Chitradurga: ಸೂಕ್ತ ಬೆಲೆಗೆ ರಾಗಿ ಮಾರಲಾಗದೇ ಕಂಗಲಾದ ಕೋಟೆನಾಡಿನ ರೈತರು!

ಮಧ್ಯ ಕರ್ನಾಟಕದ‌ ರೈತರ ಪ್ರಮುಖ‌ ಬೆಳೆಗಳಲ್ಲಿ ರಾಗಿ ಕೂಡ ಒಂದಾಗಿದೆ. ತಾವು ಬೆಳೆದ ಬೆಳೆಯನ್ನೂ ಸೂಕ್ತ ಬೆಲೆಗೆ ಮಾರಲಾಗದೇ ರೈತರು ಕಂಗಾಲಾಗಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಇರುವ ಮೂರು ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

Farmers of Chitradurga who got into trouble for not selling millet at reasonable prices gvd

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮೇ.02): ಮಧ್ಯ ಕರ್ನಾಟಕದ‌ ರೈತರ ಪ್ರಮುಖ‌ ಬೆಳೆಗಳಲ್ಲಿ ರಾಗಿ (Millet) ಕೂಡ ಒಂದಾಗಿದೆ. ತಾವು ಬೆಳೆದ ಬೆಳೆಯನ್ನೂ ಸೂಕ್ತ ಬೆಲೆಗೆ ಮಾರಲಾಗದೇ ರೈತರು (Farmers) ಕಂಗಾಲಾಗಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಇರುವ ಮೂರು ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ಈಗಾಗಲೇ ಕೇಂದ್ರ ಸರ್ಕಾರ (Central Govt) ಎರಡನೇ ಹಂತದಲ್ಲಿ 1.10 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅನುಮತಿ ನೀಡಿದೆ. ಆದರೆ ಇಂತಿಷ್ಟು ದಿನಗಳು ಎಂದು ಸಮಯ ನಿಗದಿ ಮಾಡದ ಹಿನ್ನೆಲೆ, ಯಾವಾಗ ಬೇಕಾದರೂ ನೊಂದಣಿ ಕಾರ್ಯ ಸ್ಥಗಿತಗೊಳ್ಳಬಹುದೆಂಬ ಆತಂಕದಲ್ಲಿ ರೈತರು ರಾಗಿ ಕೇಂದ್ರದ ಮುಂಭಾಗ ನೊಂದಣಿಗಾಗಿ ಮುಗಿಬಿದ್ದಿದ್ದಾರೆ. 

ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ (Chitradurga). ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರಾಗಿ ಬೆಳೆ ಪ್ರಮುಖವಾಗಿದ್ದು, ಸದ್ಯ ಹೊಸದುರ್ಗ, ಜಾಜೂರು, ಚಿತ್ರದುರ್ಗ ಮೂರು ಕಡೆ ಮಾತ್ರ ಖರೀದಿ ಕೇಂದ್ರ ಸ್ಥಾಪನೆ ಆಗಿದ್ದು ರೈತರಿಗೆ ಸಮಸ್ಯೆ ಆಗಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ಭಾಗದಲ್ಲಿ ಬೇಸಿಗೆ ಕಾಲದಲ್ಲಿ ರಾಗಿಯನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಬಂದಂತಹ ಬೆಳೆಯನ್ನು ಬೇರೆ ರಾಜ್ಯದ ಮಾದರಿಯಲ್ಲಿ ನಮ್ಮಲ್ಲಿ ಯಾಕೆ ರಾಗಿ ಖರೀದಿ ಮಾಡ್ತಿಲ್ಲ. ಲಿಮಿಟೆಡ್ ರಾಗಿ ಖರೀದಿ ಮಾಡೋದ್ರಿಂದ ರೈತರಿಗೆ ಸಂಕಷ್ಟ (Problem) ಎದುರಾಗಿದೆ, ಈ ರೀತಿ ತಾರತಮ್ಯ ನೀಡಿ ಮಾಡದೇ ರೈತರ ಎಲ್ಲಾ ರಾಗಿ ಖರೀದಿ ಮಾಡಲಿ ಎಂಬುದು ರೈತರ ಒತ್ತಾಯವಾಗಿದೆ.

