Asianet Suvarna News Asianet Suvarna News

ಕೊನೆಗೂ ಹೈಕೋರ್ಟ್ ತೀರ್ಪಿಗೆ ಬಗ್ಗಿದ Ola, uber ಕಂಪೆನಿಗಳು

ದರ ಇಳಿಸುವಂತೆ ಮನವಿ ಮಾಡಿಕೊಂಡ್ರು ಸರ್ಕಾರದ ವಿರುದ್ದವೇ ಸಿಡಿದೆದ್ದಿದ್ದ ಅಗ್ರಿಗೇಟರ್ಸ್ ಕಂಪೆನಿಗಳಾದ ಓಲಾ ಉಬರ್ ಈಗ ಕೊನೆಗೂ ಹೈಕೋರ್ಟ್ ತೀರ್ಪಿಗೆ ಬಗ್ಗಿವೆ.

Finally, the aggregators companies Ola Uber bowed to the High Court decision on fair rate akb
Author
First Published Oct 17, 2022, 10:41 AM IST

ಬೆಂಗಳೂರು: ದರ ಇಳಿಸುವಂತೆ ಮನವಿ ಮಾಡಿಕೊಂಡ್ರು ಸರ್ಕಾರದ ವಿರುದ್ದವೇ ಸಿಡಿದೆದ್ದಿದ್ದ ಅಗ್ರಿಗೇಟರ್ಸ್ ಕಂಪೆನಿಗಳಾದ ಓಲಾ ಉಬರ್ ಈಗ ಕೊನೆಗೂ ಹೈಕೋರ್ಟ್ ತೀರ್ಪಿಗೆ ಬಗ್ಗಿವೆ. ಸರ್ಕಾರದ ಎಚ್ಚರಿಕೆಗೆ ಬಗ್ಗದ ಓಲಾ ಉಬರ್ ಕೋರ್ಟ್ ಮಧ್ಯಪ್ರವೇಶದ ಬಳಿಕ ಎಚ್ಚೆತ್ತುಕೊಂಡಿವೆ. 100 ರೂ. ನಿಗದಿ ಪಡಿಸಿದ್ದ ಕಂಪೆನಿಗಳು ಕನಿಷ್ಠ ದರ 35ರೂ. ಗೆ ಇಳಿಸಿವೆ. ಸಾರಿಗೆ ಇಲಾಖೆಯ ನಿರ್ದೇಶನ ಪಾಲಿಸದ ಹಿನ್ನಲೆ  ಆಟೋ ಸೇವೆ ಸ್ಥಗಿತಗೊಳಿಸುವಂತೆ  ಅಗ್ರಿಗೇಟರ್ಸ್ ಕಂಪೆನಿಗಳಾದ ಓಲಾ ಉಬರ್‌ಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಹೈಕೋರ್ಟ್ ಕೂಡ ಪ್ರಯಾಣಿಕರಿಗೆ ಹೊರೆಯಾಗದಂತೆ ದರ ನಿಗದಿ ಮಾಡುವಂತೆ ಸೂಚನೆ ನೀಡಿತ್ತು. 

ಸರ್ಕಾರ ನಿಗದಿಪಡಿಸಿದ್ದ ಮೂಲದರಕ್ಕಿಂತ ಶೇ.10 ರಷ್ಟು ಮಾತ್ರ ಹೆಚ್ಚು ದರ ನಿಗದಿಪಡಿಸಿ ಸೇವೆ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಹೀಗಾಗಿ ಕನಿಷ್ಟ ದರ 35ರೂ. ಗೆ ಅಗ್ರಿಗೇಟರ್ಸ್ ಕಂಪೆನಿಗಳಾದ ಓಲಾ ಉಬರ್ ದರ ಇಳಿಕೆ ಮಾಡಿವೆ. ಸಾರಿಗೆ ಇಲಾಖೆ ಆಟೋಗಳಿಗೆ ಮೊದಲ 2ಕಿಮೀ ಗೆ 30ರೂ ಹಾಗೂ ಬಳಿಕ ಪ್ರತಿ ಕಿ.ಮೀ ಗೆ 15 ರೂ ನಿಗದಿ ಮಾಡಿತ್ತು. ಆದ್ರೆ ಅಗ್ರಿಗೇಟರ್ಸ್ ಕಂಪೆನಿಗಳು ಬೇಕಾಬಿಟ್ಟಿ ದರ ನಿಗದಿಗೊಳಿಸಿ ಪ್ರಯಾಣಿಕರಿಂದ ವಸೂಲಿ ಮಾಡ್ತಿತ್ತು. ಇನ್ಮುಂದೆ 35ರೂ. ಗಿಂತ ಜಾಸ್ತಿ ದರ ವಿಧಿಸಿದಲ್ಲಿ ನಾಗರಿಕರು ಸಾರಿಗೆ ಇಲಾಖೆಗೆ ವಾಟ್ಸಪ್ ಮೂಲಕ ಸಹಾಯವಾಣಿ ನಂಬರ್ ಗೆ ದೂರು ನೀಡಬಹುದಾಗಿದೆ. ನಿಗದಿ  ದರಕ್ಕಿಂತ ಹೆಚ್ಚಿನ ದರ ವಿಧಿಸಿದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ. 

ಓಲಾ, ಉಬರ್‌ ಆಟೋಗೆ ಕೋರ್ಟ್‌ನಲ್ಲಿ ಸಿಹಿ-ಕಹಿ..!

ಸಹಾಯವಾಣಿ ನಂಬರ್ ಇಲ್ಲಿದೆ.
9449863426, 9449863429

Bengaluru Auto Services: ಕೇಂದ್ರದ ನಿಯಮ ಬಳಸಿ ಸುಲಿಗೆ: ಓಲಾ, ಉಬರ್‌ ಕೇಸ್‌ ಹೈಕೋರ್ಟ್‌ಗೆ

Follow Us:
Download App:
  • android
  • ios