ಮಂಗಳೂರು(ಫೆ.20) : ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು- ಅಥಣಿ- ಮಂಗಳೂರು ಮಾರ್ಗದಲ್ಲಿ ನೂತನವಾಗಿ ನಾನ್‌ ಎಸಿ ಸ್ಲೀಪರ್‌ ಸಾರಿಗೆಯನ್ನು ಆರಂಭಿಸಲಾಗಿದೆ.

ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಟು ಉಡುಪಿಗೆ 8 ಗಂಟೆಗೆ ತಲುಪಿ, ಕುಂದಾಪುರ 8.30, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮಾರ್ಗವಾಗಿ ಚಿಕ್ಕೋಡಿಗೆ ಬೆಳಗ್ಗೆ 7 ಗಂಟೆಗೆ ತಲುಪುತ್ತದೆ.

ರಾಮಮಂದಿರ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ದೇಣಿಗೆ

ಅಥಣಿಯಿಂದ ಸಂಜೆ 5.15 ಗಂಟೆಗೆ ಹೊರಟು ಚಿಕ್ಕೋಡಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ಮಂಗಳೂರಿಗೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ಸಾರಿಗೆಗೆ ಅವತಾರ್‌ ವ್ಯವಸ್ಥೆ ಮೂಲಕ ಮುಂಗಡ ಆಸನಗಳನ್ನು ಕಾದಿರಿಸುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

ಪ್ರಯಾಣಿಕರ ಗಮನಕ್ಕೆ: ಶಿವರಾತ್ರಿ ಪ್ರಯುಕ್ತ 300 ಹೆಚ್ಚುವರಿ KSRTC ಬಸ್‌

ಪ್ರಯಾಣ ದರ: ಮಂಗಳೂರು- ಹುಬ್ಬಳ್ಳಿ 560 ರು., ಮಂಗಳೂರು- ಧಾರವಾಡ 600 ರು., ಮಂಗಳೂರು- ಬೆಳಗಾವಿ 700 ರು., ಮಂಗಳೂರು- ಚಿಕ್ಕೋಡಿ 850 ರು., ಮಂಗಳೂರು- ಅಥಣಿ 950 ರುಪಾಯಿ.

#NewsIn100Seconds ಪ್ರಮುಖ ಹೆಡ್‌ಲೈನ್ಸ್

"