ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌ ಈ ಎರಡೂ ಅಂತರ ರಾಷ್ಟ್ರೀಯ ಸೇವಾ ಸಂಸ್ಥೆಗಳು ಪ್ರಪಂಚದಾದ್ಯಂತ ಹಲವಾರು ಸೇವಾ ಕಾಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ. ನಮ್ಮ ದೇಶದ ಬೆನ್ನೆಲುಬು ರೈತರಾಗಿದ್ದು, ಈ ಹಿನ್ನೆಲೆ ಮಣ್ಣಿನ ರಕ್ಷಣೆ ಅತ್ಯಂತ ಅವಶ್ಯಕವಾಗಿದೆ. 

ಶಿರಾಳಕೊಪ್ಪ (ಸೆ.01): ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌ ಈ ಎರಡೂ ಅಂತರ ರಾಷ್ಟ್ರೀಯ ಸೇವಾ ಸಂಸ್ಥೆಗಳು ಪ್ರಪಂಚದಾದ್ಯಂತ ಹಲವಾರು ಸೇವಾ ಕಾಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ. ನಮ್ಮ ದೇಶದ ಬೆನ್ನೆಲುಬು ರೈತರಾಗಿದ್ದು, ಈ ಹಿನ್ನೆಲೆ ಮಣ್ಣಿನ ರಕ್ಷಣೆ ಅತ್ಯಂತ ಅವಶ್ಯಕವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಎರೆಹುಳು ಗೊಬ್ಬರದ ಮುಖಾಂತರ ಮಣ್ಣಿನ ಗುಣಮಟ್ಟ ಹೆಚ್ಚಿಸಿ, ಉತ್ಪಾದನೆ ಸಹ ವೃದ್ಧಿಸುವ ಬಗ್ಗೆ ರೈತರು ಗಮನಹರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿಗೆ ಸಮೀಪದ ಪವನ್‌ ಫಾರಂನಲ್ಲಿ ಆ.30ರಂದು ಸ್ಥಳೀಯ ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌ ಹಾಗೂ ತೊಗರ್ಸಿ ಲಯನ್ಸ್‌ ಕ್ಲಬ್‌ ಆಶ್ರಯದಲ್ಲಿ ‘ವಸುದೈವ ಕುಟುಂಬಕಂ’ ಎಂಬ ಸ್ನೇಹಮಿಲನ ಹಾಗೂ ರೈತಮಿತ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತಿ ಹೆಚ್ಚು ಗೊಬ್ಬರ ಮತ್ತು ಔಷಧಿ ಸಿಂಪಡಣೆಯಿಂದ ಮಣ್ಣಿನ ಗುಣಮಟ್ಟಕ್ಷೀಣಿಸುತ್ತದೆ. ಈ ನಿಟ್ಟಿನಲ್ಲಿ ರೈತಮಿತ್ರಒಂದು ಉತ್ತಮ ಕಾರ್ಯಕ್ರಮಮವಾಗಿದೆ. ಅಂತೆಯೇ, ನಾವೆಲ್ಲರೂ ಒಂದೇ ಎಂಬ ಮನೋಭಾವನೆಯೊಂದಿಗೆ ಒಟ್ಟಾಗಿ ಜೀವಿಸಿ ಸಮಾಜದಲ್ಲಿ ಒಂದು ಬದಲಾವಣೆಯನ್ನು ತರಲು ಸಾಧ್ಯ. ಆ ನಿಟ್ಟಿನಲ್ಲಿ ‘ವಸುದೈವ ಕುಟುಂಬಕಂ’ ಕಾರ್ಯಕ್ರಮ ಆಯೋಜನೆ ಅರ್ಥಪೂರ್ಣವಾಗಿದೆ ಎಂದರು.

ಬಿಎ​ಸ್‌ವೈ ನೆತ್ತರು ಜಿಲ್ಲೆಗೆ ನೀರಾ​ವ​ರಿ ರೂಪ​ದಲ್ಲಿ ಪರಿ​ವ​ರ್ತ​ನೆ: ಸಂಸದ ರಾಘ​ವೇಂದ್ರ

ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ರಾಜೇಂದ್ರಕುಮಾರ್‌ ಮಾತನಾಡಿ, ರೈತರ ಅಭಿವೃದ್ಧಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ರೋಟರಿಯನ್‌ ಆನಂದಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು. ಶಿರಾಳಕೊಪ್ಪ ಲಯನ್ಸ್‌ ಕ್ಲಬ್‌ ಕಾರ್ಯರ್‍ದರ್ಶಿ ಶೃತಿ ಗಿರೀಶ್‌ ತಾವು ನಡೆಸುತ್ತಿರುವ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಲಯನ್‌ ಆಶಾ ಮಂಜುನಾಥ ಕೃಷ್ಣನ ಪ್ರಾಥನೆಗೆ ಪೂರಕವಾಗಿ ಕಲಾವಿದ ಚಂದ್ರ ಕೃಷ್ಣನ ಚಿತ್ರವನ್ನು ಬಿಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. 

ಕ್ರೀಡಾ ಸಾಧಕರಾದ ದರ್ಶನ್‌ ಮತ್ತು ವಿನಯ್‌ ಅವರನ್ನು ಸನ್ಮಾನಿಸಲಾಯಿತು. ಶಿಕಾರಿಪುರದಲ್ಲಿ ಅವಶ್ಯಕತೆ ಇರುವಂತಹ ಮಕ್ಕಳಿಗೆ ತಲುಪಿಸುವಂತೆ ಲಯನ್ಸ್‌ ಕ್ಲಬ್‌ ಶಿರಾಳಕೊಪ್ಪ ಅವರು ಶಿಕಾರಿಪುರ ರೋಟರಿ ಕ್ಲಬ್‌ ಅವರಿಗೆ ವಿದ್ಯಾಮಿತ್ರ ಸ್ಕೂಲ್‌ ಕಿಟ್‌ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಳು ನಡೆದವು. ರೋಟರಿಯನ್‌ ರಘು ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ ತೊಗರ್ಸಿಯ 200ಕ್ಕೂ ಹೆಚ್ಚು ಲಯನ್ಸ್‌ ಮತ್ತು ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇನಾಂ ಭೂಮಿ ಸಾಗುವಳಿದಾರರು ಹೊಸ ಅರ್ಜಿ ಸಲ್ಲಿಸಿ: ಇನಾಂ ಭೂಮಿ ಸಾಗುವಳಿದಾರರು ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದು, ಶೀಘ್ರದಲ್ಲಿಯೇ ಮಂಜೂರಾತಿಗಾಗಿ ನೂತನ ಕಾಯ್ದೆ ಜಾರಿಗೊಳಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿದ್ದಾರೆ. ಕೂಡಲೇ ಸಾಗುವಳಿದಾರರು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಬೆಂಡೆಕಟ್ಟೆಗ್ರಾಮದ ನೂರಾರು ಇನಾಂ ಭೂಮಿ ಸಾಗುವಳಿದಾರರು ಮಂಜೂರಾತಿಗಾಗಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. 

ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ ಅವಾಂತರ: ಸುಮಲತಾ ಅಂಬರೀಶ್‌

ಸರ್ಕಾರ ಸಾಗುವಳಿದಾರರ ಹಿತರಕ್ಷಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತೀವ್ರ ಚಿಂತನೆ ನಡೆಸುತ್ತಿದೆ ಸಾಗುವಳಿದಾರರು ಆತಂಕಪಡದಂತೆ ತಿಳಿಸಿದರು. ಹಲವು ವರ್ಷಗಳಿಂದ ತಾಲೂಕಿನ ಬೆಂಡೆಕಟ್ಟೆಗ್ರಾಮದಲ್ಲಿನ ಕೂಡಲಿ ಶೃಂಗೇರಿ ಮಠದ ನೂರಾರು ಎಕರೆ ಇನಾಂ ಭೂಮಿ ಜತೆಗೆ ತಾಲೂಕಿನ ವಿವಿಧೆಡೆ ಹಲವು ಸಾಗುವಳಿದಾರರು ಕುಟುಂಬ ಜೀವನ ಭದ್ರತೆ ಕಂಡುಕೊಂಡಿದ್ದಾರೆ. ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಂದಾಯ ಸಚಿವ ಅಶೋಕ್‌ ಜತೆ ಚರ್ಚಿಸಿದ್ದರು. ಈ ಹಿಂದೆ ಫಾರಂ ನಂ.7ರಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರು ಪುನಃ ತಹಸೀಲ್ದಾರ್‌ಗೆ ಸಲ್ಲಿಸಿದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.