Asianet Suvarna News Asianet Suvarna News

ರಾಮನಗರ: ಮಾಗಡೀಲಿ ಒಂಟಿ ಸಲಗ ಓಡಾಟ , ಜನರ ಪೇಚಾಟ..!

ಬೆಳಗುಂಬದಿಂದ ರಾತ್ರಿ ಪಟ್ಟಣದ ಎನ್‌ಇಎಸ್‌ ಬಡಾವಣೆ ಹಾಗೂ ತಿರುಮಲೆ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ 2ರ ಸಮಯದಲ್ಲಿ ಆನೆ ಓಡಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ​ಯಾಗಿತ್ತು. ಜೊತೆಗೆ ಗ್ರಾಮಸ್ಥರು ಕೂಡ ಆನೆಯನ್ನು ನೋಡಿ ಭಯ ಪಡುವಂತಾಗಿದೆ. ಎನ್‌ಇಎಸ್‌ ಬಡಾವಣೆಯ ಜೂನಿಯರ್‌ ಕಾಲೇಜು ಗೇಟ್‌ನ್ನು ಮುರಿದು ಆರ್ಭಟ ಮಾಡಿದ್ದು, ರಾತ್ರಿಯಿಂದ ಆನೆ ಹಿಮ್ಮಟ್ಟಿಸಲು ಹರಸಹಾಸ ಪಟ್ಟಿದ್ದಾರೆ.

People Faces Problems for Elephant at Magadi in Ramanagara grg
Author
First Published Aug 26, 2023, 11:00 PM IST

ಮಾಗಡಿ(ಆ.26): ಇದೇ ಮೊದಲ ಮಾಗಡಿ ಪಟ್ಟಣಕ್ಕೆ ಒಂಟಿ ಸಲಗ ಬಂದಿದ್ದು ಜನರಲ್ಲಿ ಆತಂಕ ಮೂಡುವಂತೆ ಆಗಿತ್ತು. ಗುರುವಾರ ತಾಲೂಕಿನ ಬೆಳಗುಂಬದ ಕಾಡಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿತ್ತು. ಸಲಗ ಓಡಾಟದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ವಾಟ್ಸಪ್‌ನಲ್ಲಿ ಹಾಕಲಾಗಿತ್ತು. 

ಬೆಳಗುಂಬದಿಂದ ರಾತ್ರಿ ಪಟ್ಟಣದ ಎನ್‌ಇಎಸ್‌ ಬಡಾವಣೆ ಹಾಗೂ ತಿರುಮಲೆ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ 2ರ ಸಮಯದಲ್ಲಿ ಆನೆ ಓಡಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ​ಯಾಗಿತ್ತು. ಜೊತೆಗೆ ಗ್ರಾಮಸ್ಥರು ಕೂಡ ಆನೆಯನ್ನು ನೋಡಿ ಭಯ ಪಡುವಂತಾಗಿದೆ. ಎನ್‌ಇಎಸ್‌ ಬಡಾವಣೆಯ ಜೂನಿಯರ್‌ ಕಾಲೇಜು ಗೇಟ್‌ನ್ನು ಮುರಿದು ಆರ್ಭಟ ಮಾಡಿದ್ದು, ರಾತ್ರಿಯಿಂದ ಆನೆ ಹಿಮ್ಮಟ್ಟಿಸಲು ಹರಸಹಾಸ ಪಟ್ಟಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದರೋಡೆಯಿಂದ ತಪ್ಪಿಸಿಕೊಳ್ಳಬೇಕೇ? ಈ ನಿಯಮ ಪಾಲಿಸಿ: ಸಂಸದ ಪ್ರತಾಪ್‌ಸಿಂಹ

ಈಗ ಮರಳುಗೊಂಡಲ ಮೂಲಕ ಸಾವನದುರ್ಗ ಅರಣ್ಯದ ಹಂಚಿಕೆ ಆನೆ ಹೋಗಿದ್ದು, ಪಟ್ಟಣದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಒಂದು ವೇಳೆ ರಾತ್ರಿ ಬಂದ ಆನೆ ಬೆಳಗಿನ ಸಮಯದಲ್ಲಿ ಬಂದಿದ್ದರೆ, ಸಾಕಷ್ಟುಆತಂಕ ಸೃಷ್ಟಿಯಾಗಿ ಸಾವು ನೋವು ಸಂಭವಿಸುತ್ತಿತ್ತು. ಅರಣ್ಯ ಇಲಾಖೆಯವರು ಹೇಳುವಂತೆ ಒಂಟಿ ಸಲಗವನ್ನು ನಿಯಂತ್ರಣಕ್ಕೆ ತರುವುದು ಅಸಾಧ್ಯ. ಗುಂಪಿನಲ್ಲಿ ಆನೆಯನ್ನು ಓಡಿಸಬಹುದು, ಒಂಟಿ ಸಲಗ ಓಡಾಡಿದ್ದೆ ದಾರಿಯಾಗುತ್ತದೆ. ರಾತ್ರಿ ಬಂದಿರುವುದರಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

