ಮಂಗಳೂರು(ಫೆ.20): ಮಂಗಳೂರು ಜಂಕ್ಷನ್‌ ಹಾಗೂ ಪಣಂಬೂರು ಸ್ಟೇಷನ್‌ ಮಧ್ಯೆ ಹಳಿ ದ್ವಿಗುಣ ಕಾಮಗಾರಿ ಕೆಲಸ ಫೆ.19ರಿಂದ 28ರ ವರೆಗೆ ನಡೆಯಲಿದೆ. ಅದಕ್ಕಾಗಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

22636/22635 ಮಂಗಳೂರು-ಮಡಗಾಂವ್‌-ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಫೆ.28ರಂದು ಹೊರಡುವ ರೈಲು ರದ್ದಾಗಲಿದೆ. ನಂ.21133 ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್‌ ರೈಲು ಫೆ.18ರಿಂದ 27ರ ವರೆಗೆ ಸುರತ್ಕಲ್‌ನಲ್ಲಿ ನಿಲ್ಲಲಿದ್ದು, ಸುರತ್ಕಲ್‌ನಿಂದ ಮಂಗಳೂರು ಜಂಕ್ಷನ್‌ ಮಧ್ಯೆ ರದ್ದಾಗಲಿದೆ.

HIV ಮಕ್ಕಳ ಪಾಲಿನ ‘ಅಮ್ಮ’ ತಬಸ್ಸುಮ್‌..! ಅನಾಥರಾದ ಕಂದಮ್ಮಗಳಿಗೆ ಈಕೆಯೇ ತಾಯಿ

ನಂ.12134 ಮಂಗಳೂರು ಜಂಕ್ಷನ್‌-ಸಿಎಸ್‌ಎಂಟಿ ರೈಲು ಫೆ.19ರಿಂದ 28ರ ವರೆಗೆ ಮಂಗಳೂರು ಜಂಕ್ಷನ್‌-ಸುರತ್ಕಲ್‌ ಮಧ್ಯೆ ರದ್ದಾಗಲಿದ್ದು, ಪ್ರಯಾಣವನ್ನು ಸುರತ್ಕಲ್‌ನಿಂದ ನಿಗದಿತ ವೇಳಾಪಟ್ಟಿಯಂತೆ ಪ್ರಾರಂಭಿಸಲಿದೆ.

ನಂ.70105 ಮಡಗಾಂವ್‌-ಮಂಗಳೂರು ಡೆಮು ರೈಲು ಫೆ.20ರಿಂದ 28ರ ವರೆಗೆ ತೋಕೂರಿನಲ್ಲೇ ಪ್ರಯಾಣ ಕೊನೆಗೊಳಿಸಲಿದ್ದು, ತೋಕೂರು ಮಂಗಳೂರು ಮಧ್ಯೆ ರದ್ದು. ನಂ.70106 ಮಂಗಳೂರು-ಮಡಗಾಂವ್‌ ಡೆಮು ರೈಲು ಮಂಗಳೂರು-ತೋಕೂರು ಮಧ್ಯೆ ರದ್ದಾಗಿದ್ದು, ತೋಕೂರಿನಿಂದ ನಿಗದಿತ ಸಮಯಕ್ಕೆ ಹೊರಡಲಿದೆ.

ಕಾಲ್ನಡಿಗೆಯಲ್ಲಿ ಜಾತ್ರೆಗೆ ಆಗಮನ: ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದ ಭಕ್ತರು

ನಂ.22149 ಎರ್ನಾಕುಳಂ-ಪುಣೆ ಎಕ್ಸ್‌ಪ್ರೆಸ್‌ ಫೆ.28ರ ಸೇವೆ ಎರ್ನಾಕುಳಂನಿಂದ 1 ಗಂಟೆ ತಡವಾಗಿ 6.15ಕ್ಕೆ ಹೊರಡಲಿದೆ. ಫೆ.19ರಂದು 12620 ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ನಲ್ಲಿ 15 ನಿಮಿಷ, 12432 ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಜೋಕಟ್ಟೆಸ್ಟೇಷನ್‌ನಲ್ಲಿ 15 ನಿಮಿಷ, ನಂ.16311 ಶ್ರೀಗಂಗಾನಗರ್‌ ಕೊಚ್ಚುವೇಲಿ ಎಕ್ಸ್‌ಪ್ರೆಸ್‌ 30 ನಿಮಿಷ ಜೋಕಟ್ಟೆಯಲ್ಲಿ ನಿಲ್ಲಲಿದೆ. ಫೆ.20ರಂದು 12620 ಮತ್ಸ್ಯಗಂಧ ಮಂಗಳೂರ ಜಂಕ್ಷನ್‌ನಲ್ಲಿ 15 ನಿಮಿಷ, 22475 ಹಿಸ್ಸಾರ್‌-ಕೊಯಂಬತ್ತೂರು ಎಕ್ಸ್‌ಪ್ರೆಸ್‌ ಜೋಕಟ್ಟೆಯಲ್ಲಿ 30 ನಿಮಿಷ ನಿಲ್ಲಲಿದೆ.

ಫೆ.21ರಂದು 16515 ಯಶವಂತಪುರ ಕಾರವಾರ ರೈಲು 2 ಗಂಟೆ ಕಾಲ ಮಂಗಳೂರು ಜಂಕ್ಷನ್‌ನಲ್ಲಿ ನಿಲ್ಲಲಿದೆ. ಫೆ.23ರಂದು 12432 ರಾಜಧಾನಿ ಎಕ್ಸ್‌ಪ್ರೆಸ್‌ ಜೋಕಟ್ಟೆಯಲ್ಲಿ 15 ನಿಮಿಷ, 24ರಂದು 16515 ಯಶವಂತಪುರ ಕಾರವಾರ ರೈಲು ಮಂಗಳೂರ ಜಂಕ್ಷನ್‌ನಲ್ಲಿ 90 ನಿಮಿಷ ನಿಲ್ಲಲಿದೆ. ಫೆ.25ರಂದು 12432 ರಾಜಧಾನಿ ಜೋಕಟ್ಟೆಯಲ್ಲಿ 25 ನಿಮಿಷ, 26ರಂದು ರಾಜಧಾನಿ ಜೋಕಟ್ಟೆಯಲ್ಲಿ 15 ನಿಮಿಷ ವಿಳಂಬಗೊಳ್ಳಲಿದೆ.

ಮಂಗಳೂರು- ಅಥಣಿ ನೂತನ ನಾನ್‌ ಎಸಿ ಸ್ಲೀಪರ್‌ ಸಾರಿಗೆ ಆರಂಭ

27ರಂದು 22629 ದಾದರ್‌ ತಿರುನಲ್ವೇಲಿ ಎಕ್ಸ್‌ಪ್ರೆಸ್‌ ಜೋಕಟ್ಟೆಯಲ್ಲಿ 90 ನಿಮಿಷ, 16333 ವೆರಾವೆಲ್‌ ತಿರುವನಂತಪುರಂ ಎಕ್ಸ್‌ಪ್ರೆಸ್‌ ಜೋಕಟ್ಟೆಯಲ್ಲಿ 30 ನಿಮಿಷ, ಫೆ.28ರಂದು 22629 ದಾದರ್‌ ತಿರುನಲ್ವೇಲಿ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ನಲ್ಲಿ 30 ನಿಮಿಷ ನಿಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"