Asianet Suvarna News Asianet Suvarna News

ರಾಯಚೂರು: ಕೊನೆಗೂ ಕರುಣೆ ತೋರಿದ ವರು​ಣ, ವಾರದಲ್ಲೇ ಮರೆ​ಯಾಯ್ತು ಬರದ ಛಾಯೆ..!

ಪ್ರಸಕ್ತ ಮುಂಗಾರು ಆರಂಭ​ಗೊಂಡು ಒಂದೂ​ವರೆ ತಿಂಗ​ಳು ಕಳೆದಿದ್ದರೂ ಸಹ ನಿರೀ​ಕ್ಷೆಯ ಪ್ರಮಾ​ಣ​ದಲ್ಲಿ ಮಳೆ​ಯಾ​ಗದ ಕಾರ​ಣಕ್ಕೆ ರೈತರು ಕೃಷಿ ಚಟು​ವ​ಟಿ​ಕೆ​ಗ​ಳಿಂದ ದೂರ ಉಳಿ​ದಿ​ದ್ದರು. ಕೆಲ​ವರು ವಿವಿಧ ಬೆಳೆ​ಗ​ಳನ್ನು ಬಿತ್ತಿ ನೀರಿ​ಲ್ಲದೆ ಆತಂಕ​ಗೊಂಡು ಮಳೆ​ಗಾಗಿ ದೇವರ ಮೊರೆ ಹೋಗಿ​ದ್ದರು. ಇದೀಗ ಪ್ರಸ್ತುತ ವಾರ​ದ​ಲ್ಲಿಯೇ ಮಳೆಯ ಕೊರ​ತೆ ಭೀತಿ ಮರೆ​ಯಾ​ಗಿದ್ದು, ನಿರಂತ​ರ​ವಾಗಿ ಸುರಿ​ಯು​ತ್ತಿ​ರುವ ಮಳೆ​ಯಿಂದಾಗಿ ಕೃಷಿ ಚಟು​ವ​ಟಿ​ಕೆ​ಗಳು ಸಹ ಚುರುಕು ಪಡೆ​ದು​ಕೊಂಡಿ​ವೆ.

Farmers Happy for Rain Starts in Raichur grg
Author
First Published Jul 22, 2023, 10:30 PM IST

ರಾಮ​ಕೃಷ್ಣ ದಾಸ​ರಿ

ರಾಯಚೂರು(ಜು.22):  ಮುಂಗಾರು ಕ್ಷೀಣ​ಗೊಂಡಿ​ದ್ದ​ರಿಂದ ಕಂಗಾ​ಲಾ​ಗಿದ್ದ ರೈತರು ಜಿಲ್ಲೆ​ಯಾ​ದ್ಯಂತ ಜಿಟಿ​ಜಿಟಿ ಮಳೆ​ಯನ್ನು ಕಂಡು ಸಂತ​ಸ​ಗೊ​ಳ್ಳು​ತ್ತಿ​ದ್ದಾರೆ. ಪ್ರಸಕ್ತ ವಾರ​ದಲ್ಲಿ ನಿರಂತ​ರ​ವಾ​ಗಿ ಸುರಿ​ಯು​ತ್ತಿ​ರುವ ಜಡಿ ​ಮ​ಳೆಗೆ ಬರ​ಡಾ​ಗಿದ್ದ ಭೂಮಿಗೆ ಇದೀಗ ಜೀವ​ ಕಳೆ ಬರ​ಲಾ​ರಂಭಿ​ಸಿದ್ದು, ​ತ​ಡ​ವಾ​ಗಿ​ಯಾ​ದರೂ ಕರುಣೆ ತೋರಿದ ವರು​ಣನ ಕೃಪೆ​ಯಿಂದಾಗಿ ಹಸಿ​ರಿನ ತೋರ​ಣ ಪರ​ಸಿ​ರುವ ಭರ​ವ​ಸೆಯನ್ನುಂಟು ಮಾಡಿದೆ.