Chitradurga: ಸೂರ್ಯನ ಕೋಪ, ಕೋಟೆ ನಾಡಿನಲ್ಲಿ ಹೂವಿಗೆ ಕಲರ್-ಕಲರ್ ಸೀರೆ

ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆಯುವ ನೆಪದಲ್ಲಿ ರೈತರಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರವೇ ಬೆಂಬಲ ಬೆಲೆ ಘೋಷಿಸಿದ ಹಾಗೆ, ರಾಗಿಗೆ ಸದ್ಯ 3800 ಬೆಲೆ‌ಯಿದೆ. ಆದರೆ ಅಂಗಡಿಗಳಲ್ಲಿ ಬಾಯಿಗೆ ಬಂದಂತೆ 2000 ಬೆಲೆಗೆ ಕೇಳ್ತಿದ್ದಾರೆ ಇದರಿಂದ ರೈತರಿಗೆ ತುಂಬಾನೇ ನಷ್ಟವಾಗ್ತಿದೆ. ಜಿಲ್ಲೆಯಲ್ಲಿ ಕೇವಲ ಮೂರು ಖರೀದಿ ಕೇಂದ್ರಗಳು ಇರೋದ್ರಿಂದ ಎಲ್ಲಾ ಕೇದ್ರಗಳಲ್ಲಿ ನೊಂದಣಿ ಸಮಸ್ಯೆ ಎದುರಾಗ್ತಿದೆ. ಜೊತೆಗೆ ರೈತರು ಎಲ್ಲಿ ರಾಗಿ ಕೇಂದ್ರ ಮುಚ್ಚುತ್ತೋ ಎಂಬ ಆತಂಕದಲ್ಲಿ ನೂಕು ನುಗ್ಗಲು ಮಾಡ್ತಿದ್ದಾರೆ. 

ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮತ್ತೆ ವಿಘ್ನ: ಕಾಮಗಾರಿಗೆ ವಿರೋಧ

ಇಷ್ಟೆಲ್ಲಾ ಹಾಕ್ತಿದ್ರು ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಇತ್ತ ಮುಖ ಮಾಡದೇ ಇರುವುದು ದುರದೃಷ್ಟಕರ ಸಂಗತಿ. ಇನ್ನಾದರೂ ಸರ್ಕಾರ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರ ಓಪನ್ ಮಾಡಬೇಕು ಹಾಗೂ ರೈತರು ಬೆಳೆದ ಎಲ್ಲಾ‌ ರಾಗಿಯನ್ನು ಖರೀದಿ ಮಾಡಬೇಕು ಎಂದು ಕೆಲ ರೈತ ಮುಖಂಡರು ಆಗ್ರಹಿಸಿದರು. ಒಟ್ಟಾರೆಯಾಗಿ ರಾಜ್ಯಾದ್ಯಂತ ರಾಗಿ ಖರೀದಿ ಕೇಂದ್ರಗಳಲ್ಲಿ ಸಮಸ್ಯೆ ಆಗ್ತಿದ್ರು ರಾಜ್ಯ ಸರ್ಕಾರ ಕಣ್ಮಚ್ಚಿ ಕುಳಿತಿರೋದು ನೋವಿನ ಸಂಗತಿ. ಇನ್ನಾದರೂ ರೈತರಿಗೆ ಆಗ್ತಿರೋ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಲಿ ಎಂಬುದು ಪ್ರತಿಯೊಬ್ಬ ಅನ್ನದಾತನ ಕೂಗಾಗಿದೆ.

Latest Videos
Follow Us:
Download App:
  • android
  • ios