ಕಾರವಾರದಲ್ಲಿ ವರ್ಷಾಂತ್ಯದೊಳಗೆ ಯುದ್ಧ ವಿಮಾನ ಪ್ರದರ್ಶನಾಲಯ?

* ಕೋವಿಡ್‌ ಹಿನ್ನೆಲೆ ಯುದ್ಧ ವಿಮಾನ ಪ್ರದರ್ಶನಾಲಯ ನಿರ್ಮಾಣ ವಿಳಂಬ
* ಈಗಾಗಲೇ ವಿಶಾಖಪಟ್ಟಣದಲ್ಲಿರುವ ಯುದ್ಧ ವಿಮಾನ ಪ್ರದರ್ಶನಾಲಯ
* ಟಪಲೋವ್‌ ಯುದ್ಧ ವಿಮಾನ ಪ್ರದರ್ಶನಾಲಯ ನಿರ್ಮಾಣ ಉದ್ದೇಶ 

Fighter Aircraft Exhibition at the End of the Year in Karwar grg

ಕಾರವಾರ(ಆ.18): ನಗರದಲ್ಲಿ ಪ್ರಸಕ್ತ ವರ್ಷದ ಅಂತ್ಯದೊಳಗೆ ಟಪಲೋವ್‌ (ಟಿಯು-142) ಯುದ್ಧ ವಿಮಾನ ಪ್ರದರ್ಶನಾಲಯ ಆರಂಭವಾಗುವ ಸಾಧ್ಯತೆಯಿದೆ. ಜಿಲ್ಲಾಡಳಿತ ನೌಕಾಪಡೆಯ ಜತೆಗೆ ಯುದ್ಧ ವಿಮಾನ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿ ಸತತ ಮತುಕತೆ ನಡೆಸುತ್ತಿದೆ. 

ಈಗಾಗಲೇ ಕಾರವಾರದಲ್ಲಿ ರಾಜ್ಯದ ಮೊದಲ ನೌಕಾಪಡೆಯ ಯುದ್ಧ ವಿಮಾನ ಪ್ರದರ್ಶನಾಲಯ ಆರಂಭವಾಗಬೇಕಿತ್ತು. ಟಪಲೋವ್‌ ಯುದ್ಧ ವಿಮಾನದ ಹಸ್ತಾಂತರಕ್ಕೆ ಸಂಬಂಧಿಸಿ 2020ರ ಮಾರ್ಚ್‌ನಲ್ಲಿ ನೌಕಾನೆಲೆ ಹಾಗೂ ಜಿಲ್ಲಾಡಳಿತ ಒಪ್ಪಂದಕ್ಕೆ ಸಹಿ ಮಾಡಿದ್ದವು. ಅಂದುಕೊಂಡಂತೆ ಆಗಿದ್ದರೆ 2020ರ ಡಿಸೆಂಬರ್‌ನಲ್ಲಿ ನಡೆಯುವ ನೌಕಾ ದಿನಾಚರಣೆ(ನೇವಿ ಡೇ)ಯಂದು ಲೋಕಾರ್ಪಣೆ ಆಗಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ಯುದ್ಧ ವಿಮಾನ ಕಾರವಾರಕ್ಕೆ ತರುವುದು ವಿಳಂಬವಾಗಿದೆ. ಟಪಲೋವ್‌ ರಷ್ಯಾ ನಿರ್ಮಿತ ಆ್ಯಂಟಿ ಸಬ್‌ಮೆರಿನ್‌ ಯುದ್ಧ ವಿಮಾನವಾಗಿದ್ದು, ಭಾರತೀಯ ಸೇನೆಯಲ್ಲಿ 29 ವರ್ಷ ಸೇವೆ ಸಲ್ಲಿಸಿ, 2017ರಲ್ಲಿ ನಿವೃತ್ತಿಯಾಗಿತ್ತು. ಸದ್ಯ ವಿಶಾಖಪಟ್ಟಣದಲ್ಲಿ ಈ ವಿಮಾನವನ್ನು ಇರಿಸಲಾಗಿದೆ.

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ ಸಂಚಾರ ಆರಂಭ!

ವಿಶಾಖಪಟ್ಟಣದಲ್ಲಿ ಈಗಾಗಲೇ ಯುದ್ಧ ವಿಮಾನ ಪ್ರದರ್ಶನಾಲಯವಿದೆ. ನಗರದಲ್ಲೂ ಪ್ರದರ್ಶನಾಲಯ ಆರಂಭವಾದರೆ ವಿಶಾಖಪಟ್ಟಣದ ಜತೆಗೆ ಕಾರವಾರಕ್ಕೂ ಯುದ್ಧ ವಿಮಾನ ಪ್ರದರ್ಶನಾಲಯ ಇರುವ ನೌಕಾನೆಲೆ ಎಂಬ ಹೆಗ್ಗಳಿಕೆ ದಕ್ಕಲಿದೆ.

ಈಗಾಗಲೇ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಚಾಪೆಲ್‌ ಯುದ್ಧ ನೌಕೆ ಸಂಗ್ರಹಾಲಯ ಅಸ್ತಿತ್ವ ಕಂಡಿದ್ದು, ಅದರ ಪಕ್ಕದಲ್ಲೇ ಟಪಲೋವ್‌ ಯುದ್ಧ ವಿಮಾನ ಪ್ರದರ್ಶನಾಲಯ ನಿರ್ಮಾಣ ಉದ್ದೇಶ ಜಿಲ್ಲಾಡಳಿತದ್ದು. ಪ್ರಸಕ್ತ ವರ್ಷ ನೌಕಾ ದಿನಾಚರಣೆ ಒಳಗೆ ಪ್ರದರ್ಶನಾಲಯ ಪ್ರಾರಂಭಿಸಲು ಬೆಕೆನ್ನುವ ಗುರಿ ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ.
 

Latest Videos
Follow Us:
Download App:
  • android
  • ios