Davanagere: ಭದ್ರಾ ಕಾಲುವೆ ದುರಸ್ಥಿಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ
ತಾಲ್ಲೂಕಿನ ಕುರ್ಕಿ ಭಾಗದ ಹೈ ಲೆವೆಲ್ ಚಾನಲ್ ದುರಸ್ತಿಗೊಳಿಸುವುದು ಮತ್ತು ನಾಲೆಗಳ ಹೂಳು ತೆಗೆಯಲು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರುಸೇನೆ ಹುಚ್ಚವ್ವನಹಳ್ಳ ಮಂಜುನಾಥ್ ಬಣದಿಂದ ಬುಧವಾರ ನಗರದ ಹದಡಿ ರಸ್ತೆಯಲ್ಲಿರುವ ನೀರಾವರಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜೂ.28): ತಾಲ್ಲೂಕಿನ ಕುರ್ಕಿ ಭಾಗದ ಹೈ ಲೆವೆಲ್ ಚಾನಲ್ ದುರಸ್ತಿಗೊಳಿಸುವುದು ಮತ್ತು ನಾಲೆಗಳ ಹೂಳು ತೆಗೆಯಲು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರುಸೇನೆ ಹುಚ್ಚವ್ವನಹಳ್ಳ ಮಂಜುನಾಥ್ ಬಣದಿಂದ ಬುಧವಾರ ನಗರದ ಹದಡಿ ರಸ್ತೆಯಲ್ಲಿರುವ ನೀರಾವರಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಭದ್ರಾನಾಲಾ 7 ನೇ ವಿಭಾಗದಲ್ಲಿ ಕಾಲುವೆಗಳಲ್ಲಿ ಸಾಕಷ್ಟು ತೊಂದರೆಗಳಿದ್ದು ಇವುಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕೆಂದು ಆಗ್ರಹಿಸಿದರು.
ಚಿಕ್ಕತೋಗಲೇರಿಯಿಂದ ಕುಕ್ಕವಾಡ ಗ್ರಾಮದವರೆಗೆ ಕೋಲ್ ಕುಂಟೆ,ಯರವನಾಗತಿಹಳ್ಳಿ, ಕಲ್ಕೆರೆ, ಕುಕ್ಕವಾಡ, ಗೋಪನಾಳು ಗ್ರಾಮದ ಮಧ್ಯೆ ಹರಿಯುವ 7 ನೇ ವಿಭಾಗದ ಕಾಲುವೆಗಳಲ್ಲಿ ಬರುವ ಸಣ್ಣ ಗೇಟುಗಳಾದ ಲೋಕಿಕೆರೆ, ಯರವನಾಗತಿಹಳ್ಳಿ, ಕೋಲ್ಕುಂಟೆ ಸಣ್ಣ ಗೇಟುಗಳ ಶಿಥಿಲಗೊಂಡು ನೀರು ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ಅಚ್ಚುಕಟ್ಟ ಭಾಗದ ರೈತರಿಗೆ ನೀರು ತಲುಪದೇ ಸಾಕಷ್ಟು ಸಮಸ್ಯೆಗಳಾಗಿವೆ ಎಂದರು.
ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ಕುರ್ಕಿ ಎಡದಂಡೆ ಮತ್ತು ಬಲದಂಡೆ ದೊಡ್ಡ ಕಾಲುವೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಮುಂದೆ ಹೋಗುತ್ತಿಲ್ಲ. ಇದರಿಂದ ಕೂಡ ಮೇಲ್ಭಾಗದ ರೈತರಿಗೆ ತೊಂದರೆಯಾಗಿದೆ. ಹೊಸ ಪೈಪುಗಳನ್ನು ಹಾಕಿ ಸದರಿ ಚಾನಲ್ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಮುಂದಿನ 15 ದಿನಗಳಲ್ಲಿ ಬೇಡಿಕೆಗಳು ಈಡೇರದೆ ಹೋದಲ್ಲಿ ಕೈದಾಳೆ ರಸ್ತೆಯಲ್ಲಿ ಬೃಹತ್ ರಸ್ತೆ ತಡೆ ಚಳುವಳಿ ಮತ್ತು ಲೋಕಿಕೆರೆ ರಸ್ತೆಯಲ್ಲಿ ಯರನಾಗತಿಹಳ್ಳಿ ರಸ್ತೆ ಬಂದ್, ಕುರ್ಕಿ ಗ್ರಾಮದಲ್ಲಿ ಬೀರೂರು- ಬಾಡ ರಸ್ತೆಯನ್ನು ಬಂದ್ ಮಾಡುವ ಚಳುವಳಿಯನ್ನು ಏಕ ಕಾಲಕ್ಕೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
Chamarajanagar: ಬಂಡೀಪುರ ದಿನಗೂಲಿ ನೌಕರರಿಗೆ ಸಂಬಳ ಬಂತು!
ಮನವಿ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಮನೋಜ್ ಮಾತನಾಡಿ,ಕಳೆದ ವರ್ಷ ಸರ್ಕಾರದಿಂದ ನಾಲಾ ದುರಸ್ತಿಗೆ ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲದಿರುವುದೇ ಈ ಸಮಸ್ಯೆಗಳಿಗೆ ಮೂಲಕಾರಣ. ಕಳೆದ ಅನೇಕ ವರ್ಷಗಳಿಂದ ನಾಲೆ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆ.ಎಸ್.ಬಸವಂತಪ್ಪ ಅವರಿಗೂ ಮನವಿ ಮಾಡಲಾಗಿದೆ ಎಂದರು.ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಈ ಸಂಬಂಧ ಇಂದು ಸಭೆ ಕರೆದಿದ್ದು, ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದು ಅನುದಾನ ಬಿಡುಗಡೆಗೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಇಲಾಖೆ ಅಭಿಯಂತರ ಹೇಳಿದರು.