ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿಗೆ ರೈತರ ಪರದಾಟ: ಸರ್ಕಾರದ ವಿರದ್ಧ ಅನ್ನದಾತನ ಆಕ್ರೋಶ
* ಅಗತ್ಯ ಸಿದ್ದತೆ ಇಲ್ಲದೆ ದಿನಾಂಕ ನಿಗದಿ ಮಾಡಿದ ಸರ್ಕಾರ
* ತುಮಕೂರು ಜಿಲ್ಲಾದ್ಯಂತ ರೈತರ ಆಕ್ರೋಶ
* ಖರೀದಿ ಕೇಂದ್ರದ ಬಾಗಿಲು ತೆರೆಯದೇ ರೈತರಿಗೆ ಮಾಹಿತಿ ನೀಡದೆ ಕಾಣೆಯಾದ ಸಿಬ್ಬಂದಿ
ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್.
ತುಮಕೂರು(ಏ.26): ಬೆಂಬಲ ಬೆಲೆ(Support Price) ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿ ಮತ್ತೆ ಆರಂಭವಾಗಿದ್ದರೂ ಜಿಲ್ಲೆಯ ಎಂಟೂ ಕೇಂದ್ರಗಳಲ್ಲಿ ನೋಂದಣಿಯಾಗದೆ ರೈತರು(Farmers) ಪರದಾಡುತ್ತಿದ್ದಾರೆ. ತುಮಕೂರು(Tumakuru), ಗುಬ್ಬಿ, ಕುಣಿಗಲ್, ತುರುವೇಕೆರೆ, ಹುಳಿಯಾರು, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ಮಧುಗಿರಿ ಎಪಿಎಂಸಿ(APMC) ಪ್ರಾಂಗಣಗಳಲ್ಲಿ ಜಮಾಯಿಸಿದ್ದ ಸಾವಿರಾರು ರೈತರು ನೋಂದಣಿಯಾಗದೆ ಆಕ್ರೋಶ ಹೊರಹಾಕಿದ್ದಾರೆ.
ರಾಗಿ ಮಾರುವ ಆತುರದಲ್ಲಿರುವ ರೈತರು ಕೃಷಿ ಇಲಾಖೆಯಿಂದ(Department of Agriculture) ಪಡೆದುಕೊಂಡಿರುವ ಫೂಟ್ ನಂಬರ್ ಸಮೇತರಾಗಿ ಆಯಾ ಖರೀದಿ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಖರೀದಿ ಕೇಂದ್ರದ ಬಾಗಿಲು ಕೂಡ ತೆರೆಯದೇ ರೈತರಿಗೆ ಮಾಹಿತಿ ನೀಡದೆ ಸಿಬ್ಬಂದಿ ಕಾಣೆಯಾಗಿದ್ದರು. ಸರ್ಕಾರ ಈ ಹಿಂದಿನ ಮಾರ್ಗಸೂಚಿಯಂತೆ 4 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಗೆ ಮುಂದಾಗಿರುವುದು ಶೇ .60 ರೈತರನ್ನು ಕಂಗಾಲಾಗಿಸಿದ್ದು, ಆತಂಕದಿಂದಲೇ ಖರಿದೀ ಕೇಂದ್ರದ ಮುಂಭಾಗ ಅಳಲು ತೋಡಿಕೊಂಡರು. ರಾಜ್ಯದಲ್ಲಿ(Karnataka) 1.14 ಲಕ್ಷ ಮೆಟ್ರಿಕ್ ಟನ್(Millet) ರಾಗಿ ಖರೀದಿ ಮಾಡಲು ಅವಕಾಶ ಕಲ್ಪಿಸಿದ್ದು, 1,14 ಲಕ್ಷ ಮೆ.ಟನ್ ರಾಗಿ ಖರೀದಿಗೆ ನೋಂದಣಿಯಾದ ಕೂಡಲೇ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂಬ ಆತಂಕದಿಂದ ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ರೈತರು ನೋಂದಣಿಗೆ ಮುಗಿಬಿದ್ದಿದ್ದಾರೆ. ಎಪಿಎಂಸಿ ಸಿಬ್ಬಂದಿ ತಮಗೆ ಬೇಕಾದವರಿಗೆ ರಾತ್ರೋರಾತ್ರಿ ನೋಂದಣಿ(Registration) ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳೂ ಇದ್ದು ಈ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ಜಿಲ್ಲೆಯಲ್ಲೆಡೆ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
Fake Doctor ನಕಲಿ ವೈದ್ಯರ ಐವಿಎಫ್ ಚಿಕಿತ್ಸೆಗೆ ಮಹಿಳೆ ಬಲಿ, 4 ಲಕ್ಷ ರೂ ಪಡೆದು ಟ್ರೀಟ್‌ಮೆಂಟ್!
ಬಿಸಿಲಿನಲ್ಲಿ ಬಳಲಿದ ಅನ್ನದಾತರು
ಸೋಮವಾರ ನೋಂದಣಿ ಆರಂಭವಾಗಲಿದೆ ಎಂಬ ಘೋಷಣೆ ಹಿನ್ನೆಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ರೈತರು ಎಪಿಎಂಸಿ ಆವರಣದಲ್ಲಿ ಜಮಾಯಿಸತೊಡಗಿದರು. ಬೆಳಗ್ಗೆ 9 ರ ವೇಳೆಗೆ ಸಾವಿರಾರು ರೈತರು ಸರತಿಯಲ್ಲಿ ನಿಂತಿದ್ದರು. ಆದರೆ, ತಾಂತ್ರಿಕ ಸಮಸ್ಯೆಯ ನೆಪಮಾಡಿಕೊಂಡು ಎಪಿಎಂಸಿ ಸಿಬ್ಬಂದಿ ಕಚೇರಿ ತೆರೆಯುವ ಗೋಜಿಗೆ ಹೋಗಲಿಲ್ಲ, ತಿಂಡಿ, ನೀರು, ಊಟವೂ ಇಲ್ಲದೆ ಬಿಸಿಲಿನಲ್ಲಿ ಬಳಲಿದ ರೈತರನ್ನು ಎಪಿಎಂಸಿ ಅಧಿಕಾರಿಗಳು ಮರೆತಿದ್ದರು. ತಿಪಟೂರು, ಹುಳಿಯಾರು, ಕುಣಿಗಲ್ ಮತ್ತಿತರರ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕುಣಿಗಲ್ ಎಂಪಿಎಂಸಿ ಆವರಣದಲ್ಲಿ ಉರಿಬಿಸಿಲಿನಲ್ಲಿ ಬಳಲಿದ ರೈತರು ಕೊನೆಗೆ ರಾಷ್ಟ್ರೀಯ ಹೆದ್ದಾರೆ 48ರ ಎದುರು ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ ಹುಳಿಯಾರಿನಲ್ಲಿ ರೊಚಿಗೆದ್ದ ರೈತರು ರಾಗಿ ಖರೀದಿ ಕೇಂದ್ರದ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದರು. ಇಂದು ಕೂಡ ರಾಗಿ ಖರೀದಿ ಕೇಂದ್ರಗಳ ಮುಂದೆ ರೈತರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರುಬಿಸಿಲಿನಲ್ಲಿ ರೈತರನ್ನು ಕಾಯಿಸುತ್ತಿರುವ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತವಾಗಲಿದೆ.