Belagavi: ಶಾಲಾ ದುರಸ್ತಿ ಬಗ್ಗೆ ಕೇಳಿದ್ದೇ ತಪ್ಪಾ? ಎಸ್‌ಡಿಎಂಸಿ ಅಧ್ಯಕ್ಷ ಸದಸ್ಯನ ವಿರುದ್ಧ FIR

• ಮುದೇನೂರು ಸರ್ಕಾರಿ ಶಾಲೆಯಲ್ಲಿ ಸೀರೆ ಟೆಂಟ್ ನಿರ್ಮಾಣ ವಿಚಾರ
• ಮುದೇನೂರು ಸರ್ಕಾರಿ SDMC ಅಧ್ಯಕ್ಚ, ಸದಸ್ಯನ ವಿರುದ್ಧ FIR
• ಸಭೆ ಮಾಡಿ ಎಲ್ಲಾ ಸರಿಪಡಿಸುತ್ತೇನೆ ಎಂದರು MLA ಮಹಾದೇವಪ್ಪ ಯಾದವಾಡ

fir filed against mudenur government school sdmc president in belagavi gvd

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ.22): ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ ಹಿನ್ನೆಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೀರೆ ಟೆಂಟ್ ನಿರ್ಮಾಣ ಮಾಡಲಾಗಿತ್ತು. ಶಾಲಾ ಕಟ್ಟಡ ಅವ್ಯವಸ್ಥೆ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ವಿಸ್ತೃತ ವರದಿ ಪ್ರಸಾರ ಆಗಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಳಗಾವಿ ಜಿಲ್ಲಾಡಳಿತ 20 ಲಕ್ಷ ಅನುದಾನ ಬಿಡುಗಡೆಯಾಗಿ ಕೆಲಸ ಶುರುವಾಗಿದೆ. ಈ ಮಧ್ಯೆ ಶಾಲಾ ಕಟ್ಟಡ ದುರಸ್ತಿ ಬಗ್ಗೆ ಪ್ರಶ್ನಿಸಿದ್ದವರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ರಾಮದುರ್ಗ ಬಿಇಒ ಮಲ್ಲಿಕಾರ್ಜುನ ಅಲಸೆ ನೀಡಿದ ದೂರಿನ ಮೇರೆಗೆ FIR ದಾಖಲಾಗಿದೆ‌‌. 

ಬಿಇಒಗೆ ಅವಾಚ್ಯವಾಗಿ ಬೈಯ್ದು ಕೈಹಿಡಿದು ಎಳೆದಾಡಿ ಜೀವಬೆದರಿಕೆ ಹಾಕಿದ ಆರೋಪದಡಿ, 'ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕಂಬಾರ, ಸದಸ್ಯ ನೀಲಪ್ಪ ಪೂಜಾರ್ ವಿರುದ್ಧ ಐಪಿಸಿ ಸೆಕ್ಷನ್ 1860 (U/s - 341, 353, 504, 506, 34)ರಡಿ ಕೇಸ್ ದಾಖಲಾಗಿದೆ. ಮಳೆಯಿಂದ ಶಿಥಿಲಾವಸ್ಥೆ ತಲುಪಿದ್ದ ಮುದೇನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಎದುರು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಆವರಣದಲ್ಲಿ ಸೀರೆ ಟೆಂಟ್ ನಿರ್ಮಿಸಿದ್ದರು‌. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ರಾಮದುರ್ಗ ಬಿಇಒ ಮಲ್ಲಿಕಾರ್ಜುನ ಅಲಸೆ, 'ಮಾಧ್ಯಮಗಳ ಕ್ಯಾಮರಾ ಕಂಡು ಸ್ಥಳದಿಂದ ತೆರಳಲು ಯತ್ನಿಸಿದ್ದ ಬಿಇಒ ಕಾರು ತಡೆದು ಮಕ್ಕಳು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು. 

