ಕೊಡಗಿನಲ್ಲಿ ಬೆಟ್ಟ ಕುಸಿಯುವ ಆತಂಕ: ತೋರಾ ಗ್ರಾಮದ 20 ಕುಟುಂಬಗಳಿಗೆ ನೋಟಿಸ್!
ಹಸಿರು ಬೆಟ್ಟಗುಡ್ಡಗಳನ್ನು ಹೊದ್ದಿರುವ ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಮೂರು ವರ್ಷಗಳ ಕಾಲ ಸಂಭವಿಸಿದ ಭೂಕುಸಿತ, ಜಲಸ್ಫೋಟ ಮತ್ತು ಪ್ರವಾಹಗಳನ್ನು ನೆನಪಿಸಿಕೊಂಡರು ಕನಸ್ಸಿನಲ್ಲಿಯೂ ಕೊಡಗಿನ ಜನರು ಬೆಚ್ಚಿ ಬೀಳುತ್ತಾರೆ.
ವರದಿ: ರವಿ.ಎಸ್.ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜೂ.28): ಹಸಿರು ಬೆಟ್ಟಗುಡ್ಡಗಳನ್ನು ಹೊದ್ದಿರುವ ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಮೂರು ವರ್ಷಗಳ ಕಾಲ ಸಂಭವಿಸಿದ ಭೂಕುಸಿತ, ಜಲಸ್ಫೋಟ ಮತ್ತು ಪ್ರವಾಹಗಳನ್ನು ನೆನಪಿಸಿಕೊಂಡರು ಕನಸ್ಸಿನಲ್ಲಿಯೂ ಕೊಡಗಿನ ಜನರು ಬೆಚ್ಚಿ ಬೀಳುತ್ತಾರೆ. ಅಂತಹದ್ದರಲ್ಲಿ ಭೀಕರ ಜಲಸ್ಫೋಟವಾದ ತೋರ, ಮೇಘತಾಳು, ಮೊಣ್ಣಂಗೇರಿ ಸೇರಿದಂತೆ ವಿವಿಧ ಪ್ರದೇಶಗಳ ಸಾವಿರಾರು ಕುಟುಂಬಗಳು ಮಳೆಗಾಲ ಆರಂಭವಾಯಿತ್ತೆಂದರೆ ಇಂದಿಗೂ ಅಲ್ಲಿನ ಜನರ ಎದೆಯಲ್ಲಿ ನಡುಕು ಶುರುವಾಗುತ್ತದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು ಬಿಟ್ಟು, ಬಿಟ್ಟು ಮಳೆ ಸುರಿಯುತ್ತಿದೆ.
ಜುಲೈ ತಿಂಗಳಿನಲ್ಲಿ ಮಳೆ ಮತ್ತಷ್ಟು ತೀವ್ರತೆ ಪಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ಬೃಹತ್ ಪ್ರಮಾಣದ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ಇರುವ ತೋರ ಗ್ರಾಮದ 20 ಕ್ಕೂ ಹೆಚ್ಚು ಕುಟುಂಬಗಳಿಗೆ ಮತ್ತೆ ಇಲ್ಲಿನ ಬೆಟ್ಟಗಳು ಭೂತಗಳಂತೆ ಕಾಡುತ್ತಿವೆ. ಹೌದು 2019 ರಲ್ಲಿ ತೋರದಲ್ಲಿ ಭಾರೀ ಜಲಸ್ಫೋಟವಾಗಿತ್ತು. ಬೆಟ್ಟದ ಬುಡದಲ್ಲಿ ಆದ ಜಲಸ್ಫೋಟವಾದ ಪರಿಣಾಮ ತೋರದಲ್ಲಿ 10 ಜನರು ಜೀವಂತ ಸಮಾಧಿಯಾಗಿದ್ದರು. ಜಾನುಗಳು ಸೇರಿದಂತೆ ಸಾಕು ಪ್ರಾಣಿಗಳು ಕಣ್ಮರೆಯಾಗಿದ್ದವು. ಈ ಭಯಾನಕ ಘಟನೆಯ ಆತಂಕ ಇಂದಿಗೂ ಜನರಲ್ಲಿ ಹಾಗೆಯೇ ಇದೆ. ಇದೀಗ ಮಳೆ ದಿನದದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಮಳೆ ಹೆಚ್ಚಳವಾದಲ್ಲಿ ಜನರು ಇಲ್ಲಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.
