ಬೆಂಗಳೂರು (ಆ.14) :  ಠಾಣೆ ನುಗ್ಗಿದ ದಾಂಧಲೆ ನಡೆಸಿದಾಗ 38 ಬಾರಿ ಗುಂಡು ಹಾರಿಸಿದರೂ ಗಲಭೆಕೋರರು ಶಾಂತರಾಗದೆ ಬೆಟಾಲಿಯನ್‌ಗೆ ಸೇರಿದ ಬಸ್‌ಗೆ ಬೆಂಕಿ ಹಚ್ಚಿದ ಪರಿಣಾಮ 10 ಲಕ್ಷ ರು. ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಕೆಎಸ್‌ಆರ್‌ಪಿ ಸಲ್ಲಿಸಿರುವ ಪ್ರಾಥಮಿಕ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ಬಹಿರಂಗವಾಗಿದೆ.

"

ಕೆಎಸ್‌ಆರ್‌ಪಿ ಅಧಿಕಾರಿ ಸಿದ್ದರಾಮೇಶ್‌ ಪಿ. ರಶ್ಮಿ ಅವರು ಸಲ್ಲಿಸಿರುವ ಎಫ್‌ಐಆರ್‌ನಲ್ಲಿ, ‘ಹಲಸೂರು ಠಾಣೆ ಬಳಿ ಮಂಗಳವಾರ ರಾತ್ರಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದೆವು. ರಾತ್ರಿ 9.08 ನಿಮಿಷಕ್ಕೆ ಡಿ.ಜೆ.ಹಳ್ಳಿ ಠಾಣೆಗೆ ತೆರಳುವಂತೆ ಸಂದೇಶ ಬಂತು. ಅಂತೆಯೇ ಸಿಬ್ಬಂದಿ ಜತೆ ಡಿ.ಜೆ.ಹಳ್ಳಿ ಬಳಿಗೆ 9.30 ಗಂಟೆಗೆ ತೆರಳಿದೆ. ಅಷ್ಟರಲ್ಲಿ ಆ ಠಾಣೆ ಆವರಣ ಹಾಗೂ ಮುಂಭಾಗದ ರಸ್ತೆಯಲ್ಲಿ 200-300 ಜನರು ಗುಂಪು ಉದ್ರಿಕ್ತರಾಗಿದ್ದರು. ನಮ್ಮ ಮೇಲೆ ಕಲ್ಲು ತೂರಾಟ ಮಾಡಿದರು. ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ಮಾಡುತ್ತಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಅಶ್ರುವಾಯು ಪ್ರಯೋಗಿಸಲಾಯಿತು. ಆಗಲೂ ಗಲಾಟೆ ಮುಂದುವರೆದಾಗ ಲಾಠಿ ಜಾಜ್‌ರ್‍ ಮಾಡಲಾಯಿತು. ಕೊನೆಗೆ ಅಧಿಕಾರಿಗಳ ಸೂಚನೆ ಮೇರೆಗೆ 38 ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಲಾಯಿತು. ಇದೇ ವೇಳೆ ಠಾಣೆ ಮುಂಭಾಗ ನಿಲ್ಲಿಸಿದ್ದ ನಮ್ಮ ಬೆಟಾಲಿಯನ್‌ಗೆ ಸೇರಿದ ಬಸ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದರು. ಗ್ರಾಂಡ್‌ ಶೀಟ್‌ಗಳು, ಬೆಡ್‌ಶೀಟ್‌ಗಳು, ಮೊಬೈಲ್‌, ಗುಂಡುಗಳನ್ನು ಶೇಖರಿಸಿಡುವ ಖಾಲಿ ಬಾಕ್ಸ್‌ಗಳು ಸೇರಿದಂತೆ .10 ಲಕ್ಷ ಮೌಲ್ಯದ ಆಸ್ತಿ ನಷ್ಟವಾಗಿದೆ’ ಎಂದು ತಿಳಿಸಿದ್ದಾರೆ.

ಡಿ.ಜೆ.ಹಳ್ಳಿ ದಾಂಧಲೆ: ಕಾಂಪೌಂಡ್‌ ಒಡೆದು ನಮ್ಮವರ ರಕ್ಷಿಸಿದೆವು, ಹಿರಿಯ ಅಧಿಕಾರಿ..

