ಮಂಡ್ಯ(ಡಿ.3): ಉಪಚುನಾವಣೆ ಬಹಿರಂಗ ಪ್ರಚಾರ ಕೊನೆಯಾಗುತ್ತಿದ್ದು, 15 ದಿನಗಳಿಂದ ಕ್ಷೇತ್ರದಲ್ಲಿರುವ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಪ್ರಚಾರದ ವೇಳೆ ಭಾವುಕರಾದರು.

ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಪರ ಪ್ರಚಾರ ನಡೆಸಿದ ಅವರು ಈ ಸಂದರ್ಭ ಮಾತನಾಡಿ, ಕಳೆದ 15ದಿನದಿಂದ ಕೆಆರ್ ಪೇಟೆಯಲ್ಲಿದ್ದು ಇಂದು ಸಂಜೆ ಕ್ಷೇತ್ರ ಬಿಟ್ಟು ಹೋಗ್ತಿರೋದಕ್ಕೆ ನೋವಾಗಿದೆ. ಅಭಿವೃದ್ಧಿ ಪರವಾದ ಗಾಳಿ ಕ್ಷೇತ್ರದಲ್ಲಿ ಸುನಾಮಿ ರೀತಿ ಎದ್ದಿದೆ. ಕೆಆರ್ ಪೇಟೆಯಲ್ಲಿ ಈ ಬಾರಿ ಕಮಲ ಅರಳಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹಿರಂಗ ಪ್ರಚಾರ ಕೊನೆ ದಿನ: ಕೆ.ಆರ್‌. ಪೇಟೆಯಲ್ಲಿ ಕಾಂಗ್ರೆಸ್ ಸಭೆ

ಅಭಿವೃದ್ಧಿ ಮತ್ತು ಯಡಿಯೂರಪ್ಪರ ತವರೂರು ಎಂಬ ಭಾವನಾತ್ಮಕ ಸಂಬಂಧ ನಮ್ಮ‌ ಕೈಹಿಡಿಯಲಿದೆ. ಕ್ಷೇತ್ರದ ಅಭಿವೃದ್ಧಿ ಕನಸು ಯಡಿಯೂರಪ್ಪ ಅವರದ್ದು. ಈ ಕ್ಷೇತ್ರದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ, ಕಾಂಗ್ರೆಸ್-ಜೆಡಿಎಸ್ ನಿಂದ ಅಲ್ಲ ಎಂದು ಹೇಳಿದ್ದಾರೆ.

ಈ ಬಾರಿ ರಾಜಕೀಯ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವಂತ ಗೆಲುವು ನಮ್ಮದಾಗಲಿದೆ. ಚುನಾವಣೆ ಮುಗಿದ ಮೇಲೆ ನಾರಾಯಣಗೌಡರನ್ನ ಮಂತ್ರಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ನಾನು ಅವರ ಜೊತೆಗಿರುತ್ತೇನೆ. ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿದ ನಮ್ಮ‌ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಅಭಿನಂದನೆ ಎಂದಿದ್ದಾರೆ.

ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕುವವರನ್ನು ತಿರಸ್ಕರಿಸಿ: ಎಚ್‌ಡಿಕೆ

ಪಕ್ಷ, ಜಾತಿ ಎಲ್ಲವನ್ನು ಮೀರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟು ಇದೊಂದು ಬಾರಿ ಬಿಜೆಪಿಗೆ ಮತ ನೀಡಿ ಎಂದು ವಿಜಯೇಂದ್ರ ಮತದಾರರಲ್ಲಿ ಮನವಿ ಮಾಡಿದ್ದಾರೆ.