ಪ್ರಸಕ್ತ ಮುಂಗಾರು ಆರಂಭ​ಗೊಂಡು ಒಂದೂ​ವರೆ ತಿಂಗ​ಳು ಕಳೆದಿದ್ದರೂ ಸಹ ನಿರೀ​ಕ್ಷೆಯ ಪ್ರಮಾ​ಣ​ದಲ್ಲಿ ಮಳೆ​ಯಾ​ಗದ ಕಾರ​ಣಕ್ಕೆ ರೈತರು ಕೃಷಿ ಚಟು​ವ​ಟಿ​ಕೆ​ಗ​ಳಿಂದ ದೂರ ಉಳಿ​ದಿ​ದ್ದರು. ಕೆಲ​ವರು ವಿವಿಧ ಬೆಳೆ​ಗ​ಳನ್ನು ಬಿತ್ತಿ ನೀರಿ​ಲ್ಲದೆ ಆತಂಕ​ಗೊಂಡು ಮಳೆ​ಗಾಗಿ ದೇವರ ಮೊರೆ ಹೋಗಿ​ದ್ದರು. ಇದೀಗ ಪ್ರಸ್ತುತ ವಾರ​ದ​ಲ್ಲಿಯೇ ಮಳೆಯ ಕೊರ​ತೆ ಭೀತಿ ಮರೆ​ಯಾ​ಗಿದ್ದು, ನಿರಂತ​ರ​ವಾಗಿ ಸುರಿ​ಯು​ತ್ತಿ​ರುವ ಮಳೆ​ಯಿಂದಾಗಿ ಕೃಷಿ ಚಟು​ವ​ಟಿ​ಕೆ​ಗಳು ಸಹ ಚುರುಕು ಪಡೆ​ದು​ಕೊಂಡಿ​ವೆ.

ಕುಡಿಯುವ ನೀರೇ ಇಲ್ಲಿ ವಿಷ: ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಕರಾಳ ಸತ್ಯ ಬಯಲು

ಕಳೆದ ವಾರ ಜಿಲ್ಲೆಯಲ್ಲಿ 35 ಮಿ.ಮೀ ಮಳೆ ಕೊರೆಯಾಗಿತ್ತು. 113 ಮಿ.ಮೀ ವಾಡಿಕೆ ಮಳೆ ಬರಬೇಕಿದ್ದರೆ ಕೇವಲ 81 ಮಿ.ಮೀ ಸುರಿದಿತ್ತು. ಇಂಥ ಸಮ​ಯ​ದಲ್ಲಿ ಕಳೆದ ಮೂರ್ನಾ​ಲ್ಕು ದಿನ​ಗ​ಳಿಂದ ಜಿಲ್ಲೆಯಲ್ಲಿ ಸರಾಸರಿ ಶೇ.40ರಷ್ಟುಮಳೆ ಸುರಿದಿದೆ. ಕಳೆದ ಒಂದು ವಾರದ ಸರಾಸರಿ ಮಳೆ ಪರಿಗಣಿಸಿದರೆ ಶೇ.31.07ರಷ್ಟುಮಳೆಯಾದಂತಾಗಿದ್ದು, ಇದು ವಾರದ ವಾಡಿಕೆಯಷ್ಟಾಗಿದೆ. ಹೋದ ಒಂದು ವಾರದಲ್ಲಿ ರಾಯಚೂರು ತಾಲೂ​ಕಿ​ನಲ್ಲಿ 37.8 ಮಿಮೀ, ಮಾನ್ವಿಯಲ್ಲಿ 29.6 ಮಿಮೀ, ಸಿರವಾರದಲ್ಲಿ 34.7 ಮಿಮೀ, ದೇವದುರ್ಗದಲ್ಲಿ 44.7 ಮಿಮೀ, ಲಿಂಗಸುಗೂರಿನಲ್ಲಿ 28.9 ಮಿಮೀ, ಸಿಂಧನೂರಿನಲ್ಲಿ 22.6 ಮಿಮೀ ಹಾಗೂ ಮಸ್ಕಿ ತಾಲೂ​ಕಿ​ನಲ್ಲಿ 23.7 ಮಿಮೀ ಮಳೆ​ಯಾ​ಗಿ​ದೆ.

ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ವರದಿಯಂತೆ ಇನ್ನೂ ಒಂದು ವಾರ ಮಳೆ ಮುಂದುವರಿಯುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವುದರಿಂದ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹ ಕುರಿತು ಮುಂಜಾಗೃತೆ ವಹಿ​ಸಲು ಜಿಲ್ಲಾ​ಡ​ಳಿತ ಮುಂದಾ​ಗಿದೆ.

