ರಾಮನಗರ: ಉರುಳಿಗೆ ಸಿಲುಕಿ ಹೆಣ್ಣು ಕರಡಿ ಮರಿ ಸಾವು

ಗ್ರಾಮದ ಖಾಸಗಿ ಜಮೀನಿನಲ್ಲಿ ಬೇಟೆಗಾರರು ಕಾಡು ಹಂದಿ, ಮೊಲ ಬೇಟೆಯಾಡಲು ಉರುಳು ಹಾಕಿದ್ದ ವೇಳೆ ಆಹಾರ ಅರಸಿ ಬಂದ 8 ತಿಂಗಳ ಹೆಣ್ಣು ಕರಡಿ ಮರಿ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ. ಹರೀಸಂದ್ರ ಅಕ್ಕಪಕ್ಕದ ಅರಣ್ಯ ಪ್ರದೇಶದಲ್ಲಿ ಕರಡಿಗಳು ವಾಸವಾಗಿವೆ. ಜೊತೆಗೆ ಕಾಡುಹಂದಿ, ನವಿಲು, ಚಿರತೆ, ಮೊಲ ಕೂಡ ಇವೆ. ಈ ಪ್ರದೇಶದಲ್ಲಿ ಬೇಟೆಗಾರರು ಹಂದಿ ಬೇಟೆಗೆ ಉರುಳು ಹಾಕುತ್ತಾರೆನ್ನಲಾಗಿದೆ. ಈ ಉರುಳುಗೆ ಕರಡಿ ಮರಿ ಸಿಲುಕಿ ಹೊರ ಬರಲು ಆಗದೆ ನಿತ್ರಾಣಗೊಂಡು ಸಾವನ್ನಪ್ಪಿದೆ.

Female Bear Cub Dies in Ramanagara grg

ರಾಮನಗರ(ಆ.28): ಖಾಸಗಿ ಕರಾಬು ಜಮೀನಿನಲ್ಲಿ ಉರುಳಿಗೆ ಸಿಲುಕಿ 8 ತಿಂಗಳ ಹೆಣ್ಣು ಕರಡಿ ಮರಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹರೀಸಂದ್ರ ಗ್ರಾಮದ ಬಳಿ ಶನಿವಾರ ನಡೆದಿದೆ. ಗ್ರಾಮದ ಖಾಸಗಿ ಜಮೀನಿನಲ್ಲಿ ಬೇಟೆಗಾರರು ಕಾಡು ಹಂದಿ, ಮೊಲ ಬೇಟೆಯಾಡಲು ಉರುಳು ಹಾಕಿದ್ದ ವೇಳೆ ಆಹಾರ ಅರಸಿ ಬಂದ 8 ತಿಂಗಳ ಹೆಣ್ಣು ಕರಡಿ ಮರಿ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ. ಹರೀಸಂದ್ರ ಅಕ್ಕಪಕ್ಕದ ಅರಣ್ಯ ಪ್ರದೇಶದಲ್ಲಿ ಕರಡಿಗಳು ವಾಸವಾಗಿವೆ. ಜೊತೆಗೆ ಕಾಡುಹಂದಿ, ನವಿಲು, ಚಿರತೆ, ಮೊಲ ಕೂಡ ಇವೆ. ಈ ಪ್ರದೇಶದಲ್ಲಿ ಬೇಟೆಗಾರರು ಹಂದಿ ಬೇಟೆಗೆ ಉರುಳು ಹಾಕುತ್ತಾರೆನ್ನಲಾಗಿದೆ. ಈ ಉರುಳುಗೆ ಕರಡಿ ಮರಿ ಸಿಲುಕಿ ಹೊರ ಬರಲು ಆಗದೆ ನಿತ್ರಾಣಗೊಂಡು ಸಾವನ್ನಪ್ಪಿದೆ.

ಕರಡಿ ಮರಿ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ವಿಷಯವನ್ನು ಶನಿವಾರ ಬೆಳಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ದಿನೇಶ್‌ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಉರುಳಿನಿಂದ ಕರಡಿ ಮರಿ ಬೇರ್ಪಡಿಸಿ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದ ವೈದ್ಯ ಡಾ. ಉಮಾಶಂಕರ್‌ರಿಂದ ಮರಣೋತ್ತರ ಪರೀಕ್ಷೆ ನಡೆಸಿದರು.

ರಾಮನಗರ: ಮಾಗಡೀಲಿ ಒಂಟಿ ಸಲಗ ಓಡಾಟ , ಜನರ ಪೇಚಾಟ..!

ಕರಡಿ ಉರುಳಿನಿಂದ ಸತ್ತಿರುವ ಕಾರಣ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿಸಿ ನಂತರ ಸ್ಥಳದಲ್ಲೇ ಕರಡಿ ಕಳೇಬರವನ್ನು ಸುಡಲಾಯಿತು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಾಸು ಮತ್ತು ಅರಣ್ಯ ರಕ್ಷಕ ಮಂಜು ಇದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ:

ಬೇಟೆಗಾರರು ಜಮೀನುಗಳ ಬಳಿ ಉರುಳು ಹಾಕಿ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಇದರಿಂದ ಅನೇಕ ಕಾಡು ಪ್ರಾಣಿಗಳ ಪ್ರಾಣಕ್ಕೆ ತೊಂದರೆ ಉಂಟಾಗುತ್ತಿದೆ. ಉರುಳು ಹಾಕುವವರು ಕಂಡುಬಂದರೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯಾಧಿಕಾರಿ ದಿನೇಶ್‌ ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios