ಬೆಂಗಳೂರು [ಮಾ.17]: ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮನೆಯಲ್ಲಿ ತಾಂತ್ರಿಕ ದೋಷದಿಂದ ಅಗ್ನಿ ಅವಘಡ ಮಂಗಳವಾರ ರಾತ್ರಿ ಸಂಭವಿಸಿದ್ದು, ಸಚಿವರು ಮತ್ತು ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ.

"

ನಗರದ ಗಾಂಧಿ ಭವನದ ಸಮೀಪ ಇರುವ ಸಚಿವರ ಸರ್ಕಾರಿ ನಿವಾಸದಲ್ಲಿ ಸಚಿವರು ಮಲಗುವ ಕೋಣೆಯಲ್ಲಿ ಎಸಿ ಸ್ವಿಚ್‌ ಹಾಕುತ್ತಿದ್ದಂತೆ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ತಕ್ಷಣ ಈಶ್ವರಪ್ಪ ಮತ್ತು ಅವರ ಪತ್ನಿ ಮನೆಯಿಂದ ಹೊರಗೆ ಬಂದು ಅಳಿಯ ಸಂತೋಷ್‌ಗೆ ವಿಷಯ ತಿಳಿಸಿದ್ದಾರೆ. ಹಾಗೇ ಅಗ್ನಿ ಶಾಮಕದಳಕ್ಕೂ ಮಾಹಿತಿ ನೀಡಿದ್ದಾರೆ. 

ಬಿಜೆಪಿಗೆ ವಲಸೆ ಬಂದ 15 ಜನರಿಂದ ಕಚೇರಿ ಕಸ ಗುಡಿಸುತ್ತೇವೆ!'...

ತಕ್ಷಣ ಅಗ್ನಿ ಶಾಮಕದಳದವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅದಾಗಲೇ ಈಶ್ವರಪ್ಪ ಅವರು ಮಲಗುವ ಕೋಣೆ ಸಂಪೂರ್ಣ ಭಸ್ಮವಾಗಿದೆ. ರೂಮ್‌ನಲ್ಲಿದ್ದ ಬೆಡ್‌, ಎಸಿ, ಬಟ್ಟೆಗಳು, ಸೋಫಾ, ಕರ್ಟನ್‌ ಎಲ್ಲವೂ ಸುಟ್ಟು ಭಸ್ಮವಾಗಿದೆ. ರಾತ್ರಿ ವೇಳೆಯೇ ದುರಸ್ತಿಗೊಳಿಸುವ ಕಾರ್ಯ ನಡೆದಿದೆ.