ಇನ್ನು ವಾರ​ದ ಕಾಲ ಮಳೆ ಮುಂದು​ವ​ರೆಯುವ ಸಾಧ್ಯ​ತೆ​ಗ​ಳಿ​ವೆ ಎಂದು ಹವ​ಮಾನ ಇಲಾ​ಖೆ ತಿಳಿ​ಸಿದೆ. ಈ ಹಿನ್ನೆ​ಲೆ​ಯಲ್ಲಿ ಜಿಲ್ಲೆ​ಯಲ್ಲಿ ಅಗತ್ಯ ಮುನ್ನೆ​ಚ್ಚ​ರಿಕಾ ಕ್ರಮಗಳನ್ನು ತೆಗೆ​ದು​ಕೊ​ಳ್ಳು​ವಂತೆ ಸಂಬಂಧಿ​ಸಿದ ಇಲಾ​ಖೆ​ಗಳ ಅಧಿ​ಕಾರಿ, ಸಿಬ್ಬಂದಿಗೆ ಸೂಚನೆ ನೀಡ​ಲಾ​ಗಿದೆ ಎಂದು ರಾಯ​ಚೂ​ರು ಡಿಸಿ ಎಲ್‌.​ಚಂದ್ರ​ಶೇ​ಖರ ನಾಯಕ ತಿಳಿಸಿದ್ದಾರೆ.  

ಆಧಾರ್‌ ಜೋಡಣೆ, ತಿದ್ದುಪಡಿಗೆ ಹಣ ವಸೂಲಿ: ಜನಸಾಮಾನ್ಯರ ಆಕ್ರೋಶ..!

ಇಷ್ಟು ​ದಿನ ಮಳೆ ಕೊರ​ತೆ ಅನು​ಭ​ವಿ​ಸಿದ ರೈತ​ರಿಗೆ ಇದೀಗ ಸುರಿ​ಯು​ತ್ತಿ​ರುವ ಜಿಟಿ​ಜಿಟಿ ಮಳೆಯು ಆಸ​ರೆ​ಯಾ​ಗಿ​ ನಿಂತಿದೆ. ಈಗಾ​ಗಲೇ ಬಿತ್ತಿ​ರುವ ಬೆಳೆ​ಗ​ಳಿಗೆ ಅನು​ಕೂ​ಲ​ಮಾ​ಡಿ​ಕೊ​ಡುವ ನಿಟ್ಟಿ​ನಲ್ಲಿ ಮಳೆ​ಯಾ​ಗು​ತ್ತಿ​ರು​ವುದು, ಮಂಕಾ​ಗಿದ್ದ ಕೃಷಿ ಚಟು​ವ​ಟಿ​ಕೆ​ಗಳು ಚುರು​ಕು​ಗೊ​ಳ್ಳು​ವಂತೆ ಮಾಡಿ​ದೆ ಎಂದು ರೈತ ಮುಖಂಡ ಎನ್‌.​ಲ​ಕ್ಷ್ಮ​ಣ​ಗೌಡ ಕಡ​ಗಂದೊಡ್ಡಿ ಹೇಳಿದ್ದಾರೆ. 

ಜಿಲ್ಲೆ​ಯಲ್ಲಿ ಇಷ್ಟು ದಿನ ಮಳೆಯ ಕೊರ​ತೆ​ಯನ್ನು ಕಾಣ​ಲಾ​ಗಿ​ತ್ತು. ಆದರೆ ಕಳೆದ ಮೂರ್ನಾಲ್ಕು ದಿನ​ಗ​ಳಿಂದ ಎಲ್ಲೆಡೆ ಉತ್ತಮವಾಗಿ ಸುರಿ​ಯು​ತ್ತಿ​ರುವ ಮಳೆ​ಯಿಂದಾಗಿ ವಾಡಿ​ಕೆಯ ಮಳೆ​ಯಾ​ದಂತಾ​ಗಿದೆ. ಮುಂದಿನ ಒಂದು ವಾರ​ಗಳ ಕಾಲ ಮಳೆ​ಯಾ​ಗುವ ಸಾಧ್ಯ​ತೆ​ಗ​ಳಿವೆ ಎಂದು ರಾ​ಯ​ಚೂರಿನ ಹವ​ಮಾನ ತಜ್ಞ ಡಾ.ಶಾಂತಪ್ಪ ತಿಳಿಸಿದ್ದಾರೆ.  

Follow Us:
Download App:
  • android
  • ios