ಧಾರವಾಡದ ರಜತಗಿರಿಯಲ್ಲಿ ಗ್ಯಾಸ್ ಪೈಪ್ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ಎರಡು ಗಂಟೆಗಳಿಂದ ಲೀಕ್ ಆಗುತ್ತಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಧಾರವಾಡ (ಫೆ.9): ಗ್ಯಾಸ್ ಪೈಪ್ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿರುವ ಆಘಾತಕಾರಿ ಘಟನೆ ನಡೆದಿದೆ. ಧಾರವಾಡ ರಜತಗಿರಿ ಮೊದಲನೆಯ ಕ್ರಾಸ್ ನಲ್ಲಿ ಗ್ಯಾಸ್ ಪೈಪ್ ಲೀಕ್ ಆಗಿದ್ದು ಸುಮಾರು 2 ಘಂಟೆಗೂ ಹೆಚ್ಚು ಕಾಲದಿಂದ ಲೀಕ್ ಆಗುತ್ತಿದೆ.
ಮನೆಮನೆಗೆ ಕನೆಕ್ಷನ್ ಇರುವ ಗ್ಯಾಸ್ ಪೈಪಲೈನ್ ಇದಾಗಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಒಂದು ಗಂಟೆಯಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರೆದ್ರು ಬೆಂಕಿ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.
ಬೆಂಕಿಗೆ ಹುಲ್ಲಿನ ಬಣವೆ ಸುಟ್ಟು ಭಸ್ಮ । Suvarna 30 News | Kannada News
ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಕಳ್ಳರ ಬಂಧನ
ಹುಬ್ಬಳ್ಳಿ ಧಾರವಾಡ ಪೊಲೀಸರ ಕಾರ್ಯಾಚರಣೆ ಮೂಲಕ ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಕಳ್ಳರ ಬಂಧನವಾಗಿದೆ. ಧಾರವಾಡ ಮಾಳಮಡ್ಡಿ ಬಡಾವಣೆಯಲ್ಲಿ ಶನಿವಾರೆ ನಡೆದಿದ್ದ ಕಳ್ಳತನ ಪ್ರಕರಣ ಇದಾಗಿದ್ದು, ಪ್ರಕರಣ ನಡೆದು ಕೇವಲ ಐದು ಗಂಟೆಯಲ್ಲಿ ಟ್ರೆಸ್ ಮಾಡಿ ಹುಬ್ಬಳ್ಳಿ ಧಾರವಾಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ ಹೇಳಿಕೆ ನೀಡಿದ್ದಾರೆ.
ಮನೆಯಲ್ಲಿ ಒಂಟಿ ಮಹಿಳೆ ಇದ್ದ ಸಂದರ್ಭದಲ್ಲಿ ಗ್ಯಾಂಗ್ ಹಲ್ಲೆ ಮಾಡಿ ಮಾಂಗಲ್ಯ ಕಳ್ಳತನ ಮಾಡಿತ್ತು.ಹಿರಿಯ ವೈದ್ಯ ಆನಂದ ಕಬ್ಬೂರ ಪತ್ನಿ ವಿನೋದಿನಿ ಮಾಂಗಲ್ಯ ಕದ್ದಿದ್ದರು.ಮನೆಯಲ್ಲಿ ಇದ್ದ ಹಣ ಕೂಡಾ ಕದ್ದಿದ್ದರು. ಪೊಲೀಸ್ ಅಧಿಕಾರಿಗಳ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಸಿಸಿಟಿವಿಯ ಸಹಾಯದಿಂದ ಮೂರು ಜನರನ್ನು ಹಿಡಿದಿದ್ದಾರೆ.
ಪೋಲಿಸರು ಆರೋಪಿಗಳಿಂದ ಮೂರು ಬೈಕ್ ವಶಕ್ಕೆ ಪಡೆದಿದ್ದಾರೆ. ಅಶೋಕ ಹೊಸಮನಿ, ಶಿವಕುಮಾರ್ ಕೋಕಾಟಿ, ಶಿವಾನಂದ ಕರಡಿಗುಡ್ಡ ಈ ಮೂವರು ಕಳ್ಳರನ್ನು ರಾಯಾಪೂರದಲ್ಲಿ ಬಂಧಿಸಲಾಗಿದೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
Bengaluru fire incident: ಸುಟ್ಟು ಕರಕಲಾದ ಮೃತದೇಹ.. ಮುಗಿಲು ಮುಟ್ಟಿದ ಆಕ್ರಂದನ | Suvarna News
ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷಗಳಿಂದ ಇದೇ ಕಳ್ಳರು ಕಳ್ಳತನ ಮಾಡಿದ್ದರು. ಬೆಳಗಾವಿ ಪಾಸಿಂಗ್ ಇರುವ ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ. ಒಂದೇ ನಂಬರಿನ ಬೈಕ್ ಕಳ್ಳತನಕ್ಕೆ ಬಳಸುತಿದ್ದರು. ಒಂದು ಆಟೋ ಕೂಡಾ ವಶಕ್ಕೆ ಪಡೆಯಲಾಗಿದೆ
ಕಳ್ಳರು ವಯಸ್ಸಾದ ಮಹಿಳೆಯರ ಮನೆಯನ್ನೇ ಟಾರ್ಗೆಟ್ ಮಾಡುತ್ತಿದ್ದರು. ಓರ್ವ ಆಟೋ ಚಾಲಕ ಮತ್ತಿಬ್ಬರು ಕಟ್ಟಡ ಕಾರ್ಮಿಕರು ಎಂದು ಹೇಳುತಿದ್ದ ಕಳ್ಳರು. ಸದ್ಯ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