ಇ-ಕೆವೈಸಿ ಮಾಡಿಸದಿದ್ದರೆ ರೆಷನ್‌ ಕಾರ್ಡ್‌ ರದ್ದು

ಆಹಾರ ಅರಸಿ ನಾಡಿಗೆ ಬರುತ್ತಿದೆ:

ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದೆ ಎಂದರೆ ಕಾಡು ಪ್ರಾಣಿಗಳಿಗೆ ಮನುಷ್ಯ ತೊಂದರೆ ಕೊಡುತ್ತಿದ್ದಾನೆ ಎಂಬುದನ್ನು ತಿಳಿಯಬೇಕು. ಕಾಡಂಚಿನಲ್ಲಿ ಈಗ ಗಣಿಗಾರಿಕೆ ಹೆಚ್ಚಾಗಿದ್ದು, ಗಣಿಗಾರಿಕೆಯ ಸ್ಫೋಟಕಗಳಿಂದ ಕಾಡುಪ್ರಾಣಿಗಳಿಗೆ ಸಾಕಷ್ಟುತೊಂದರೆಯಾಗಿ ನಾಡಿನತ್ತ ಬರುತ್ತಿದೆ. ಜೊತೆಗೆ ಆಹಾರ ಇಲ್ಲದೆ ಕಾಡುಪ್ರಾಣಿಗಳು ಪದೇಪದೇ ನಾಡಿನಲ್ಲಿ ದಾಳಿ ಮಾಡುತ್ತಿದ್ದು ನೀರು ಆಹಾರ ಹರಿಸಿ ಕಾಡಿಗೆ ಬರುತ್ತಿದ್ದು ಅರಣ್ಯ ಇಲಾಖೆಯವರು ಕಾಡಿನಂಚಿನಲ್ಲಿ ಕಾಡು ಪ್ರಾಣಿಗಳಿಗಾಗಿ ನೀರಿನ ವ್ಯವಸ್ಥೆಯನ್ನು ಮಾಡಬೇಕು. ನೀರನ್ನು ಸಂಗ್ರಹಿಸುವ ಕೆಲಸ ಮಾಡಿದರೆ ಹೆಚ್ಚು ಕಾಡು ಪ್ರಾಣಿಗಳು ನಾಡಿಗೆ ಬರುವುದಿಲ್ಲ,. ಮಾಗಡಿ ತಾಲೂಕಿನಲ್ಲಿ ಈಗ ಆನೆ ಮತ್ತು ಚಿರತೆಯ ಹಾವಳಿ ಹೆಚ್ಚಾಗಿದ್ದು, ಆತಂಕದಲ್ಲೇ ಕಾಲ ಕಳೆಯುವ ಪರಿಸ್ಥಿತಿಯಾಗಿದೆ. ಅರಣ್ಯ ಇಲಾಖೆ ಕಾಡುಪ್ರಾಣಿಗಳಿಗೆ ಆಹಾರ ನೀರು ಸಿಗುವ ವ್ಯವಸ್ಥೆ ಮಾಡದಿದ್ದರೆ ಈ ದಾಳಿಗಳು ನಿರಂತರವಾಗಿರುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ನಿರಂತರ ಕಾರ್ಯಾ​ಚ​ರ​ಣೆ

ಒಂಟಿ ಸಲಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ 10 ಸಿಬ್ಬಂದಿ ತಂಡ ನಿರಂತರವಾಗಿ ಒಂಟಿ ಸಲಗವನ್ನು ಓಡಿಸುವ ಪ್ರಯತ್ನವನ್ನು ಮಾಡಿದ್ದು ರಾತ್ರಿಯಿಂದ ಇಲ್ಲಿವರೆಗೂ ಕಾರ್ಯಾಚರಣೆ ಮಾಡಿ ಸಾವನದುರ್ಗ ಕಾಡಿನಂಚಿಗೆ ಒಂಟಿ ಸಲಗವನ್ನು ಕಳಿಸಿದ್ದು ಬನ್ನೇರುಘಟ್ಟಕ್ಕೆ ಆನೆಯನ್ನು ಕಳಿಸುವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios