ತುಂತುರು ಮಳೆಯಲ್ಲೇ  ತುಮಕೂರು ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ  ತಲೆಯ ಮೇಲೆ ಹಸಿರು ಟವೆಲ್ ಹೊದ್ದುಕೊಂಡು  ಪ್ರತಿಭಟನೆ  ಬಗುರ್ ಹುಕುಂ ಸಾಗುವಳಿ  ಜಮೀನು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರೊಟೆಸ್ಟ್

ತುಮಕೂರು (ಜು.12):  ತುಂತುರು ಮಳೆಯಲ್ಲೇ ತುಮಕೂರು ಡಿಸಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಲೆಯ ಮೇಲೆ ಹಸಿರು ಟವೆಲ್ ಹೊದ್ದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಗುರ್ ಹುಕುಂ ಸಾಗುವಳಿ ಜಮೀನು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ರೈತಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಮೂಲ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ ಬೇರೆಯವರಿಗೆ ಜಮೀನು ಪರಭಾರೆ ಮಾಡಲಾಗಿದೆ ಎಂದ ಅಧಿಕಾರಿಗಳ‌ ಕಾರ್ಯವೈಖರಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಬೆಳೆ ಸಮೀಕ್ಷೆಗೆ ಈಗಲೂ ರೈತರ ಹಿಂಜರಿಕೆ..!

ಕೊರಟಗೆರೆ ತಾಲೂಕಿನ ಅಕ್ಕಾಜಿ ಹಳ್ಳಿ ಗ್ರಾಮದಲ್ಲಿ 8 ಎಕರೆ ಸರ್ಕಾರಿ ಜಮೀನು ಪರಭಾರೆ ಮಾಡಲಾಗಿದೆ. ಬೆಂಗಳೂರು ಮೂಲದ ವ್ಯಕ್ತಿಗೆ 8 ಎಕರೆ ಪರಭಾರೆ ಮಾಡಲಾಗಿದ್ದು, 
ಅಕ್ಕಾಜಿಹಳ್ಳಿ ಗ್ರಾಮದ ನಿವಾಸಿ ಕಾಮಣ್ಣ ಅವರಿಗೆ ಮಂಜೂರಾಗಿದ್ದ 8 ಎಕರೆ ಜಮೀನಿನ ದಾಖಲೆ ಪತ್ರಗಳನ್ನು ತಿದ್ದುಪಡಿ ಮಾಡಿ ಅಧಿಕಾರಿಗಳು ಪರಭಾರೆ ಮಾಡಿದ್ದಾರೆಂದು ಅರೋಪಿಸಲಾಗಿದೆ. 

ಅಧಿಕಾರಿಗಳು ಎಸಗಿರುವ ಅಕ್ರಮ ವಿರೋಧಿಸಿ ರೈತ ಸಂಘದ ವತಿಯಿಂದ ಮಳೆಯಲ್ಲೇ ಪ್ರತಿಭಟನೆ ನಡೆಸಲಾಗುತ್ತಿದೆ. ‌