ಚಿಕ್ಕಮಗಳೂರಿಂದ ತಿರುಪತಿಗೆ ಶೀಘ್ರ ರೈಲ್ವೆ ಸಂಪರ್ಕ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ರಾಷ್ಟ್ರೀಯ ಹೆದ್ದಾರಿಗಳನ್ನು ಸಬಲೀಕರಣ ಮಾಡುವುದು ನನ್ನ ಪ್ರಮುಖ ಉದ್ದೇಶ. ಚಿಕ್ಕಮಗಳೂರು-ಬೆಂಗಳೂರು ನಡುವಿನ ರೇಲ್ವೇ ಸಂಪರ್ಕ ಮತ್ತಷ್ಟು ಸರಳವಾಗಿ ಜನರಿಗೆ ತಲುಪುವಂತೆ ಮಾಡುವುದು ನಮ್ಮ ಮುಂದಿದೆ. ಸ್ವಲ್ಪ ದಿನಗಳ ನಂತರ ನನ್ನ ಕಾರ್ಯ ಯೋಜನೆ ಚೌಕಟ್ಟು ಜನರಿಗೆ ತಿಳಿಯಲಿದೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ 

Fast Railway Connectivity from Chikkamagaluru to Tirupati Says MP Kota Shrinivas Poojari

ಬಾಳೆಹೊನ್ನೂರು(ಜ.09):  ಚಿಕ್ಕಮಗಳೂರು-ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಲು ರೈಲ್ವೆ ಸಚಿವರನ್ನು ಕೇಳಿದ್ದು, ಅದು ಶೀಘ್ರದಲ್ಲಿ ಸಾಕಾರಗೊಳ್ಳಲಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ರಾಷ್ಟ್ರೀಯ ಹೆದ್ದಾರಿಗಳನ್ನು ಸಬಲೀಕರಣ ಮಾಡುವುದು ನನ್ನ ಪ್ರಮುಖ ಉದ್ದೇಶ. ಚಿಕ್ಕಮಗಳೂರು-ಬೆಂಗಳೂರು ನಡುವಿನ ರೇಲ್ವೇ ಸಂಪರ್ಕ ಮತ್ತಷ್ಟು ಸರಳವಾಗಿ ಜನರಿಗೆ ತಲುಪುವಂತೆ ಮಾಡುವುದು ನಮ್ಮ ಮುಂದಿದೆ. ಸ್ವಲ್ಪ ದಿನಗಳ ನಂತರ ನನ್ನ ಕಾರ್ಯ ಯೋಜನೆ ಚೌಕಟ್ಟು ಜನರಿಗೆ ತಿಳಿಯಲಿದೆ ಎಂದು ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

817 ಜನರು ಸರ್ಫೇಸಿ ಕಾಯ್ದೆಯಲ್ಲಿ ಸುಸ್ತಿಯಾದವರು ತಮ್ಮ ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ಇತ್ತು. ಈ ಬಗ್ಗೆ ನಾನು ಸಂಸತ್ತಿನಲ್ಲಿ ಪ್ರಶ್ನಿಸಿದಾಗ ವಾಣಿಜ್ಯ ಸಚಿವರು ಕಾಫಿ ಬೆಳೆ ಕೃಷಿ ರೀತಿಯಲ್ಲಿಯೇ ಇರುವುದರಿಂದ ಸರ್ಫೇಸಿ ಇದಕ್ಕೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ರಾಜ್ಯದ ಕಾಫಿ ಬೆಳೆಗಾರರಿಗೆ ಅನುಕೂಲವಾಗಿದೆ.

ಪ್ರಧಾನಿಯಿಂದ ಕ್ಷೇತ್ರದ ಜನರ ಚಿಕಿತ್ಸೆಗೆ ಅರ್ಧ ಕೋಟಿ ಹಣ ತಂದ ಸಂಸದ ಕೋಟಾ!

ಕಾಫಿ ಬೆಳೆ ಸಾಲಕ್ಕೆಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಒನ್ ಟೈಮ್ ಸೆಟ್ಲಮೆಂಟ್‌ಗೆ ಅವಕಾಶ, 6 ತಿಂಗಳ ಕಾಲ ಸಾಲ ಮುಂದೂಡುವಂತೆ ಮಾಡಿದ ಮನವಿಗೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಹತ್ತಾರು ಲಕ್ಷ ರು.ಗಳ ವಿನಾಯಿತಿ ಪ್ರಕಟಿಸಿದ್ದಾರೆ ಎಂದರು.

ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಅಧ್ಯಯನ ನಡೆದಿದ್ದು ಈ ಬೆಳೆಗಾರರ ಸಭೆ ಕರೆಯುತ್ತಿದ್ದೇನೆ. ಕೇಂದ್ರ, ರಾಜ್ಯ ಸರ್ಕಾರ ಅಧ್ಯಯನ ಮಾಡಿ ಅಡಕೆ ಆಹಾರವೇ ಹೊರತು ಅದು ವಿಷಯುಕ್ತವಲ್ಲ ಎಂದು ಹೇಳಿರುವ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅವರ ಬೆಳೆಗಾರರ ಸಮಸ್ಯೆ ಪರಿಹರಿಸಲಾಗುವುದು. ರಾಜ್ಯ ಸರ್ಕಾರ ಯಾವ ಅಂಶಗಳನ್ನು ಮುಂದಿಟ್ಟುಕೊಂಡು ಅಡಕೆ ಬೆಳೆ ಅಭಿವೃದ್ಧಿ ಕುರಿತು ಕೇಂದ್ರಕ್ಕೆ ₹235 ಕೋಟಿ ವೆಚ್ಚದ ವರದಿ ನೀಡಿದೆ ಗೊತ್ತಿಲ್ಲ. ಇದರಲ್ಲಿ ರಾಜ್ಯದ 60:40 ಅಥವಾ 50:50ರ ಸಹಭಾಗಿತ್ವ ಪಡೆದು ಮಂಜೂರು ಮಾಡಬೇಕಾದರೆ ಮಾಡಲಾಗುವುದು ಎಂದರು.

ಜಲಜೀವನ್ ಮಿಷನ್‌ಗೆ ಸುಮಾರು ₹72 ಸಾವಿರ ಕೋಟಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವ ಇದೆ. ರಾಜ್ಯದ ಕೆಲವು ಕಡೆಗಳಲ್ಲಿ ನಲ್ಲಿಗಳನ್ನು ಅಳವಡಿಸಿದ್ದು. ಕೆಲವು ಕಡೆಗಳಲ್ಲಿ ಪೈಪ್‌ಲೈನ್, ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದೆ. ಇನ್ನು ಕೆಲವೆಡೆ ಜಲ ಮೂಲಗಳನ್ನು ಹುಡುಕುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಯೊಂದಿಗೆ ಸಭೆ ನಡೆಸಿದ್ದು, ಎಂಜಿನಿಯರ್‌, ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಬಂದಿದೆ. ಇನ್ನು ಮುಂದೆ ಎಂಜಿನಿಯರ್, ಗುತ್ತಿಗೆದಾರರು ಯೋಜನೆ ಅನುಷ್ಠಾನಕ್ಕೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಕ್ರಿಮಿನಲ್ ದಾವೆ ಹೂಡಲು ಶಿಫಾರಸ್ಸು ಮಾಡುವುದಾಗಿ ತಿಳಿಸಲಾಗಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ 217 ಬಿಎಸ್‌ಎನ್‌ಎಲ್ ಟವರ್‌ಗಳು 3ಜಿ ಯಾಗಿದ್ದು ಸುಮಾರು 100ಕ್ಕೂ ಅಧಿಕ ಟವರ್‌ ಗಳು 4ಜಿ ಇವೆ. 28 ಹೊಸ ಟವರ್‌ಗಳು ಮಂಜೂರಾಗಿದೆ. ಈಗಾಗಲೇ 17 ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನೂ 30 ಹೊಸ ಟವರ್‌ಗೆ ಬೇಡಿಕೆ ಬಂದಿದೆ. 6 ತಿಂಗಳಲ್ಲಿ ಬಹಳಷ್ಟು ಸುಧಾರಣೆ ನಿರೀಕ್ಷೆಯಿದೆ. ಈ ಹಿಂದೆ ನಿತ್ಯವೂ 600-700 ಸಿಮ್‌ ಗಳು ಬಿಎಸ್‌ಎನ್‌ಎಲ್‌ನಿಂದ ಬೇರೆ ಕಂಪೆನಿಗೆ ವರ್ಗಾವಣೆ ಯಾಗುತ್ತಿದ್ದವು. ಆದರೆ ಈಗ ನಿತ್ಯ 300ಕ್ಕೂ ಅಧಿಕ ಸಿಮ್‌ಗಳು ವಾಪಾಸ್ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಚಿಕ್ಕಮಗಳೂರು ಜಿಲ್ಲೆಗೆ ಸ್ಯಾಟಲೈಟ್ ಮೂಲಕ ನೆಟ್‌ವರ್ಕ್ ನೀಡುವ ಚಿಂತನೆ ನಡೆದಿದೆ. ಗುಡ್ಡಗಾಡು, ನಕ್ಸಲ್ ಪೀಡಿತ ಪ್ರದೇಶವೂ ಎನ್ನುವ ಕಾರಣಕ್ಕೆ ಈ ಬಗ್ಗೆ ಚಿಂತನೆ ಮಾಡಿದ್ದು, ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಈ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.

ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಘಟಕದ ಯೋಜನೆಯಡಿ ಒಂದು ಜಿಲ್ಲೆಗೆ 250 ಫಲಾನುಭವಿಗಳನ್ನು ಆಯ್ಕೆ ಮಾಡಿ ₹15 ಲಕ್ಷ ಸಬ್ಸಿಡಿ ಮೂಲಕ ಆಹಾರ ಸಂಸ್ಕರಣಾ ಘಟಕ ಆರಂಭಕ್ಕೆ ನಮ್ಮ ಜಿಲ್ಲೆಯಲ್ಲಿ ಈಗಾಗಲೇ 60 ಜನರು ಅರ್ಜಿ ಹಾಕಿದ್ದು, ಜ.29ರಂದು ಕೇಂದ್ರ ಸಚಿವರನ್ನು ಕರೆದು ಕಾರ್ಯಾಗಾರ ಮಾಡಲಾಗುತ್ತಿದೆ. ಆಗ ಹೆಚ್ಚು ಅರ್ಜಿಗಳು ಜಿಲ್ಲೆಯಲ್ಲಿ ಬರಲಿದ್ದು, ₹15 ಲಕ್ಷ ಸಬ್ಸಿಡಿ ಬಂದು ಸಾಮಾನ್ಯ ಕೃಷಿಕರು, ಮಧ್ಯಮ ವರ್ಗದವರಿಗೆ ಅನುಕೂಲ ಆಗಲಿದೆ ಎಂದರು.

ಪಿಎಂ ವಿಶ್ವಕರ್ಮ ಯೋಜನೆಯಡಿ ₹13 ಸಾವಿರ ಕೋಟಿ ಬ್ಯಾಂಕುಗಳಿಗೆ ಭದ್ರತೆಯಾಗಿ ಕೊಟ್ಟು 18 ವೃತ್ತಿಪರ ಕಸುಬು ಗಳವರಿಗೆ ಯೋಜನೆ ಅನುಷ್ಠಾನ ಮಾಡಿದೆ. ತರಬೇತಿ ಪಡೆದ ವ್ಯಕ್ತಿಗೆ ₹15 ಸಾವಿರ ವೆಚ್ಚದ ಯಂತ್ರೋಪಕರಣ ಉಚಿತವಾಗಿ ಕೊಡ ಲಾಗುವುದು. ಜಿಲ್ಲೆಯಲ್ಲಿ ಸುಮಾರು 6 ಸಾವಿರ ಜನರು ತರಬೇತಿ ಪಡೆದಿದ್ದು ಇದರಲ್ಲಿ ಸುಮಾರು 3 ಸಾವಿರ ಜನರಿಗೆ ಪ್ರಥಮ ಹಂತದಲ್ಲಿ ಸಾಲ ಲಭ್ಯವಾಗಿದೆ ಎಂದರು.

ಹರ್‌ಘರ್ ಸೂರ್ಯ ಯೋಜನೆಯಡಿ ₹2.06 ಸಾವಿರ ಯೋಜನೆಗೆ ₹28 ಸಾವಿರ ಸಬ್ಸಿಡಿ ದೊರೆಯಲಿದೆ. 350 ಯುನಿಟ್ ವಿದ್ಯುತ್ ಮಾಡುವಂತಹ ಮಹತ್ವದ ಯೋಜನೆ ಇದಾಗಿದೆ. ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಸರಲ್ಲಿ ಪಾಸ್ ದುರುಪಯೋಗ! ಪ.ಬಂಗಾಳ ಮೂಲದವರಿಂದ ಕೃತ್ಯ?

ಬಿಜೆಪಿ ಮುಖಂಡರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ಪ್ರಭಾಕರ್ ಪ್ರಣಸ್ವಿ, ಕೆ.ಟಿ.ವೆಂಕಟೇಶ್, ದೀಪಕ್ ದೊಡ್ಡಯ್ಯ, ಶಶಿ ಆಲ್ದೂರು, ವಿನೋದ್ ಬೊಗಸೆ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮತ್ತಿತರರು ಹಾಜರಿದ್ದರು.

ತಾಳ್ಮೆ ನಮ್ಮ ದೌರ್ಬಲ್ಯವಲ್ಲ

ಶೃಂಗೇರಿಯಲ್ಲಿ ಶಾರದಾ ಪೀಠದ ಯಾತ್ರಾತ್ರಿಗಳ ವಾಹನ ಪಾರ್ಕಿಂಗ್‌ಗೆ ನೀಡಿದ್ದ ಜಾಗವನ್ನು ಜಿಲ್ಲಾಧಿಕಾರಿಗಳು ವಾಪಾಸ್ ಪಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಮಾಜದಲ್ಲಿ ಒಂದಷ್ಟು ವಿವಾದಗಳನ್ನು ಸೃಷ್ಟಿ ಮಾಡಬೇಕು ಎಂದು ನಮಗೆ ಅನಿಸಿಲ್ಲ. ಅದಕ್ಕಾಗಿ ತಾಳ್ಮೆಯಿಂದ ಇದ್ದೇವೆ. ತಾಳ್ಮೆ ನಮ್ಮ ದೌರ್ಬಲ್ಯವಲ್ಲ. ಹಿಂದೂ ಮಠ, ಮಂದಿರಗಳಿಗೆ ಅನ್ಯಾಯ ಆಗಬಾರದು ಎಂಬ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ನಾನು ಅದನ್ನು ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜ.10ರಂದು ಈ ಬಗ್ಗೆ ಸಭೆ ನಡೆಯಲಿದ್ದು, ಅದರೊಳಗೆ ಸರಿಪಡಿಸಲಾಗುವುದು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Latest Videos
Follow Us:
Download App:
  • android
  • ios