ಕೊಡಗಿನಲ್ಲಿ ಕಾಡುಹಂದಿ ಉಪಟಳಕ್ಕೆ ಭತ್ತದ ಬೆಳೆ ನಾಶ, ಕಂಗಾಲಾದ ಅನ್ನದಾತ..!

ಪೊನ್ನಂಪೇಟೆ ತಾಲೂಕಿನ ಕಿರುಗೂರು ಹಾಗೂ ಮಾಯಮುಡಿ ಗ್ರಾಮ ಪಂಚಾಯ್ತಿ  ವ್ಯಾಪ್ತಿಯಲ್ಲಿ ಇದೀಗ ಕಾಡು ಹಂದಿಗಳ ಉಪಟಳ ಮಿತಿಮೀರಿದೆ. ತಡವಾಗಿ ಶುರುವಾಗಿದ್ದ ಮಳೆಗೆ ರೈತರು ಈಗಷ್ಟೇ ಭತ್ತ ಬಿತ್ತನೆ ಶುರುಮಾಡಿದ್ದರು. ಆರಂಭದಲ್ಲೇ ಭತ್ತದ ಬೆಳೆಯ ನಷ್ಟ ಅನುಭವಿಸುವಂತೆ ಆಗಿರುವುದರಿಂದ ರೈತರು ಪರದಾಡುತ್ತಿದ್ದಾರೆ

Farmers Faces Problems For Wild Boar Destroy Paddy Crop in Kodagu grg

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಜು.16):  ಮಲೆನಾಡು ಜಿಲ್ಲೆಯಾದ ಕೊಡಗಿನಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ಇದ್ದದ್ದೇ. ಆದರೂ ಅದು ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ. ಇದುವರೆಗೆ ಆನೆ, ಹುಲಿಗಳ ಕಾಟಕ್ಕೆ ತತ್ತರಿಸಿದ್ದ ರೈತರು ಈಗ ಕಾಡುಹಂದಿಗಳ ಉಪಟಳಕ್ಕೆ ಹೈರಾಣಾಗುವಂತೆ ಮಾಡಿದೆ. 

ಪೊನ್ನಂಪೇಟೆ ತಾಲೂಕಿನ ಕಿರುಗೂರು ಹಾಗೂ ಮಾಯಮುಡಿ ಗ್ರಾಮ ಪಂಚಾಯ್ತಿ  ವ್ಯಾಪ್ತಿಯಲ್ಲಿ ಇದೀಗ ಕಾಡು ಹಂದಿಗಳ ಉಪಟಳ ಮಿತಿಮೀರಿದೆ. ತಡವಾಗಿ ಶುರುವಾಗಿದ್ದ ಮಳೆಗೆ ರೈತರು ಈಗಷ್ಟೇ ಭತ್ತ ಬಿತ್ತನೆ ಶುರುಮಾಡಿದ್ದರು. ಆರಂಭದಲ್ಲೇ ಭತ್ತದ ಬೆಳೆಯ ನಷ್ಟ ಅನುಭವಿಸುವಂತೆ ಆಗಿರುವುದರಿಂದ ರೈತರು ಪರದಾಡುತ್ತಿದ್ದಾರೆ. ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ಉಪಟಳಕ್ಕೆ ಜಿಲ್ಲೆಯ ರೈತರು ಭತ್ತದ ಕೃಷಿ ಮಾಡುವುದನ್ನೇ ಇತ್ತೀಚಿನ ವರ್ಷಗಳಲ್ಲಿ ಕೈ ಬಿಡುತ್ತಿದ್ದಾರೆ. ಆದರೆ ಏನೇ ಆದರೂ ಕೃಷಿ ಕೈಬಿಡಬಾರದು ಎಂದು ಭತ್ತದ ಕೃಷಿ ಮಾಡುತ್ತಿರುವ ರೈತರು ಕೂಡ ಭವಿಷ್ಯದ ದಿನಗಳಲ್ಲಿ ತಮ್ಮ ಗದ್ದೆಗಳನ್ನು ಪಾಳು ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. 