ಲಾಠಿ ಪ್ರಯೋಗಿಸಿದರೂ ಬೆಂಕಿ ಹಚ್ಚಿದರು:

‘ನಮ್ಮ ಪಡೆಯ 6 ಜನ ಸಿಬ್ಬಂದಿ ಮಂಗಳವಾರ ರಾತ್ರಿ 8 ಗಂಟೆಗೆ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಕರ್ತವ್ಯ ವರದಿ ಮಾಡಿಕೊಂಡಿದ್ದೆವು. ರಾತ್ರಿ 9 ಗಂಟೆಗೆ ಡಿ.ಜೆ.ಹಳ್ಳಿ ಠಾಣೆಗೆ ತೆರಳುವಂತೆ ಪೂರ್ವ ವಿಭಾಗದ ನಿಯಂತ್ರಣ ಕೊಠಡಿಯಿಂದ ಸಂದೇಶ ಬಂತು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ್ದೆವು. ಅಷ್ಟರೊಳಗೆ 200-300 ಜನ ಉದ್ರಿಕ್ತರು ದಾಂಧಲೆ ಶುರು ಮಾಡಿದ್ದರು. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಅಧಿಕಾರಿಗಳ ಸೂಚನೆ ಮೇರೆಗೆ ಲಾಠಿ ಪ್ರಹಾರ ನಡೆಸಲಾಯಿತು. ಆಗಲೂ ಗಲಭೆಕೋರರು ಶಾಂತರಾಗದೆ ದಾಂಧಲೆ ಮುಂದುವರೆಸಿದರು. ಆಗ ಠಾಣೆ ಮುಂದೆ ನಿಲ್ಲಿಸಿದ್ದ ನಮ್ಮ ಪಡೆಯ ಸ್ವರಾಜ್‌ ಮಾಜ್‌್ದ ಟಾಟಾ ಬಸ್ಸಿಗೆ ಬೆಂಕಿ ಹಚ್ಚಿದರು. ಅದರಲ್ಲಿ ಎಸ್‌ಎಲ್‌ಆರ್‌ ರೈಫಲ್‌ ಬಟ್‌, ಟಿಯರ್‌ ಗ್ಯಾಸ್‌ ಗನ್‌ ಬಟ್‌ ಸೇರಿದಂತೆ 8 ಲಕ್ಷದ ವಸ್ತುಗಳು ಸುಟ್ಟು ಭಸ್ಮವಾಗಿವೆ. ವಾಹನ ಅಗ್ನಿಗೆ ಆಹುತಿಯಾಗಿದೆ’ ಎಂದು ಬೆಂಗಳೂರು ದಕ್ಷಿಣ ವಿಭಾಗ ಸಿಎಎಆರ್‌ ಆಮ್‌ರ್‍ ಹೆಡ್‌ ಕಾನ್‌ಸ್ಟೇಬಲ್‌ ತಿಪ್ಪೇಸ್ವಾಮಿ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.

ಉರಿವ ಬೆಂಕಿಗೆ ಬಿಜೆಪಿಯಿಂದ ತುಪ್ಪ: ಡಿಕೆಶಿ ಕಿಡಿ...

ನವೀನ್‌ ಸುಟ್ಟು ಹಾಕಿ:

ಪೊಲೀಸರನ್ನು ಕೊಚ್ಚಿ ಕೊಲೆ ಮಾಡಿ ಎಂದು ಘೋಷಣೆ ಕೂಗಿದರು. ನವೀನ್‌ನನ್ನು ಸಾಯಿಸಲು ಬಿಡುತಿಲ್ಲ ಎಂದು ಅರಚಾಡಿದರು. ಮೊದಲು ಪೊಲೀಸರನ್ನೇ ಸಾಯಿಸಿ ಎಂದರು. ಠಾಣೆ ಮೇಲೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದರು. ಆಗ ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಲಾಯಿತು. ಲಾಠಿ ಪ್ರಹಾರ ಮಾಡಿದರೂ ಬಗ್ಗದೆ ಹೋದಾಗ ಕೊನೆಗೆ ಗಲಭೆಕೋರರ ಮೇಲೆ ಗುಂಡು ಹಾರಿಸಲಾಯಿತು ಎಂದು ಕೆ.ಜಿ.ಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಅಜಯ್‌ ಸಾರಥಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.