ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮತ್ತೆ ವಿಘ್ನ: ಕಾಮಗಾರಿಗೆ ವಿರೋಧ

  • ಹಲವು ಹೋರಾಟದ ಫಲವಾಗಿ ಮಂಜೂರಾಗಿದ್ದ ಮೆಡಿಕಲ್ ಕಾಲೇಜು
  • ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಮತ್ತೆ ವಿಘ್ನ
  • ಕಾಮಗಾರಿಗೆ ಚಿತ್ರದುರ್ಗ ಐಎಂಎ ಸಮಿತಿ ಸದಸ್ಯರ ವಿರೋಧ
Again problem to Chitradurga Medical College Opposition to construction Works akb

ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ: ಅದು ಆ ಜಿಲ್ಲೆಯ ಹೋರಾಟಗಾರರು, ರೈತರ ಬಹುದಿನಗಳ ಕನಸು. ಇನ್ನೇನು ಆ ಕನಸು ಈಡೇರುವ ದಿನಗಳು ಸನಿಹವಾಗ್ತಿವೆ ಎನ್ನುವ ಬೆನ್ನಲ್ಲೇ ಆ ಕನಸಿಗೆ ವಿಘ್ನವೊಂದು ಎದುರಾಗಿದೆ. ಅಷ್ಟಕ್ಕು ಆ ಕನಸು ಏನಪ್ಪಾ? ಅಲ್ಲಾಗಿರೋ‌ ಸಮಸ್ಯೆ ಆದ್ರು ಏನು ಅಂತೀರಾ ಈ ವರದಿ ‌ನೋಡಿ.

ಕಿಷ್ಕಿಂದೆಯಂತಿರುವ ಖಾಲಿ ಜಾಗ‌. ಮೆಡಿಕಲ್ ಕಾಲೇಜಿಗಾಗಿ ಬೃಹತ್ ಕಟ್ಟಡಗಳನ್ನು ತೆರವು ಮಾಡಲು ನಡೆದಿರೋ ಸಿದ್ಧತೆ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗದ ಹೃದಯಭಾಗದಲ್ಲಿರುವ ಜಿಲ್ಲಾಸ್ಪತ್ರೆ ಹಿಂಭಾಗದ ಆವರಣ. ಹೌದು, ಹಲವು ವರ್ಷಗಳ ಹೋರಾಟದ ಫಲವಾಗಿ ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜು ಸರ್ಕಾರದಿಂದ ಮಂಜೂರಾಗಿ ಕಾಮಗಾರಿ ಆರಂಭವಾಗಿದೆ. ಆದರೆ ಇದರ ಬೆನ್ನಲ್ಲೇ ಚಿತ್ರದುರ್ಗ (Chitradurga) ಐಎಂಎ ಸಮಿತಿ ಸದಸ್ಯರು ಮುಂದಾಲೋಚನೆಯಿಂದ ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನೆಲಕಚ್ಚಿದ ಬಾಳೆ: ಮೂರಾಬಟ್ಟೆಯಾದ ರೈತನ ಬದುಕು
 

ಜಿಲ್ಲಾಸ್ಪತ್ರೆ ಆವರಣದಲ್ಲಿನ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಿ, ಮೆಡಿಕಲ್ ಕಾಲೇಜು ನಿರ್ಮಾಣ‌ ಮಾಡಿದ್ರೂ ಸಹ ಮೆಡಿಕಲ್ ಕಾಲೇಜಿಗೆ ಜಾಗ ಕಡಿಮೆಯಾಗಲಿದೆ. ಅಲ್ಲದೇ ನೂತನ ಕಟ್ಟಡಗಳನ್ನು ತೆರವುಗೊಳಿಸಿ, ಕೋಟ್ಯಾಂತರ ರೂಪಾಯಿ ನಷ್ಟ ಮಾಡಿಕೊಳ್ಳುವ ಬದಲಾಗಿ, ಜಮೀನು ಖರೀಸಿದಿಸಿದ್ರೆ ಅನುಕೂಲವಾಗಲಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಜನಸಂಖ್ಯೆ ಹಾಗೂ ಅಗತ್ಯ ಪೂರೈಕೆಗಳ ದೃಷ್ಟಿಯಿಂದ ಈ ಹಿಂದೆ ನಿಗದಿಪಡಿಸಲಾಗಿದ್ದ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ (Chikkapura villege) ಬಳಿಯ 30 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಮೆಡಿಕಲ್ ಕಾಲೇಜು ಕಾಮಗಾರಿ ಆರಂಭಿಸುವಂತೆ ಡಾ.ವಿಜಯ್ ಕುಮಾರ್ (Dr. Vijaya kumar)ಆಗ್ರಹಿಸಿದ್ದಾರೆ.

Chitradurga ಸಕ್ಕರೆ ಕಾರ್ಖಾನೆ ಮತ್ತೆ ತೆರೆಯುವಂತೆ ಹಿರಿಯೂರು ಜನರ ಆಗ್ರಹ
ಇನ್ನು ಈ ವಿರೋಧದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್ (BC Patil) ಅವರನ್ನು ಕೇಳಿದ್ರೆ, ಮೆಡಿಕಲ್ ಕಾಲೇಜು‌ (Medical College)ಜಾಗ ಬದಲಾವಣೆ ಬಗ್ಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ತಿವಿ ಅಂತಾರೆ. ಒಟ್ಟಾರೆ ಕೋಟೆನಾಡಿಗೆ ಮೆಡಿಕಲ್‌ ಕಾಲೇಜು ಮಂಜೂರಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಇದರ ಬೆನ್ನಲ್ಲೇ ಜಾಗ ಆಗಲ್ಲವೆಂಬ ವಿಚಾರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸದೇ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಿ, ಸೂಕ್ತ ಸ್ಥಳದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಮುಂದಾಗಬೇಕಿದೆ.

Latest Videos
Follow Us:
Download App:
  • android
  • ios