ಎಂ.ಅಫ್ರೋಜ್ ಖಾನ್‌

 ರಾಮ​ನ​ಗರ (ನ.03):  ಹಾಲಿ ಮತ್ತು ಮಾಜಿ ಶಾಸ​ಕರ ಪ್ರತಿ​ಷ್ಠೆ​ಯಿಂದಾಗಿ ಕುತೂ​ಹಲ ಕೆರ​ಳಿ​ಸಿ​ರುವ ನ. 5ರಂದು ನಡೆ​ಯುವ ಬಿಡದಿ ಪುರ​ಸಭೆ ಅಧ್ಯಕ್ಷ -ಉಪಾ​ಧ್ಯಕ್ಷ ಸ್ಥಾನ ಚುನಾ​ವಣೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಸದ​ಸ್ಯ​ರಿಗೆ ನೀಡಿ​ರುವ ವ್ಹಿಪ್‌ ಅನ್ನೇ ವ್ಯರ್ಥ​ಗೊ​ಳಿ​ಸಲು ಜೆಡಿ​ಎಸ್‌ ರಣ​ತಂತ್ರ ರೂಪಿ​ಸುತ್ತಿ​ದೆ.

ಪುರ​ಸ​ಭೆ​ಯಲ್ಲಿ ಬಿಸಿಎ - ಮಹಿ​ಳೆಗೆ ಮೀಸ​ಲಾ​ಗಿ​ರುವ ಅಧ್ಯಕ್ಷ ಸ್ಥಾನಕ್ಕೆ ಜೆಡಿ​ಎಸ್‌ನಿಂದ ಸರ​ಸ್ವತಿ, ಕಾಂಗ್ರೆಸ್‌ನಲ್ಲಿ ಚಂದ್ರ​ಕಲಾ ನಾಗೇಶ್‌ ಆಕಾಂಕ್ಷಿ​ಗ​ಳಾ​ಗಿ​ದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸ​ಲಾ​ಗಿ​ರುವ ಉಪಾ​ಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ​ತರ ಸಂಖ್ಯೆ ಹೆಚ್ಚಾ​ಗಿರುವ ಕಾರಣ ಯಾರ ಹೆಸರು ಅಂತಿ​ಮ​ಗೊಂಡಿ​ಲ್ಲ. ಆದರೆ, ಪುರ​ಸಭೆ ಅಧಿ​ಕಾರ ಹಿಡಿ​ಯುವ ನಿಟ್ಟಿ​ನಲ್ಲಿ ಕಾಂಗ್ರೆಸ್‌ ಪಕ್ಷ ತನ್ನ 11 ಮಂದಿ ಸದ​ಸ್ಯ​ರಿಗೆ ವ್ಹಿಪ್‌ ಜಾರಿ ಮಾಡಿದೆ. ಆದರೂ ಶಾಸಕ ಎ. ಮಂಜು​ನಾಥ್‌ ಅವ​ರೊಂದಿಗೆ ಗುರು​ತಿ​ಸಿ​ಕೊಂಡಿ​ರುವ ಕೈ ಸದ​ಸ್ಯರು ಜೆಡಿ​ಎಸ್‌ ಸದ​ಸ್ಯ​ರೊಂದಿಗೆ ಪ್ರವಾ​ಸಕ್ಕೆ ತೆರ​ಳಿ​ದ್ದಾ​ರೆ.

ಇದೆಂತಾ ನಾಚಿಕೆಗೇಡು : ಮತ್ತೆ ಸಿಟ್ಟಾದ ಎಚ್‌.ಡಿ. ರೇವಣ್ಣ ..

ಕಾಂಗ್ರೆಸ್‌ ಪಕ್ಷ ನೀಡಿ​ರುವ ವ್ಹಿಪ್‌ ಸದ​ಸ್ಯ​ರಿಗೆ ಅನ್ವ​ಯವೇ ಆಗ​ದಂತೆ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ತೂಗು​ಕತ್ತಿಯಿಂದ ಬಚಾವ್‌ ಮಾ​ಡುವ ನಿಟ್ಟಿ​ನಲ್ಲಿ ಜೆಡಿ​ಎಸ್‌ ಶಾಸಕ ಎ.ಮಂಜು​ನಾಥ್‌, ಕಾಂಗ್ರೆಸ್‌ನ ಮತ್ತಷ್ಟುಸದ​ಸ್ಯ​ರನ್ನು ಸೆಳೆ​ಯುವ ಪ್ರಯತ್ನಕ್ಕೆ ಕೈ ಹಾಕಿ​ದ್ದಾರೆ.

3/2 ಭಾಗ​ದಷ್ಟುಸದ​ಸ್ಯರ ಪಕ್ಷಾಂತರ ಅಗ​ತ್ಯ:

ಸ್ಥಳೀಯ ಸಂಸ್ಥೆ​ಗಳ ಅಧ್ಯಕ್ಷ - ಉಪಾ​ಧ್ಯ​ಕ್ಷರ ಚುನಾ​ವ​ಣೆ​ಯಲ್ಲಿ ಸದ​ಸ್ಯ​ರಿಗೆ ಜಾರಿ ಮಾಡಿದ ವ್ಹಿಪ್‌ ಅನ್ವ​ಯ​ವಾ​ಗ​ಬಾ​ರದು ಎನ್ನುವು​ದಾ​ದರೆ ಮೂರನೇ ಎರಡು (3/2)ಭಾಗ​ದಷ್ಟುಸದ​ಸ್ಯರು ಪಕ್ಷಾಂತರ ಮಾಡ​ಬೇಕು. ಆಗ ಅವ​ರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕ​ರಣ ದಾಖ​ಲಿ​ಸಲು ಅವ​ಕಾಶ ಇರು​ವು​ದಿಲ್ಲ. ಈಗ ಪುರ​ಸ​ಭೆಯ 11 ಮಂದಿ ಕಾಂಗ್ರೆಸ್‌ ಸದ​ಸ್ಯರ ಪೈಕಿ (ಮಂಗ​ಳಮ್ಮ, ಟಿ.ಕು​ಮಾರ್‌ , ಬಿ.ಎಂ.ರಮೇಶ್‌ ಕುಮಾರ್‌, ಆರ್‌. ದೇ​ವ​ರಾಜು, ಬಿ.ಪಿ.​ರಾ​ಕೇಶ್‌ , ಸಿ.ಲೋ​ಕೇಶ್‌) 6 ಮಂದಿ ಜೆಡಿ​ಎಸ್‌ನಲ್ಲಿ ಗುರು​ತಿ​ಸಿ​ಕೊಂಡಿದ್ದರೆ, ಜೆಡಿ​ಎಸ್‌ನ 12 ಸದ​ಸ್ಯರ ಪೈಕಿ (ಬೋ​ರೇ​ಗೌಡ, ಉಮೇಶ್‌, ರಜನಿ )3 ಮಂದಿ ಕಾಂಗ್ರೆಸ್‌ನಲ್ಲಿ ಕಾಣಿ​ಸಿ​ಕೊಂಡಿ​ದ್ದಾರೆ.

ಕಾಂಗ್ರೆಸ್‌ನ ವ್ಹಿಪ್‌ ಅನ್ವ​ಯ​ವಾ​ಗ​ಬಾ​ರದು ಎಂದರೆ 11ರ ಪೈಕಿ ಒಟ್ಟು 8 ಸದ​ಸ್ಯರು ಪಕ್ಷಾಂತರ ಮಾಡ​ಬೇಕು. ಇನ್ನು ಜೆಡಿ​ಎಸ್‌ ಕೂಡ ವ್ಹಿಪ್‌ ಜಾರಿ ಮಾಡುವ ನಿರ್ಧಾ​ರಕ್ಕೆ ಬಂದಿದೆ. ಆ ಪಕ್ಷದ 12ರ ಪೈಕಿ 9 ಸದ​ಸ್ಯರು ಪಕ್ಷಾಂತರ ಮಾಡಿ​ದಾಗ ಮಾತ್ರ ದಳ​ದ ವ್ಹಿಪ್‌ ಪರಿ​ಣಾಮ ಬೀರುವು​ದಿಲ್ಲ. ಇಲ್ಲ​ದಿ​ದ್ದರೆ ಪಕ್ಷಾಂತ​ರಿ​ಗಳ ವಿರುದ್ಧ ಕರ್ನಾ​ಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇ​ಧ ಕಾಯಿದೆ 1987 ಅಡಿ​ಯಲ್ಲಿ ಪ್ರಕ​ರಣ ದಾಖ​ಲಿಸಿ ಆರು ವರ್ಷ​ಗಳ ಕಾಲ ಚುನಾ​ವ​ಣೆ​ಯಲ್ಲಿ ಸ್ಪರ್ಧಿಸ​ದಂತೆ ಮಾಡಲು ಅವ​ಕಾ​ಶ​ಗ​ಳಿವೆ.