ಗೋವಾದಲ್ಲಿ ಕನ್ನಡಿಗರ ದಾದಾಗಿರಿ ಪ್ರದರ್ಶನ: ತುಕಾರಾಂ ಪರಬ್ ವಿವಾದಿತ ಹೇಳಿಕೆ

ಬಳಿಕ ಶಾಲಾ ಕಟ್ಟಡ ಎದುರು ಕರೆತಂದು ಶಿಥಿಲಾವಸ್ಥೆ ತಲುಪಿದ ಕೊಠಡಿಗಳ ತೋರಿಸಿದ್ದರು. ಈ ವೇಳೆ ಶಾಲಾ ಕಟ್ಟಡ ಮೈನರ್ ರಿಪೇರಿ ಕಾರ್ಯ ಇದೆ ಎಂದಿದ್ದ ಬಿಇಒ ಮಲ್ಲಿಕಾರ್ಜುನ ಅಲಸೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಕೈ ಹಿಡಿದು ಮೇಲ್ಛಾವಣಿ ಕುಸಿದ ಶಾಲಾ ಕೊಠಡಿ ತೋರಿಸಿದ್ದರು. ಬಳಿಕ ಸ್ಥಳದಿಂದ ತೆರಳಿದ್ದ ಬಿಒಒ ಮಲ್ಲಿಕಾರ್ಜುನ ಅಲಸೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಮಧ್ಯೆ ತಾಲೂಕು ಶಿಕ್ಷಕರ ಸಂಘದ ಸದಸ್ಯರು ಬಿಒಒ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರಶ್ನಿಸಿದ್ರೆ ಯಾರೂ FIR ದಾಖಲು ಮಾಡಲ್ಲ ಎಂದ ಸಚಿವ ಗೋವಿಂದ ಕಾರಜೋಳ: ಮುದೇನೂರು ಸರ್ಕಾರಿ ಶಾಲೆ ದುರಸ್ತಿ ಬಗ್ಗೆ ಪ್ರಶ್ನಿಸಿದ್ದವರ ವಿರುದ್ಧವೇ FIR ವಿಚಾರವಾಗಿ ಪ್ರತಿಕ್ರಿಯಿಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, 'ಪ್ರಶ್ನಿಸಿದರೇ ಯಾರೂ FIR ದಾಖಲು ಮಾಡಲ್ಕ, ಅಲ್ಲಿ ಏನು ನಡೆದಿದೆ ಘಟನೆ ಮೇಲೆ ಆಗಿರುತ್ತೆ. ಬಹಳ ಸೂಕ್ಷ್ಮವಾಗಿ ಹೇಳಲು ಬಯಸುತ್ತೇನೆ. ಮುದೇನೂರು ಸರ್ಕಾರಿ ಶಾಲಾ ಕಟ್ಟಡ ಬಹಳ ಹಳೆಯದ್ದು. ಮಳೆ ಗಾಳಿಗೆ ಹೆಂಚುಗಳು ಹಾರಿ ಹೋಗಿ ತೊಂದರೆ ಆಗಿತ್ತು. ಅದಕ್ಕಾಗಿ 20 ಲಕ್ಷ ನೀಡಿ ಹಣ ನೀಡಲು ಸೂಚನೆ ಕೊಟ್ಟಿದ್ದೆ. ಟೆಂಡರ್ ಕರೆದು ಮಾಡಲು ವಿಳಂಬ ಆಗುತ್ತೆ ಅಂತಾ ಡಿಸಿಗೆ ಸೂಚನೆ ಕೊಟ್ಟಿದ್ದೆ ನಿರ್ಮಿತಿ ಕೇಂದ್ರದ ನೀವೇ ಚೇರ್‌ಮನ್ ನೀವೇ ಇದ್ದು ನಿರ್ಮೀತಿ ಕೇಂದ್ರಕ್ಕೆ ದುಡ್ಡು ಕೊಡಿ ಎಂದಿದ್ದೆ. ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಪ್ರತಿಭಟಿಸೋದು ಪ್ರತಿಯೊಬ್ಬರ 130 ಕೋಟಿ ಜನರ ಹಕ್ಕು ಇಸೆ. ಆದ್ರೆ ನೀತಿ ನಿಯಮ ಮೀರಿ ಪ್ರತಿಭಟನೆ ಮಾಡಬಾರದು' ಎಂದರು‌.

ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಎಂದ ಮಹಾದೇವಪ್ಪ ಯಾದವಾಡ: ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ, ಎಫ್ಐಆರ್ ದಾಖಲಾಗಿದ್ದು ನಿನ್ನೆ ಸಂಜೆಯೇ ಗೊತ್ತಾಗಿದೆ. ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೀಟಿಂಗ್ ಇದೆ ಅಂತಾ ಬೆಳಗಾವಿಗೆ ಬಂದೆ. ಸಂಜೆ ಸಭೆ ಕರೆದು ಅದನ್ನೆಲ್ಲ ಬಗೆಹರಿಸುವೆ ಎಂದರು‌. ಎರಡೂವರೆ ತಿಂಗಳ ಹಿಂದೆ ಶಾಲಾ ದುರಸ್ತಿ ಬಗ್ಗೆ ಎಸ್‌ಡಿಎಂಸಿಯವರು ಹೇಳಿದ್ರು. ಹೆಡ್‌ಮಾಸ್ಟರ್ ಜೊತೆ ಮೀಟಿಂಗ್ ಮಾಡಿ ಬಿಇಒಗೆ ಲಿಸ್ಟ್ ಕಳಿಸಿ ಕೊಡಿ. ಬಿಇಒ ಕಮಿಷನರ್‌ಗೆ ಕಳಿಸಿ ಕೊಡ್ತಾರೆ, ಕಮಿಷನರ್ ರಾಜ್ಯ ಸರ್ಕಾರಕ್ಕೆ ಕಳಿಸಿಕೊಡ್ತಾರೆ ಎಂದಿದ್ದೆ‌‌. 

