ಚಿಕ್ಕಮಗಳೂರು: ಅತಿವೃಷ್ಠಿ ಹಣದಲ್ಲಿ ಅವ್ಯವಹಾರ, ಅಧಿಕಾರಿಗಳ ವಿರುದ್ಧ ಅನ್ನದಾತರ ಆಕ್ರೋಶ

ಕಡೂರು ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯಿತಿಯ ಹಿಂದಿನ ವಿಲೇಜ್ ಅಕೌಂಟೆಂಟ್ ಪಾಲಕ್ಷಪ್ಪ, ಕಂಪ್ಯೂಟರ್ ಆಪರೇಟರ್ ಮಲ್ಲಿಕಾರ್ಜುನ್ ಮತ್ತು 4 ಜನ ಮಧ್ಯವರ್ತಿಗಳು ಸೇರಿ ಬೆಳೆ ನಷ್ಟ ಪರಿಹಾರದ ಕೋಟ್ಯಂತರ ರೂ. ವಂಚಿಸಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿ ಈಗಲೂ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಕಳೆದ ಜನವರಿ 5ನೇ ತಾರೀಖಿನಂದೆ ದೂರು ನೀಡಿದರು ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಭ್ರಷ್ಟ ಅಧಿಕಾರಿಗಳನ್ನ ಕಾಣದ ಕೈಗಳು ರಕ್ಷಿಸುತ್ತಿವೆ ಎಂದು ಆರೋಪಿಸಿದ ರೈತರು

Farmers outrage against officials in Chikkamagaluru grg

ಚಿಕ್ಕಮಗಳೂರು(ಫೆ.04):  ಅತಿವೃಷ್ಠಿ ಹಣವನ್ನ ಅವ್ಯವಹಾರ ಮಾಡಿ ರೈತರಿಗೆ ಸಿಗಬೇಕಾದ ಹಣವನ್ನ ಲಪಟಾಯಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು ಅವರನ್ನ ಬಂಧಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚೌಳಹಿರಿಯೂರು ಹೋಬಳಿಯ ರೈತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 

ಕಡೂರು ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯಿತಿಯ ಹಿಂದಿನ ವಿಲೇಜ್ ಅಕೌಂಟೆಂಟ್ ಪಾಲಕ್ಷಪ್ಪ, ಕಂಪ್ಯೂಟರ್ ಆಪರೇಟರ್ ಮಲ್ಲಿಕಾರ್ಜುನ್ ಮತ್ತು 4 ಜನ ಮಧ್ಯವರ್ತಿಗಳು ಸೇರಿ ಬೆಳೆ ನಷ್ಟ ಪರಿಹಾರದ ಕೋಟ್ಯಂತರ ರೂ. ವಂಚಿಸಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿ ಈಗಲೂ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಕಳೆದ ಜನವರಿ 5ನೇ ತಾರೀಖಿನಂದೆ ದೂರು ನೀಡಿದರು ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಭ್ರಷ್ಟ ಅಧಿಕಾರಿಗಳನ್ನ ಕಾಣದ ಕೈಗಳು ರಕ್ಷಿಸುತ್ತಿವೆ ಎಂದು ಆರೋಪಿಸಿದ್ದಾರೆ. 

ಚಿಕ್ಕಮಗಳೂರಲ್ಲಿ ಮಂಗನಕಾಯಿಲೆಗೆ ಮೊದಲ ಬಲಿ: ಕೆಎಫ್‌ಡಿಗೆ ವೃದ್ಧ ಸಾವು

ಪ್ರಕರಣ ಬೆಳಕಿಗೆ ಬಂದು ತಿಂಗಳಾದರು ಜಿಲ್ಲಾ ಹಾಗೂ ತಾಲೂಕು ಆಡಳಿತದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಕಲ್ಕೆರೆಯಿಂದ ಕಡೂರು ತಹಸೀಲ್ದಾರ್ ಕಚೇರಿವರೆಗೆ 25 ಕಿ.ಮೀ. ಪಾದಯಾತ್ರೆ ಬಂದ ರೈತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಧರಣಿ ನಡೆಸುತ್ತಿದ್ದಾರೆ. ತರೀಕೆರೆ ಎಸಿ ಡಾ.ಕಾಂತರಾಜ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ತನಿಖೆ ನಡೆಯುತ್ತಿದೆ. ಈಗಾಗಲೇ 940 ಪ್ರಕರಣಗಳನ್ನು ಗುರುತಿಸಲಾಗಿದೆ. 

ಇನ್ನು 3-4 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಧಿಕಾರಿಗಳ ಸಮಾಧಾನದ ಮಾತಿಗೆ ಬಗ್ಗದ ರೈತರು ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ತಪ್ಪಿತಸ್ಥರನ್ನ ಅಮಾನತು ಮಾಡಿ ಬಂಧಿಸಬೇಕೆಂದು ಆಗ್ರಹಿಸಿ ಧರಣಿ ಮುಂದುವರೆಸಿದ್ದಾರೆ.

Latest Videos
Follow Us:
Download App:
  • android
  • ios