ವಿಜಯಪುರ: ಅಕಾಲಿಕ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿಗೆ ಹಾನಿ, ಸಂಕಷ್ಟಕ್ಕೆ ಸಿಲುಕಿದ ರೈತರು
ಅಕಾಲಿಕ ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಒಣದ್ರಾಕ್ಷಿ ಹಾನಿಯಾಗಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಮನೂರು ಗ್ರಾಮದಲ್ಲಿ ಒಣದ್ರಾಕ್ಷಿ ಶೆಡ್‌ಗಳನ್ನ ಹಾಕಲಾಗಿತ್ತು. ಜಕ್ಕಪ್ಪ ಹಿರಲಾಕೊಂಡ ಎಂಬುವರಿಗೆ ಸೇರಿದ್ದ ಒಣದ್ರಾಕ್ಷಿ ಹಾನಿಯಾಗಿದೆ.
ವಿಜಯಪುರ(ಏ.07): ಜಿಲ್ಲೆಯಲ್ಲಿ ನಿನ್ನೆ(ಗುರುವಾರ) ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ಒಣದ್ರಾಕ್ಷಿ ಮಾಡಲು ಶೆಡ್ ಹಾಕಿದ್ದ ಅಪಾರ ಪ್ರಮಾಣದ ದ್ರಾಕ್ಷಿ ಹಾನಿಯಾಗಿದೆ. ಜಿಲ್ಲೆಯ ದೇವರಹಿಪ್ಪರಗಿ, ಸಿಂದಗಿ, ಮುಳಸಾವಳಗಿ, ಹಂದಿಗನೂರು, ಕನ್ನೊಳ್ಳಿ, ಕೊಕಟನೂರು ಭಾಗಗಳಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಅಂತ ತಿಳಿದು ಬಂದಿದೆ.
ಅಕಾಲಿಕ ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಒಣದ್ರಾಕ್ಷಿ ಹಾನಿಯಾಗಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಮನೂರು ಗ್ರಾಮದಲ್ಲಿ ಒಣದ್ರಾಕ್ಷಿ ಶೆಡ್‌ಗಳನ್ನ ಹಾಕಲಾಗಿತ್ತು. ಜಕ್ಕಪ್ಪ ಹಿರಲಾಕೊಂಡ ಎಂಬುವರಿಗೆ ಸೇರಿದ್ದ ಒಣದ್ರಾಕ್ಷಿ ಹಾನಿಯಾಗಿದೆ.
Weather Forecast: ಇನ್ನೂ 2 ದಿನ ಗುಡುಗು ಸಹಿತ ಮಳೆ: ಸುವರ್ಣನ್ಯೂಸ್‌ಗೆ ಹವಾಮಾನ ಇಲಾಖೆ ಮುನ್ಸೂಚನೆ
ಅಕಾಲಿಕ ಮಳೆಯಿಂದ ಸುಮಾರು 4 ಲಕ್ಷ ಮೌಲ್ಯದ ಒಣದ್ರಾಕ್ಷಿ ಹಾನಿಯಾಗಿದೆ. ಮಳೆಯ ರಭಸಕ್ಕೆ ಶೆಡ್‌ನೆಟ್ ಹಾರಿ ಹೋದಗಿದೆ. ಶೆಡ್‌ನ ಒಳಗೆ ಆಲಿಕಲ್ಲು ಹಾಗೂ ಮಳೆ ನೀರು ನುಗ್ಗಿದ ಪರಿಣಾಮ ಅಪಾರ ನಷ್ಟ ಉಂಟಾಗಿದೆ.