Davanagere: ಭದ್ರಾ ಕಾಲುವೆ ದುರಸ್ಥಿಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ
ಇಲ್ಲದಿದ್ದರೆ, ಜಿಲ್ಲಾಡಳಿತದಿಂದ ತೆರೆಯುವ ಕಾಳಜಿ ಕೇಂದ್ರಗಳಿಗೆ ಬರಬೇಕು ಎಂದು ನೋಟಿಸ್ ನೀಡಿದೆ. ಕಳೆದ ಬಾರಿ ಜಲಸ್ಫೋಟವಾಗಿದ್ದ ಸುತ್ತಮುತ್ತ ಇರುವ ಕುಟುಂಬಗಳಿಗೆ ನೋಟಿಸ್ ನೀಡಲಾಗಿದ್ದು ಇದೀಗ ಈ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ. ಬಹುತೇಕ ಮನೆಗಳು ಸಿಮೆಂಟ್ ಇಟ್ಟಿಗೆ ಬಳಸಿ ಮಾಡಿರುವ ಸಾಧಾರಣ ಮನೆಗಳಾಗಿದ್ದು ಏನಾದರೂ ಭೂಕುಸಿತದಂತ ಘಟನೆಗಳು ನಡೆದರೆ ಈ ಮನೆಗಳು ಸುಲಭವಾಗಿ ಕುಸಿದು ಹೋಗುವ ಆತಂಕವಿದೆ ಎನ್ನುತ್ತಾರೆ ಸವಿತಾ. ಮುಂಜಾಗ್ರತೆ ವಹಿಸುವಂತೆ ಇಲಾಖೆ ಅಧಿಕಾರಿಗಳೇನೋ ನೊಟೀಸ್ ನೀಡಿ ಹೋಗಿದ್ದಾರೆ. ಏನಾದರೂ ತೊಂದರೆ ಎದುರಾದಲ್ಲಿ ಕೂಡಲೇ ಕರೆ ಮಾಡಿ ಎಂದು ಪೋನ್ ನಂಬರ್ಗಳನ್ನು ಕೊಟ್ಟಿದ್ದಾರೆ.
ವಿಪರ್ಯಾಸವೆಂದರೆ ಮಳೆ ತೀವ್ರಗೊಂಡಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತೆ ಆಗುತ್ತದೆ. ವಿದ್ಯುತ್ ಸಂಪರ್ಕ ಕಡಿತವಾಯಿತ್ತೆಂದರೆ ಪೋನ್ಗಳಿಗೆ ಯಾವುದೇ ನೆಟ್ವರ್ಕ್ ಇಲ್ಲದಂತೆ ಆಗುತ್ತದೆ. ಇಂತಹ ಸ್ಥಿತಿ ಎದುರಾಯಿತ್ತೆಂದರೆ ನಾವು ಬೇರೆಡೆಗೆ ಸ್ಥಳಾಂತರ ಆಗುವುದಾದರೂ ಹೇಗೆ. ಅಥವಾ ಸಂಬಂಧಿಕರಿಗೋ ಇಲ್ಲ ಸಂಬಂಧಿಸಿದ ಅಧಿಕಾರಿಗಳೋ ಮಾಹಿತಿ ನೀಡುವುದಾದರೂ ಹೇಗೆ ಎಂದು 2019 ರಲ್ಲಿ ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡ ಪ್ರಭುಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ. ನಮ್ಮ ಮಕ್ಕಳು 15 ಕಿಲೋ ಮೀಟರ್ ದೂರದಲ್ಲಿರುವ ವಿರಾಜಪೇಟೆ ಶಾಲೆಗೆ ಹೋಗುತ್ತಾರೆ.
ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ಜಿಲ್ಲೆಯಲ್ಲಿ ಮಳೆ ತೀವ್ರಗೊಂಡು ರಜೆ ಘೋಷಣೆಯಾದರು ನಮಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ವಿರಾಜಪೇಟೆಗೆ ಹೋಗಿ ಶಾಲೆಯಿಂದಲೇ ಮಾಹಿತಿ ಪಡೆದುಕೊಂಡು ವಾಪಸ್ ಬರಬೇಕಾದ ದುಃಸ್ಥಿತಿ ಇಲ್ಲಿಯದ್ದು. ವಿದ್ಯುತ್ ಕಡಿತವಾಯಿತ್ತೆಂದರೆ ನೆಟ್ವರ್ಕ್ ಗಳಿಗೆ ಬೇಕಾಗಿರುವ ವಿದ್ಯುತ್ತಿಗಾಗಿ ಕನಿಷ್ಠ ಡೀಸೆಲ್ ವ್ಯವಸ್ಥೆಯನ್ನಾದರೂ ಮಾಡಲಿ ಎನ್ನುವುದು ಜನರ ಒತ್ತಾಯ. ಒಟ್ಟಿನಲ್ಲಿ 2019 ರಲ್ಲಿ ಜಲಸ್ಫೋಟವಾಗಿದ್ದ ತೋರದಲ್ಲಿ 20 ಕ್ಕೂ ಹೆಚ್ಚು ಮನೆಗಳಿಗೆ ವಿರಾಜಪೇಟೆ ತಾಲ್ಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದು, ಮಳೆ ಹೆಚ್ಚಿದಂತೆಲ್ಲಾ ಜನರು ಆತಂಕಗೊಳ್ಳುವಂತೆ ಆಗಿದೆ.