ನನಗೆ ಬಿಒಒ, ಹೆಡ್‌ಮಾಸ್ಟರ್, ಎಸ್‌ಡಿಎಂಸಿ ಅಧ್ಯಕ್ಷರು ನನಗೆ ಏನೂ ಹೇಳಿರಲಿಲ್ಲ.‌ಈಗ ಎರಡೂವರೆ ತಿಂಗಳ ಹಿಂದೆ ಎಸ್‌ಡಿಎಂಸಿಯವರು ಹೇಳಿದ್ರು.‌ ಮುದೇನೂರು ಸರ್ಕಾರಿ ಶಾಲೆ ಬಗ್ಗೆ ಎರಡೂವರೆ ತಿಂಗಳ ಹಿಂದೆ ನನ್ನ ಗಮನಕ್ಕೆ ಬಂತು. ಶತಮಾನೋತ್ಸವ ಕಾರ್ಯಕ್ರಮ ಮಾಡಬೇಕು ಕಟ್ಟಡ ಬೇಕು ಎಂದ್ರು. ತಾತ್ಕಾಲಿಕವಾಗಿ ತಾ.ಪಂ., ಜಿ.ಪಂ. ಅನುದಾನದಲ್ಲಿ 20 ಲಕ್ಷ ದುರಸ್ತಿಗೆ ಮಂಜೂರು. ಮೊನ್ನೆ ಮಳೆ ಗಾಳಿಗೆ ಹೆಂಚುಗಳು ಕಿತ್ತು ಹೋದ ಸಂದರ್ಭದಲ್ಲಿ ನನ್ನ ವಿರುದ್ಧ ಷಡ್ಯಂತ್ರ‌‌. ನನ್ನ ತಾಲೂಕಿನಲ್ಲಿ ಹೆಸರು ಕೆಡಿಸಬೇಕೆಂದು ಷಡ್ಯಂತ್ರ ಮಾಡಿದ್ದಾರೆ. ನಾನು ಬೆಂಗಳೂರಿನಲ್ಲಿ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿದ್ದೇನೆ‌. ಶಾಲಾ ಕಟ್ಟಡಗಳಿಗೆ ಕೊಠಡಿಗಳು ಬೇಕು ಎಂದು ಹೇಳಿದ್ದೇನೆ. 

Belagavi: ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ: 15 ವಿದ್ಯಾರ್ಥಿಗಳು ಸಸ್ಪೆಂಡ್!

ಪ್ರವಾಹ ಬಂದಾಗ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದ ವೇಳೆ 23 ಕೋಟಿ ಬಿಡುಗಡೆ ಮಾಡಿದ್ರು. ಈ ವೇಳೆ ಕೊಠಡಿಗಳನ್ನು ಕಟ್ಟಿಸಿ ಕೊಟ್ಟಿದ್ದೇನೆ. ಎಲ್ಲಾ ತಾಲೂಕಿನಲ್ಲಿಯೂ ಷಡ್ಯಂತ್ರ ಇದ್ದೆ ಇರುತ್ತೆ. ಚುನಾವಣೆ 10 - 11 ತಿಂಗಳು ಬಾಕಿ ಇರುವಾಗ ಷಡ್ಯಂತ್ರ ಮಾಡ್ತಾರೆ. ಗಾಡಿ ವೇಗವಾಗಿ ಹೋಗುವಾಗ ವೇಗ ತಡೆಯುವ ಮಂದಿ ಇರ್ತಾರೆ. ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಿ ಬಳಿಕ 8 ಕೊಠಡಿ ನಿರ್ಮಾಣ. ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಸಿಎಂ ಕರೆಯಿಸಿ 700 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ' ಎಂದರು. ಒಟ್ಟಾರೆಯಾಗಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯನ ವಿರುದ್ಧ ದಾಖಲಾದ ಎಫ್ಐಆರ್ ಕೈ ಬಿಡುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ಮಾಡ್ತೀನಿ ಎಂದಿದ್ದು ರಾಮದುರ್ಗ ಬಿಇಒ ದೂರು ವಾಪಸ್ ಪಡೀತಾರಾ ಕಾದು ನೋಡಬೇಕು‌.

Latest Videos
Follow Us:
Download App:
  • android
  • ios