Asianet Suvarna News Asianet Suvarna News

ಗೋವಾದಲ್ಲಿ ಕನ್ನಡಿಗರ ದಾದಾಗಿರಿ ಪ್ರದರ್ಶನ: ತುಕಾರಾಂ ಪರಬ್ ವಿವಾದಿತ ಹೇಳಿಕೆ

*   ಗೋವಾ ಕನ್ನಡಿಗರು ಹಿಂದೂ ಹಬ್ಬಗಳಲ್ಲಿ ಭಾಗವಹಿಸೋದು ತಪ್ಪಾ? 
*   ದುರ್ಗಾ ಪೂಜೆ, ಗಣೇಶ ಉತ್ಸವ ಕೇವಲ ಗೋವಾ ಸಂಪ್ರದಾಯದ ಹಬ್ಬಗಳಾ?
*   ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು ನಮ್ಮ ಸಂಪ್ರದಾಯದ ಹಬ್ಬಗಳಲ್ಲಿ ಭಾಗಿ
 

Revolutionary Goans Leader Tukaram Parab Talks Over Goa Kannadigas grg
Author
Bengaluru, First Published May 15, 2022, 10:45 AM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ

ಬೆಳಗಾವಿ(ಮೇ.15): ನೆರೆಯ ಗೋವಾ(Goa) ರಾಜ್ಯದಲ್ಲಿ ಜೂನ್ ವೇಳೆ 190 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ‌. ಗೋವಾ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೋವಾ ಕನ್ನಡಿಗರನ್ನು(Goa Kannadigas) ಬೆಂಬಲಿಸುತ್ತಿದ್ದು ಅಗತ್ಯಬಿದ್ದರೆ ಗೋವಾದಲ್ಲಿ ಕನ್ನಡಿಗ ಅಭ್ಯರ್ಥಿಗಳ ಪೆನಲ್ ರಚಿಸುವುದಾಗಿ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಘೋಷಿಸಿದ್ದಾರೆ. 

ಸಿದ್ದಣ್ಣ ಮೇಟಿ ಹೇಳಿಕೆ ಬೆನ್ನಲ್ಲೇ ಗೋವಾದ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ನಡುಕ ಶುರುವಾಗಿದೆ. ಗೋವಾ ಕನ್ನಡಿಗರ ಟೀಕಿಸುವ ಭರದಲ್ಲಿ ರೆವೂಲೇಷ್‌ನರಿ ಗೋವನ್ಸ್ ಪಕ್ಷದ(Revolutionary Goans) ಅಧ್ಯಕ್ಷ ತುಕಾರಾಂ ಪರಬ್ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ‌. 

Belagavi: ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ: 15 ವಿದ್ಯಾರ್ಥಿಗಳು ಸಸ್ಪೆಂಡ್!

ಗೋವಾ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, 'ಗೋವಾ ಕನ್ನಡಿಗರು ನಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಏಕೆ ಮಧ್ಯಪ್ರವೇಶಿಸುತ್ತೀರಿ? ನೀವು ದುರ್ಗಾ ಪೂಜೆ(Durga Pooje) ಮಾಡುತ್ತಿದ್ದೀರಿ ನಾಳೆ ಗಣೇಶ ಉತ್ಸವದಲ್ಲಿಯೂ(Ganesh Utsav) ಭಾಗವಹಿಸುತ್ತೀರಿ. ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು ನಮ್ಮ ಹಬ್ಬಗಳಲ್ಲಿ ಭಾಗಿಯಾಗುತ್ತಿದ್ದೀರಿ. ಕನ್ನಡಿಗರು ಗೋವಾವನ್ನು ‌ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ. ಗೋವಾದ ಎಲ್ಲೆಡೆ ಕನ್ನಡಿಗರು(Kannadigas) ದಾದಾಗಿರಿ ಪ್ರದರ್ಶಿಸುತ್ತಿದ್ದಾರೆ. ಇದು ನಿಮ್ಮ ತಂದೆಯ ಆಸ್ತಿ ಅಲ್ಲ, ನಮ್ಮ ತಂದೆಯ ಆಸ್ತಿ. ನೀವು ನಮ್ಮ ಹಬ್ಬಗಳ ಆಚರಣೆಯಲ್ಲೂ ಮಧ್ಯಪ್ರವೇಶಿಸುತ್ತಿದ್ದೀರಿ' ಎನ್ನುವ ಮೂಲಕ ಪರೋಕ್ಷವಾಗಿ ಹಿಂದೂ ಉತ್ಸವ, ಸಮಾರಂಭಗಳಲ್ಲಿ ಭಾಗವಹಿಸುವುದಕ್ಕೂ ರೆವಲ್ಯೂಷನರಿ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ 'ನಾವು ನಿಮಗೆ 'ಅಕ್ರಮ ವಲಸಿಗರು' ಅಂತಾ ಹೇಳಲು ಪ್ರಚೋದಿಸುತ್ತಿದ್ದೀರಿ' ಎಂದು ಸಹ ಹೇಳಿದ್ದಾರೆ. ಈಗ ರೆವಲ್ಯೂಷನರಿ ಗೋವನ್ಸ್ ಅಧ್ಯಕ್ಷ ತುಕಾರಾಂ ಪರಬ್ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ

