾಗಿಸಲು Ambulance ದುರ್ಬಳಕೆ

ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.