ಪುರಸಭೆಯಲ್ಲಿ 11 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ ಸಂಖ್ಯೆ ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿಷತ್‌ ಸದಸ್ಯ ಸಿ.ಎಂ.​ಲಿಂಗ​ಪ್ಪ​ ಸೇರಿ 13ಕ್ಕೆ ಹೆಚ್ಚಳವಾದರೆ, ಜೆಡಿಎಸ್‌ನ ಬಲ 12 ಸದಸ್ಯರ ಜತೆ​ಗೆ ಶಾಸಕ ಎ. ಮಂಜು​ನಾಥ್‌ ಬೆಂಬಲದಿಂದ 13ಕ್ಕೆ ಹೆಚ್ಚಲಿದೆ. ಪುರ​ಸಭೆ ಅಧಿ​ಕಾರ ಕೇವಲ 6ರಿಂದ 8 ತಿಂಗಳು ಮಾತ್ರ ಅಧಿ​ಕಾರ ಉಳಿ​ದಿ​ದೆ. ಪಕ್ಷ​ಕ್ಕಿಂತ ನಾಯಕ ನಿಷ್ಠೆ ತೋರಿ​ಸಿ​ ಲಾಭ ಮಾಡಿ​ಕೊ​ಳ್ಳುವ ನಿರ್ಧಾ​ರಕ್ಕೆ ಬಂದಿ​ರುವ ಉಭಯ ಪಕ್ಷ​ಗಳ ಕೆಲ ಸದ​ಸ್ಯರು ವ್ಹಿಪ್‌ ಉಲ್ಲಂಘಿ​ಸಲೂ ಸಿದ್ದ​ರಾ​ಗುತ್ತಿ​ದ್ದಾರೆ. ಇದೆ​ಲ್ಲ​ದರ ಜತೆಗೆ ಗದ್ದುಗೆ ಹಿಡಿ​ಯಲು ಜೆಡಿ​ಎಸ್‌ ಹಾಗೂ ಕಾಂಗ್ರೆಸ್‌ ತಂತ್ರ ಪ್ರತಿ​ತಂತ್ರ​ಗ​ಳನ್ನು ಹೆಣೆ​ಯು​ತ್ತಿ​ವೆ.

ಕಾಂಗ್ರೆಸ್‌ ಚಿಹ್ನೆಯಲ್ಲಿ ಗೆದ್ದಿ​ರುವ 11 ಸದ​ಸ್ಯ​ರಿಗೆ ಪಕ್ಷದ ಅಭ್ಯ​ರ್ಥಿಗೆ ಮತ ಚಲಾ​ಯಿ​ಸು​ವಂತೆ ವ್ಹಿಪ್‌ ಜಾರಿ ಮಾಡಿ​ದ್ದೇವೆ.​ಎ​ಲ್ಲರು ಪಕ್ಷಕ್ಕೆ ನಿಷ್ಠ​ರಾಗಿ ನಡೆ​ದು​ಕೊ​ಳ್ಳು​ತ್ತಾ​ರೆಂಬ ವಿಶ್ವಾ​ಸ​ವಿದೆ. ಆದಾಗ್ಯೂ ವ್ಹಿಪ್‌ ಉಲ್ಲಂಘನೆ ಮಾಡಿ​ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕ​ರಣ ದಾಖ​ಲಿ​ಸುತ್ತೇವೆ.

-ಗಂಗಾ​ಧರ್‌ ,ಅ​ಧ್ಯ​ಕ್ಷರು, ಜಿಲ್ಲಾ ಕಾಂಗ್ರೆಸ್‌ ಸಮಿತಿ

ನಾನು ಜೆಡಿ​ಎಸ್‌ ಸೇರ್ಪ​ಡೆ​ಯಾದ ನಂತರ ಪುರ​ಸ​ಭೆಯ ಕೆಲ ಕಾಂಗ್ರೆಸ್‌ ಸದ​ಸ್ಯರು ನನ್ನೊಂದಿಗೆ ಬಂದಿ​ದ್ದಾರೆ. ಕಾಂಗ್ರೆಸ್‌ ಸದ​ಸ್ಯ​ರಿಗೆ ವ್ಹಿಪ್‌ ಜಾರಿ ಮಾಡ​ದಂತೆ ಸಂಸದ ಡಿ.ಕೆ.​ಸು​ರೇಶ್‌ ಅವ​ರಲ್ಲಿ ಮನವಿ ಮಾಡು​ತ್ತೇನೆ. ಹಾಗೊಂದು ವೇಳೆ ವ್ಹಿಪ್‌ ನೀಡಿ​ದಲ್ಲಿ ಜೆಡಿ​ಎಸ್‌ ಕೂಡ ವ್ಹಿಪ್‌ ಜಾರಿ ಮಾಡ​ಲಿದೆ.

- ಎ.ಮಂಜು​ನಾಥ್‌ , ಶಾಸ​ಕ