ಕಿರಣ್‌ ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನ 8ನೇ ಮಹಡಿಯಲ್ಲಿ ಬೆಂಕಿ| ರೋಗಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ ಸಿಬ್ಬಂದಿ| ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ| ತಜ್ಞರ ಸಲಹೆ ಪಡೆದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದ ಆಸ್ಪತ್ರೆ ಸಿಬ್ಬಂದಿ| 

ಆನೇಕಲ್‌(ಮೇ.02): ಆನೇಕಲ್‌ನ ಪ್ರತಿಷ್ಠಿತ ನಾರಾಯಣ ಹೃದಯಾಲಯದ ಆರೋಗ್ಯ ಸಂಕೀರ್ಣದಲ್ಲಿನ ಕಿರಣ್‌ ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನ 8ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ವೈದ್ಯರು, ಸಿಬ್ಬಂದಿ ಹಾಗೂ ದಾಖಲಾಗಿದ್ದ ಒಳರೋಗಿಗಳು ಭಯ ಭೀತರಾಗಿದ್ದರು.

ಕೂಡಲೇ ಸಿಬ್ಬಂದಿ, ರೋಗಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದರಿಂದ ಯಾವುದೇ ಅನಾಹುತ ಸಂಭಸಲಿಲ್ಲ. ರಾತ್ರಿ 8ರ ಸಮಯದಲ್ಲಿ 8ನೇ ಮಹಡಿಯಲ್ಲಿನ ಲ್ಯಾಬ್‌ನಲ್ಲಿ ಬೆಂಕಿಯ ಹೊಗೆ ಕಾಣಿಸಿಕೊಂಡಿದೆ. ಸಣ್ಣ ಪ್ರಮಾಣದ ಬೆಂಕಿಯಾದ ಕಾರಣ ಕಟ್ಟಡದಲ್ಲಿ ಲಭ್ಯವಿದ್ದ ಅಗ್ನಿ ಶಾಮಕ ಉಪಕರಣ ಬಳಸಿಕೊಂಡ ಸಿಬ್ಬಂದಿ, ತಜ್ಞರ ಸಲಹೆ ಪಡೆದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್‌ನಿಂದ 65 ಕೋಟಿ ದೇಣಿಗೆ

ಮುಂಜಾಗ್ರತೆ ಹಾಗೂ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ನಿರ್ವಹಣೆ ವಿಭಾಗದ ಸಿಬ್ಬಂದಿ ತಿಳಿಸಿದರು. ವಿಷಯ ತಿಳಿದ ಕೂಡಲೇ ಹೆಬ್ಬಗೋಡಿ ಠಾಣಾಧಿಕಾರಿಗಳು ಅಗ್ನಿಶಾಮಕ ದಳದೊಡನೆ ಸ್ಥಳಕ್ಕೆ ಧಾವಿಸಿ ಬಂದರು.