Asianet Suvarna News Asianet Suvarna News

ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಸರಲ್ಲಿ ಪಾಸ್ ದುರುಪಯೋಗ! ಪ.ಬಂಗಾಳ ಮೂಲದವರಿಂದ ಕೃತ್ಯ?

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಕಾರು ಚಾಲಕನೋರ್ವ ಪಾಸ್‌ ದುರುಪಯೋಗಪಡಿಸಿಕೊಂಡಿರುವ ಘಟನೆ ನಡೆದಿದ್ದು, ಘಟನೆ ಬಳಿಕ ಕಾರು ಚಾಲಕ ನಾಪತ್ತೆಯಾಗಿದ್ದಾನೆ. 

Pass misuse by miscreants in the name of mp kota srinivasa poojary fir booked rav
Author
First Published Aug 25, 2024, 9:24 AM IST | Last Updated Aug 25, 2024, 9:33 AM IST

ಬೆಂಗಳೂರು (ಆ.25) ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಕಾರು ಚಾಲಕನೋರ್ವ ಪಾಸ್‌ ದುರುಪಯೋಗಪಡಿಸಿಕೊಂಡಿರುವ ಘಟನೆ ನಡೆದಿದ್ದು, ಘಟನೆ ಬಳಿಕ ಕಾರು ಚಾಲಕ ನಾಪತ್ತೆಯಾಗಿದ್ದಾನೆ. 

ಈ ಹಿಂದೆ ವಿಧಾನಪರಿಷತ್ ಶಾಸಕರಾಗಿದ್ದ ಅವಧಿಯಲ್ಲಿನ ಸ್ಟಿಕರ್ ಬಳಸಿರುವ ಚಾಲಕ. 'ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ' ಎಂಬ ಪಾಸ್ ಅಳವಡಿಕೊಂಡು ಹಲವು ದಿನಗಳಿಂದ  ಸ್ಕೋಡಾ ಕಾರಿನ ಮುಂಭಾಗದಲ್ಲಿ ಸ್ಟಿಕರ್ ಅಂಟಿಸಿ ತಿರುಗಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದವರಿಂದ ದುರುಪಯೋಗ ಆಗಿರುವ ಶಂಕೆಯಿದೆ. ಈ ಹಿನ್ನೆಲೆ ವಿಧಾನಸೌಧ ಪೊಲೀಸರಿಗೆ ಫೋನ್ ಮೂಲಕ ದೂರು ಸಲ್ಲಿಸಿರುವ ಸಂಸದರ ಆಪ್ತ ಕಾರ್ಯದರ್ಶಿ. ಸದ್ಯ ಕಾರು ಪತ್ತೆಯಾಗಿದ್ದು, ದೂರು ದಾಖಲಾಗ್ತಿದ್ದಂತೆ ಕಾರು ಚಾಲಕ ನಾಪತ್ತೆಯಾಗಿದ್ದಾನೆ. ಚಾಲಕನಿಗಾಗಿ ತೀವ್ರ ಶೋಧ ನಡೆಸಿರುವ ವಿಧಾನಸೌಧ ಪೊಲೀಸರು.

ರಾಜೀನಾಮೆ ಕೇಳಿದ ಸಿಎಂಗೆ ನಾಗೇಂದ್ರರಿಂದ ಬೆದರಿಕೆ: ಕೋಟ ಶ್ರೀನಿವಾಸ ಪೂಜಾರಿ

ಯಾಕಾಗಿ ಪಾಸ್ ದುರುಪಯೋಗ ಪಡಿಸಿಕೊಂಡಿದ್ರು? ಇದುವರೆಗೆ ಎಲ್ಲೆಲ್ಲಿ ಓಡಾಡಿದ್ದಾರೆ? ಪಾಸ್ ದುರುಪಯೋಗ ಪಡಿಸಿಕೊಂಡು ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರೆ? ಎಲ್ಲ ವಿಚಾರಗಳಲ್ಲೂ ಅನುಮಾನ ಮೂಡಿಸಿದೆ. ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಬಂಧನ ಬಳಿಕ ಇನ್ನಷ್ಟು ವಿಚಾರ ಬಯಲಿಗೆ ಬರಲಿವೆ.

Latest Videos
Follow Us:
Download App:
  • android
  • ios