ರೈತರಿಗೆ ಗುಡ್ ನ್ಯೂಸ್ : ಈಗಲೇ ಹೆಸರು ನೋಂದಾಯಿಸಿ

ರೈತರಿಗೆ ಇಲ್ಲಿದೆ ಗುಡ್ ನ್ಯೂಸ್. ಬಂಪರ್ ಬೆಲೆ ಪಡೆಯಲು ಅವಕಾಶವಿದ್ದು, ಈಗಲೇ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

Farmers Get Support Price For Paddy in Shivamogga

ಶಿವಮೊಗ್ಗ  [ಜ.02]:  ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1815 ರು. ಮತ್ತು ಗ್ರೇಡ್‌ ಎ ಭತ್ತಕ್ಕೆ 1,835 ರು. ಬೆಂಬಲ ಬೆಲೆ ನಿಗದಿಪಡಿಸಿದ್ದು, ಭತ್ತ ಮಾರಾಟ ಮಾಡುವ ರೈತರು ಆನ್‌ಲೈನ್‌ ಮೂಲಕ ನೊಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, ​ಭತ್ತ ಖರೀದಿಗೆ ನೊಂದಣಿ ಮಾಡಲಾದ ಅಕ್ಕಿಗಿರಣಿಗಳಲ್ಲಿ ಶೇಖರಣೆ, ಸಂಗ್ರಹಣೆ ಹಾಗೂ ಹಲ್ಲಿಂಗ್‌ ಕಾರ್ಯ ಮಾಡಿಸಲು ಸೂಚಿಸಲಾಗಿದೆ.

ಭತ್ತ ಖರೀದಿಗೆ ಜಿಲ್ಲೆಯ ಎಲ್ಲ 7 ತಾಲೂಕು ಎಪಿಎಂಸಿಗಳಲ್ಲಿ ಖರೀ​ದಿ ಕೇಂದ್ರ ತೆರೆಯಲಾಗಿದ್ದು, ಮೇಲ್ವಿಚಾರಣೆಗಾಗಿ ನೋಡಲ್‌ ಅಧಿಕಾರಿ ನಿಯೋಜಿಸಲಾಗಿದೆ.

ಶಿವಮೊಗ್ಗ - ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ಭದ್ರಾವತಿ- ಉಪ ನಿರ್ದೇಶಕರು, ರೇಷ್ಮೇ ಇಲಾಖೆ, ಶಿವಮೊಗ್ಗ, ಸಾಗರ- ಉಪವಿಭಾಗಾಧಿಕಾರಿಗಳು, ಸಾಗರ, ಸೊರಬ-ಉಪನಿರ್ದೇಶಕರು ಕೃಷಿ ಇಲಾಖೆ, ಶಿವಮೊಗ್ಗ; ಶಿಕಾರಿಪುರ - ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ; ಹೊಸನಗರ - ಉಪನಿಬಂಧಕರು, ಸಹಕಾರ ಸಂಘಗಳ ಇಲಾಖೆ, ಶಿವಮೊಗ್ಗ; ತೀರ್ಥಹಳ್ಳಿ - ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಶಿವಮೊಗ್ಗ ಅವ​ರನ್ನು ನೋಡಲ್‌ ಅಧಿ​ಕಾ​ರಿ​ಗ​ಳಾಗಿ ನೇಮಕ ಮಾಡ​ಲಾ​ಗಿದೆ.

ಲೈಂಗಿಕತೆ ಸಂಕೇತದ ಪ್ರಾಚೀನ ಮಿಥುನ ಕಲ್ಲುಗಳು ಪತ್ತೆ...

ಎಲ್ಲ ತಾಲೂಕುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆಗಳಲ್ಲಿ ಅಗತ್ಯ ಸಿಬ್ಬಂದಿ, ಗಣಕ ಯಂತ್ರಗಳ ವ್ಯವಸ್ಧೆ ಮಾಡಿ ರೈತರು ನೋಂದ​ಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾ​ಗಿದೆ.

ಬತ್ತ ಖರೀ​ದಿ ಮಾರ್ಗಸೂಚಿಗಳು

1) ನೊಂದಣಿ ಮಾಡಿದ ರೈತರು ಇಲಾಖೆಯಿಂದ ಕಳುಹಿಸುವ ಎಸ್‌ಎಂಎಸ್‌ ಆಧಾರದ ಮೇಲೆ ಸಂಬಂಧಪಟ್ಟಅಕ್ಕಿಗಿರಣಿಗಳಿಗೆ ಭತ್ತದ ಮಾದರಿಯ (ಸ್ಯಾಂಪಲ್‌ ನ್ನು) ಕಡ್ಡಾಯವಾಗಿ ನೀಡತಕ್ಕದ್ದು. ಸಾಮಾನ್ಯ ಬತ್ತವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 16 ಕ್ವಿಂಟಲ್‌ನಂತೆ, ಗರಿಷ್ಠ 40 ಕ್ವಿಂಟಲ್‌ ಮೀರದಂತೆ ಖರೀದಿಸಲಾಗು​ವು​ದು.

2) ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಯ (ಸ್ಯಾಂಪಲ್‌)ನ್ನು ಸಂಗ್ರಹಣ ಏಜೆನ್ಸಿಗಳಿಂದ ನೇಮಕ ಮಾಡುವ ಗುಣಮಟ್ಟಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟದ ಧೃಡೀಕರಣ ಪಡೆದ ನಂತರವೇ ಭತ್ತ ಖರೀದಿಸಿ ಸಂಗ್ರಹಣೆ ಮಾಡತಕ್ಕದ್ದು. ಭತ್ತವನ್ನು ರೈತರು ತಮ್ಮ ಚೀಲಗಳಲ್ಲಿ ತಂದು ಅಕ್ಕಿಗಿರಣಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಲ್‌ ಚೀಲಕ್ಕೆ 6 ರು.ನಂತೆ ಖರೀದಿ ಏಜೆನ್ಸಿಯವರು ಹಣ ಪಾವತಿ ಮಾಡತಕ್ಕದ್ದು.

3) ರೈತರಿಂದ ಭತ್ತವನ್ನು ಪಡೆದ ನಂತರ ಅಕ್ಕಿ ಗಿರಣಿ ಮಾಲೀಕರು ಸದರಿ ಮಾಹಿತಿಯನ್ನು ಆನ್‌ಲೈನ್‌ ಮೂಲಕ ನಮೂದಿಸಬೇಕು. ಹೀಗೆ ನಮೂದಿಸುವಾಗ ಗುಣಮಟ್ಟಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಆನ್‌ಲೈನ್‌ ನಲ್ಲಿ ಸ್ಕ್ಯಾ‌ನ್‌ ಮಾಡಿ ಅಪ್‌ ಲೋಡ್‌ ಮಾಡತಕ್ಕದ್ದು.

4) ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ವಿವರ ಲಭ್ಯವಾದ ತಕ್ಷಣ ಖರೀದಿ ಏಜೆನ್ಸಿಗಳು ಭತ್ತವನ್ನು ಸರಬರಾಜು ಮಾಡಿದ ರೈತರಿಗೆ ಮೂರು ದಿನದೊಳಗಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡತಕ್ಕದ್ದು.

5) ಜಿಲ್ಲೆಗಳಲ್ಲಿ ಯಾವುದೇ ಅಕ್ಕಿಗಿರಣಿಗಳು ನೊಂದಣಿ ಮಾಡದಿದ್ದಲ್ಲಿ ಪಕ್ಕದ ಜಿಲ್ಲೆಯ ಹತ್ತಿರದ ಅಕ್ಕಿಗಿರಣಿಗೆ ಭತ್ತವನ್ನು ಸಾಗಾಣಿಕೆ ಮಾಡಿದ್ದಲ್ಲಿ, ಅಂತಹ ಸಾಗಾಣಿಕೆ ವೆಚ್ಚವನ್ನು ಸಾರ್ವಜನಿಕ ವಿತರಣಾ ಪದ್ಧತಿ​ಯ ನಿರ್ಧರಿತ ದರದಂತೆಯೇ ಜಿಲ್ಲಾ ಖರೀ​ದಿ ಏಜೆನ್ಸಿ ಮೂಲಕ ರೈತರಿಗೆ ಪಾವತಿಸುವುದು. ಅಕ್ಕಿಗಿರಣಿಗಳಲ್ಲಿ ಖರೀದಿ ಸಂದರ್ಭದಲ್ಲಿ ರೈತರಿಂದ ಬಂದಿರುವ ಬತ್ತದ ಗುಣಮಟ್ಟದಲ್ಲಿ ಯಾವುದೇ ಗೊಂದಲಗಳು ಉದ್ಭವಿಸಿದ್ದಲ್ಲಿ ಜಿಲ್ಲಾ ಟಾಸ್ಟ್‌ ಫೋರ್ಸ್‌ನ ಗ್ರೇಡರ್‌ ಮೌಲ್ಯ ಮಾಪನದ ಮೂಲಕ ಬಗೆಹರಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios