ಯಲ್ಲಾಪುರ(ಸೆ.30): ಟ್ಯಾಂಕರ್‌ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಅರಬೈಲ್‌ ಬಳಿ ಮಂಗಳವಾರ ಸಂಭವಿಸಿದೆ. ಮೃತಪಟ್ಟವರನ್ನು ಯಲ್ಲಾಪುರ ಅಗ್ನಿಶಾಮಕ ದಳದ ಅಧಿಕಾರಿ ವಿನೋದ ಕಿಂದರ್‌ಕರ್‌ (57) ಹಾರವಾಡ ಹಾಗೂ ಆತನ ಪುತ್ರಿ ಸುನೇಹಾ ವಿನೋದ ಕಿಂದರ್‌ಕರ್‌ (13) ಎಂದು ಗುರುತಿಸಲಾಗಿದೆ.

ಸೆ. 28ರಂದು ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸಿ, ಅಂಕೋಲಾ ತಾಲೂಕಿನ ಹಾರವಾಡದ ತನ್ನ ಮನೆಗೆ ಸ್ಕೂಟಿಯಲ್ಲಿ ಹೋಗುವಾಗ ಎದುರಿನಿಂದ ಬಂದ ಟ್ಯಾಂಕರ್‌ ಡಿಕ್ಕಿ ಹೊಡೆದು, ಈ ದುರ್ಘಟನೆ ಸಂಭವಿಸಿದೆ. ಘಟನೆಯ ಸ್ಥಳದಲ್ಲಿ ಸುನೇಹಾ ಮೃತದೇಹ ತುಂಡಾಗಿ ಬಿದ್ದಿದ್ದು, ಭೀಕರ ದೃಶ್ಯ ಮನಕಲಕುವಂತಿತ್ತು. ಕೆಲಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾಕ್ಕೆ ತೊಂದರೆ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರವಾರ: ಇನ್ನೂ ಕನಸಾಗಿಯೇ ಉಳಿದ ಅಂಕೋಲಾ ಸಬ್‌ಜೈಲ್‌!

ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಹೊಂಡ-ಗುಂಡಿಗಳಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದೆ. ಇದರಿಂದಾಗಿ ಕಳೆದ ಒಂದು ವಾರದಲ್ಲೇ ಮೂರು ಪ್ರತ್ಯೇಕ ಅಪಘಾತಗಳಲ್ಲಿ 7 ಜನ ಮೃತಪಟ್ಟ ಸಂಗತಿ ಕಳವಳಕಾರಿಯಾಗಿದೆ.