'ನಾವು ಗೋವಾ ಕನ್ನಡಿಗರು, ಕರ್ನಾಟಕ ಕನ್ನಡಿಗರಲ್ಲ'

ಇನ್ನು ಅದೇ ಗೋವಾದ ಸ್ಥಳೀಯ ವಾಹಿನಿಯಲ್ಲಿ ಸಂದರ್ಶನ ನೀಡಿರುವ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ(Siddannna Meti), 'ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು' ಎಂಬ ಹೇಳಿಕೆ ನೀಡಿದ್ದು ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿದೆ. ಸಿದ್ದಣ್ಣ ಮೇಟಿ ಹೇಳಿಕೆಗೆ ಗೋವಾ ಕನ್ನಡಿಗರಿಂದಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ, 'ನಾವು ಹಲವು ವರ್ಷಗಳಿಂದ ಗೋವಾದಲ್ಲಿ ನೆಲೆಸಿದ್ದೇವೆ‌. ಗೋವಾಗೆ ಹರಿಯುವ ಮಹದಾಯಿ ನೀರು ಕರ್ನಾಟಕ ಸರ್ಕಾರ ನಿಲ್ಲಿಸಬಾರದು.ನಮ್ಮ ಕರ್ಮ ಭೂಮಿ ಗೋವಾ, ಜನ್ಮ ಭೂಮಿ ಕರ್ನಾಟಕ. ಗೋವಾ ನಮಗೆ ಅಣ್ಣ ನೀಡುತ್ತೆ ಅಂದ್ರೆ ಗೋವಾದ ಹೆಸರು ಹೇಳಬೇಕು' ಎಂದು ಹೇಳಿದ್ದಾರೆ‌. 

ರೈತರ ಕೋಟಿ​ಗ​ಟ್ಟಲೇ ಕಬ್ಬಿನ ಬಾಕಿ ಉಳಿ​ಸಿ​ಕೊಂಡ ಸಕ್ಕ​ರೆ ಕಾರ್ಖಾ​ನೆ​ಗ​ಳು: ಸಂಕಷ್ಟದಲ್ಲಿ ಅನ್ನದಾತ..!

ಇನ್ನು ಸಿದ್ದಣ್ಣ ಮೇಟಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಗೋವಾ ಗ್ರಾಮ ಪಂಚಾಯತ ಚುನಾವಣೆ ಸ್ಪರ್ಧಿಸಲು ಬಯಸಿದ ಅಭ್ಯರ್ಥಿಗಳು ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ಯಾವುದೇ ವಿಧವಾದ ಹೇಳಿಕೆ ನೀಡಬೇಡಿ ಎಂದು ಸಿದ್ದಣ್ಣ ಮೇಟಿಯವರಿಗೆ ಹೇಳಿದ್ವಿ ಎಂದು ಹೆಸರು ಹೇಳಲು ಇಚ್ಚಿಸದ ಗೋವಾ ಕನ್ನಡಿಗರು ತಿಳಿಸಿದ್ದಾರೆ.

ಗೋವಾದ ಕಲಂಗುಟ್, ಬಿಚೋಲಿಮ್ ಸೇರಿ ವಿವಿಧೆಡೆ ಕನ್ನಡಿಗ ಮತದಾರರು ಇದ್ದು ಇತ್ತೀಚೆಗೆ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳಿಗೆ ಕನ್ನಡಿಗ ಮತದಾರರು ಠಕ್ಕರ್ ಕೊಟ್ಟಿದ್ದರು‌. ಈಗ ಗೋವಾ ಗ್ರಾಮ ಪಂಚಾಯತಿ ಚುನಾವಣೆ ಸಮೀಪಿಸುತ್ತಿದ್ದಂತೆ ವಲಸಿಗರು ಹಾಗೂ ಸ್ಥಳೀಯರು ಅಂತಾ ವಾರ್ ಶುರುವಾಗಿದ್ದು ಇದು ಮುಂದೆ ಯಾವ ಹಂತಕ್ಕೆ ಹೋಗಿ ತಲುಪುತ್ತೆ ಕಾದು ನೋಡಬೇಕು.
 

Follow Us:
Download App:
  • android
  • ios