ಶಿವಮೊಗ್ಗ [ಜ.02]: ಪ್ರಧಾನಿ ನರೇಂದ್ರ ಮೋದಿ ಅವರು ರೈತ ಸಮ್ಮೇಳನಕ್ಕೆ ತುಮಕೂರಿಗೆ ಆಗಮಿಸುತ್ತಿದ್ದು ಇಲ್ಲಿ ಪ್ರತಿಭಟನೆ ಮಾಡಲು ಹೊರಟಿದ್ದ ರೈತ ಸಂಘದ ಮುಖಂಡರನ್ನು ಬಂಧಿಸಲಾಗಿದೆ. 

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಹೊರಟಿದ್ದ ರೈತರನ್ನು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. 

ಶಿವಮೊಗ್ಗ ರೈತ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಡಿ ಮಂಜಪ್ಪ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಶೀವಮೊಗ್ಗ ತಾಲೂಕು ಅಧ್ಯಕ್ಷ ಸಿ. ಚಂದ್ರಪ್ಪ, ಭದ್ರವಾತಿ ತಾಲೂಕು ಅಧ್ಯಕ್ಷರಾದ ಜಿ.ಎನ್.ಪಂಚಾಕ್ಷರಿ ಹಾಗೂ ಇತರ ಮುಖಂಡರನ್ನು ಬಂಧಿಸಲಾಗಿದೆ. 

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...

ಶಿವಮೊಗ್ಗದಿಂದ ಪ್ರತಿಭಟನೆಗಾಗಿ ತುಮಕೂರಿಗೆ ರೈಲಿನಲ್ಲಿ ತೆರಳಲು ಸಿದ್ಧವಾಗಿದ್ದ ವೇಳೆ ಪೊಲೀಸರು ಬಂಧಿಸಿ ಜಯನಗರ ಠಾಣೆಯಲ್ಲಿ ಇರಿಸಲಾಗಿದೆ.