35ರ ಆಂಟಿಯ ಸುಳ್ಳು ಪ್ರೀತಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ

ಭತ್ತದ ಬೆಳೆಯನ್ನು ಬೆಳೆಯುವುದು ಹೇಗೆಂದು ಕೃಷಿಕರು ತಲೆ ಮೇಲೆ ಕೈಹೊತ್ತಿ ಕೂತಿದ್ದರೇ, ಮತ್ತೇ ಕೆಲವೆಡೆ ಮೋಟಾರ್ ಅಳವಡಿಸಿ ಕೃಷಿ ಕಾರ್ಯಗಳಿಗೆ ನೀರು ಪೂರೈಸಿಕೊಂಡು ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಕಿರುಗೂರು ಹಾಗೂ ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳಲ್ಲಿ ಸಿದ್ದಪಡಿಸಿದ್ದ ಭತ್ತದ ಸಸಿ ಮಡಿಗಳನ್ನು ಕಾಡು ಹಂದಿಗಳ ಹಿಂಡು ಸಂಪೂರ್ಣವಾಗಿ ತುಳಿದು ಧ್ವಂಸ ಮಾಡಿದೆ. ಹೆಚ್.ಆರ್.ಹರೀಶ್, ಅಲೆಮಾಡ ಪಿ.ಕಾವೇರಮ್ಮ, ರಾಜು, ಡಿಕ್ಕಿ ತಮ್ಮಯ್ಯ, ಹೆಚ್.ಎಂ. ಸ್ವಾಮಿ ಎಂಬವರ ಭತ್ತದ ಸಸಿ ಮಡಿಗಳಿದ್ದ ಗದ್ದೆಗೆ ಕಾಡು ಹಂದಿಗಳು ದಾಳಿ ನಡೆಸಿವೆ. ಇಡೀ ಗದ್ದೆಗಳ ತುಂಬೆಲ್ಲಾ ಓಡಾಡಿರುವುದರಿಂದ  ಸುಮಾರು 16 ರಿಂದ 20 ಕಿಂಟಾಲ್‌ನಷ್ಟು  ಬಿತ್ತನೆ ಮಾಡಿದ್ದ ಬೀಜದ ಭತ್ತ ಹಾನಿಯಾಗಿದೆ. ಮಾತ್ರವಲ್ಲದೆ ಕಿರುಗೂರು ಗ್ರಾಮದ  ಪಿ.ಆರ್.ಮುಕುಂದ ಎಂಬವರ ಕಾಫಿ ತೋಟಕ್ಕೆ ನುಗ್ಗಿದ ಕಾಡು ಹಂದಿಗಳ ಹಿಂಡು ನೂರಾರು ಕಾಳು ಮೆಣಸು ಬಳ್ಳಿಗಳನ್ನು ತಿಂದು ನಾಶಪಡಿಸಿವೆ. 

ಫಸಲಿಗೆ ಬಂದ ಕಾಳು ಮೆಣಸಿನ ಬಳ್ಳಿಯಾಗಿರುವ ಕಾರಣ ಲಕ್ಷಾಂತರ ರೂಪಾಯಿಗಳ ಭಾರೀ ನಷ್ಟವಾಗಿದೆ. ಮತ್ತೆ ಕಾಳು ಮೆಣಸು ಬಳ್ಳಿ ಬೆಳೆಸಲು ಒಂದಷ್ಟು ವರ್ಷಗಳೇ ಬೇಕಾಗಿದ್ದು, ಬೆಳೆಗಾರರು ಭಾರೀ ನಷ್ಟು ಅನುಭವಿಸುವಂತೆ ಆಗಿದೆ ಎಂದು ಮುಕುಂದ ಅವರು ಅಳಲು ತೋಡಿಕೊಂಡಿದ್ದಾರೆ. 

ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿ ತಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಕಾಡು ಹಂದಿ ದಾಳಿಯಿಂದ ನಷ್ಟವಾಗಿರುವ ಭತ್ತ ಮತ್ತು ಕಾಳುಮೆಣಸು ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ ಅವರು ಆಗ್ರಹಿಸಿದ್ದಾರೆ. 

Wildlife: ಜನರನ್ನು ಕಾಡುತ್ತಿದ್ದ ಒಂಟಿ ಸಲಗ ಕಾಡಿಗಟ್ಟಿದ ಅರಣ್ಯ ಇಲಾಖೆ

ಪ್ರಮುಖರಾದ ತೀತರಮಾಡ ರಾಜ ಕರುಂಬಯ್ಯ, ಅಲೆಮಾಡ ಕಾರ್ತಿಕ್, ಮಾಯಮುಡಿ ಗ್ರಾಮದ ರೈತ ಸಂಘದ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಕಾಳಪಂಡ ಗಣೇಶ್, ಅಪ್ಪಟ್ಟೀರ ದೇವಯ್ಯ, ಬಾನಂಡ ರಾಜು ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊನ್ನಂಪೇಟೆ ಉಪವಲಯ ಅರಣ್ಯ ಅಧಿಕಾರಿಯಾದ ದಿವಾಕರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios