Asianet Suvarna News Asianet Suvarna News

ವಿಜಯಪುರ: ಕಪ್ಪು ನುಶಿ ಕಾಟಕ್ಕೆ ಅನ್ನದಾತ ಕಂಗಾಲು

ಆಲಮೇಲ, ಶಿರಶ್ಯಾಡ, ಗೊರನಾಳ, ಗೋಳಸಾರ ಭಾಗದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿರುವುದರಿಂದ ಈ ಭಾಗದಲ್ಲಿ ಈ ರೋಗ ಹೆಚ್ಚಾಗಿ ಕಂಡು ಬಂದಿದೆ. ಮೆಣಸಿನಕಾಯಿ ಬೆಳೆಯುವ ವಾತಾವರಣ ಇರುವುದರಿಂದ ಈ ಬೆಳೆಗೆ ಹೆಚ್ಚಾಗಿ ಕಪ್ಪು ನುಶಿ ಕೀಟ ಬಾಧಿಸುತ್ತದೆ.

Farmers Faces Problems for Crop Destroying Insect at Indi in Vijayapura grg
Author
First Published Dec 25, 2022, 7:30 PM IST

ಖಾಜು ಸಿಂಗೆಗೋಳ

ಇಂಡಿ(ಡಿ.25): ಅನ್ನದಾತರರು ಒಂದಲ್ಲ ಒಂದು ಸಂಕಷ್ಟಗಳಿಗೆ ಗುರಿಯಾಗುತ್ತಲೇ ಇದ್ದಾರೆ. ಒಂದು ಸಂಕಷ್ಟತಪ್ಪಿತು ಎಂದು ಏದುಸಿರು ಬಿಟ್ಟನಂತರ ಮತ್ತೊಂದು ಕಷ್ಟ ಬಂದು ನಿಂತಿರುತ್ತದೆ. ಇದೀಗ ಅನ್ನದಾತರರಿಗೆ ಕಪ್ಪು ನುಶಿ ಪೀಡಿ ಕಾಡುತ್ತಿದ್ದು, ಇದರಿಂದ ಬೆಳೆಯಲ್ಲ ಹಾಳಾಗಿ ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯ ಆಲಮೇಲ, ಶಿರಶ್ಯಾಡ, ಗೊರನಾಳ, ಗೋಳಸಾರ ಭಾಗದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿರುವುದರಿಂದ ಈ ಭಾಗದಲ್ಲಿ ಈ ರೋಗ ಹೆಚ್ಚಾಗಿ ಕಂಡು ಬಂದಿದೆ. ಮೆಣಸಿನಕಾಯಿ ಬೆಳೆಯುವ ವಾತಾವರಣ ಇರುವುದರಿಂದ ಈ ಬೆಳೆಗೆ ಹೆಚ್ಚಾಗಿ ಕಪ್ಪು ನುಶಿ ಕೀಟ ಬಾಧಿಸುತ್ತದೆ. ಕಪ್ಪು ನುಶಿ ಒಂದು ಸರ್ವಭಕ್ಷಕ ಪೀಡೆಯಾಗಿದ್ದು, ಬೀನ್ಸ್‌, ಬದನೆಕಾಯಿ, ಪಪ್ಪಾಯ, ಮೆಣಸಿನಕಾಯಿ, ಕಾಳುಮೆಣಸು, ಆಲೂಗಡ್ಡೆ ಮತ್ತು ಸ್ಟ್ರಾಬೆರ್ರಿಯಂತಹ ಬೆಳೆಗಳನ್ನು ಬಾಧಿಸಬಲ್ಲದು. ನಮ್ಮ ದೇಶದಲ್ಲಿ 2015ರಲ್ಲಿ ಬೆಂಗಳೂರಿನಲ್ಲಿ ಪಪ್ಪಾಯಿ ಬೆಳೆಯ ಮೇಲೆ ಈ ಕೀಟವನ್ನು ಮೊದಲು ವರದಿ ಮಾಡಲಾಯಿತು. ಅಂದಿನಿಂದ ಈ ಕೀಟವು ಪಸರಿಸುತ್ತಿದ್ದು, ಈಗ ಮೆಣಸಿನಕಾಯಿ ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೊಂದು ವಿಶ್ವವ್ಯಾಪಿ ಕೀಟವಾಗಿದ್ದು, ಸಕಾಲಿಕ ಬೆಳೆಯ ಮೇಲ್ವಿಚಾರಣೆಯಿಂದ ಮಾತ್ರ ಈ ಕೀಟವನ್ನು ನಿರ್ವಹಿಸಬಹುದಾಗಿದೆ.

Vijayapura: ಕೃಷಿಯೊಂದಿಗೆ ಮೀನುಕೃಷಿಗೆ ಆದ್ಯತೆ ನೀಡಿ: ಸಚಿವ ಎಸ್‌.ಅಂಗಾರ

ಏನು ಲಕ್ಷಣ?:

ಪ್ರೌಢಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ, ಹೂಗಳ ಒಳಗೆ ಮತ್ತು ಹೊರಗೆ ಕಂಡುಬರುತ್ತದೆ. ಮರಿಹಂತದ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತಗೊಂಡಿರುತ್ತವೆ. ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳ ಅಂಚುಗಳ ಮೇಲ್ಮುಖವಾಗಿ ಮುದುಡುವುದು, ಹೂವುಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂ ಬಿಡದೇ ಒಣಗುವುದು ಸಾಮಾನ್ಯವಾಗಿ ಕಂಡುಬರುವ ಹಾನಿಯ ಲಕ್ಷಣಗಳಾಗಿವೆ. ಕಾಲಕ್ರಮೇಣ, ಹೂವುಗಳು ಉದುರಿ ಹೋಗುತ್ತವೆ. ಇದರಿಂದ, ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ. ಈಶಾನ್ಯ ಮುಂಗಾರು ಮಳೆ ಇತ್ತೀಚೆಗೆ ತೀವ್ರವಾಗುತ್ತಿದ್ದು, ಅದರೊಂದಿಗೆ ಕೀಟದ ಬಾಧೆಯೂ ಹೆಚ್ಚಾಗುತ್ತಿದೆ.

ಮಾರ್ಗೋಪಾಯವೇನು?:

ಕೀಟಬಾಧೆ ಗಿಡಗಳನ್ನು ಕಿತ್ತು ನಾಶಪಡಿಸುವುದು. ಆಳವಾಗಿ ಗುಂಡಿತೋಡಿ ಹೂಳಬಹುದು ಅಥವಾ ಸುಟ್ಟು ಹಾಕಬಹುದು. ಪಾರ್ಥೇನಿಯಂ, ಲಂಟಾನಾ, ಎಕ್ಕದಗಿಡ, ಅಬ್ಯುಚಲಾನ್‌ ಮತ್ತು ಕಾಡುಬದನೆಯಂತಹ ಆಸರೆ ಬೆಳೆಗಳ ಹೂವುಗಳಲ್ಲಿ ಈ ಕೀಟವು ಜೀವನಚಕ್ರವನ್ನು ಮುಂದುವರೆಸುವುದರಿಂದ ಇಂತಹ ಬೆಳೆಗಳನ್ನು ತೆರವುಗೊಳಿಸಬೇಕು. ಇದರಿಂದ ಕೀಟ ಹರಡುವಿಕೆಯನ್ನು ನಿಯಂತ್ರಿಸಬಹುದು. ಮೆಣಸಿನಕಾಯಿ ಬೆಳೆಯಲ್ಲಿ ಬಾ​ತಎಲೆಯ ಕುಡಿಗಳನ್ನು ಕತ್ತರಿಸಿ ನಾಶಪಡಿಸಬೇಕು. ಕಾಲುವೆ ನೀರು ಕೊಡುವುದಕ್ಕಿಂತ ಸ್ಟ್ರಿಂಕ್ಲರ್‌ ಬಳಸಿ ಅಥವಾ ಜಟ್‌ ಬಳಸಿ ನೀರನ್ನು ಸಿಂಪಡಿಸುವುದು.

ಪ್ರತಿ ಎಕರೆಗೆ 25-30 ನೀಲಿ ಅಂಟು ಬಲೆಗಳನ್ನು ಮೆಣಸಿನಕಾಯಿ ಬೆಳೆಯಲ್ಲಿ ನೇತು ಹಾಕಿ ಕೀಟಗಳನ್ನು ಆಕರ್ಷಿಸಿ ನಾಶಪಡಿಸಿಸುವುದು. ಸಾವಯವ ಕ್ರಮವಾಗಿ ಬೇವಿನ ಬೀಜದ ಕಷಾಯ (ಶೇ.5) ಅಥವಾ ಶೇ.3ರ ಬೇವಿನ ಎಣ್ಣೆ ಪ್ರತಿ ಲೀಟರ್‌ ನೀರಿಗೆ ಮಿ.ಲಿ.ಯಂತೆ ಬೆರೆಸಿ ಸಿಂಪಡಿಸಬಹುದು. ಇದಲ್ಲದೇ, ಹೊಂಗೆ ಎಣ್ಣೆಯನ್ನೂ ಸಹ ಪ್ರತಿ ಲೀಟರ್‌ ನೀರಿಗೆ 3 ಮಿ.ಲೀ. ಯಂತೆ ಬೆರೆಸಿ ಬಳಸಬಹುದು. ಜೈವಿಕ ಕೀಟನಾಶಕಗಳಾದ ಬಿವೇರಿಯಾ ಬೆಝಿಯಾನಾ ಪ್ರತಿ ಲೀಟರ್‌ ನೀರಿಗೆ 4 ಗ್ರಾಂ., ಸುಡೋಮೊನಾಸ್‌ ಫೊ್ಲೕರೋಸೆನ್ಸ್‌ ಪ್ರತಿ ಲೀಟರ್‌ ನೀರಿಗೆ 20 ಗ್ರಾಂ ನಂತೆ ಬೆರೆಸಿ ಗಿಡವು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು. ಕೀಟನಾಶಕಗಳನ್ನು ಹೂ ಲೇಪನದ ಒಳಗೆ ಸಿಂಪಡಿಸುವ ಮೂಲಕ ಈ ಕೀಟವನ್ನು ಸುಲಭವಾಗಿ ತಡೆಯಬಹುದು.

ವಿಜಯಪುರ: ಮೂಲಸೌಕರ್ಯ ವಂಚಿತ ಹೆಣ್ಣು ಮಕ್ಕಳ ಶಾಲೆ

ಬೇವಿನ ಎಣ್ಣೆಯನ್ನು ಇತರೆ ಔಷ​ಗಳೊಂದಿಗೆ ಬೆರೆಸಿ ಸಿಂಪಡಿಸಬೇಕು. ಇವುಗಳೊಂದಿಗೆ 0.5 ಗ್ರಾಂ. ಅಂಟು ಔಷಧವನ್ನು ಬೆರೆಸಿ ಸಿಂಪರಣೆ ಮಾಡಬೇಕು. ಮೆಣಸಿನಕಾಯಿ ಬೆಳೆಯ ನಂತರ ಗೋವಿನ ಜೋಳ,ಜೋಳ, ಸಿರಿಧಾನ್ಯಗಳು, ಅಕ್ಕಡಿಕಾಳುಗಳು, ಸ್ಥಳೀಯವಾಗಿ ಬೆಳೆಯುವ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಸೂಕ್ತ. ಅನಪೇಕ್ಷಿತ ಕೀಟನಾಶಕಗಳನ್ನು ಬಳಸಬಾರದು ಹಾಗೂ ಕೇಂದ್ರೀಯ ಕೀಟನಾಶಕ ನೋಂದಣಿ ಮಂಡಳಿ ಸೂಚಿಸಿದ ಕೀಟನಾಶಕಗಳನ್ನು ಮಾತ್ರ ನಿರ್ವಹಣೆಗೆ ಬಳಸಬೇಕು. ಆದರೆ ಮೇಲಿನಂದ ಮೇಲೆ ಬೆಳೆಗಳಿಗೆ ರೋಗಳು ಬಾಧಿಸುತ್ತಿರುವುದರಿಂದ ಇಳುವರಿ ಕುಂಠಿತವಾಗಿ ಬೆಲೆಗಳು ಗಗನಮುಖಿಯಾಗುತ್ತಿವೆ. ಇದರೊಟ್ಟಿಗೆ ರೈತರು ನಷ್ಟದ ಹಾದಿಯಲ್ಲಿ ಸಾಗುತ್ತಿದ್ದಾರೆ.

ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗೆ ಅಕ್ರಮಣಕಾರಿ ವಿದೇಶಿ ಕಪ್ಪು ನುಶಿ ಕೀಟ್‌ ಬೆಳೆಗಳನ್ನು ಬಾಧಿಸುತ್ತದೆ. ಜಿಲ್ಲೆಯ ಆಲಮೇಲ, ಶಿರಶ್ಯಾಡ, ಗೊರನಾಳ, ಗೋಳಸಾರ ಭಾಗದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿರುವುದರಿಂದ ಈ ಭಾಗದಲ್ಲಿ ಈ ರೋಗ ಹೆಚ್ಚಾಗಿ ಕಂಡು ಬಂದಿದೆ. ಪ್ರಸ್ತುತ ಮೆಣಸಿನಕಾಯಿ ಬೆಳೆಗೆ ಸೂಕ್ತ ಕಾಲವಾಗಿದೆ. ಕಪ್ಪು ನುಶಿ ಕೀಟ್‌ ಬಾಧೆಯನ್ನು ತೆಡೆಗಟ್ಟುವ ಎಲ್ಲ ಕ್ರಮಗಳನ್ನು ರೈತರು ಕೈಗೊಳ್ಳಬೇಕು ಅಂತ ಇಂಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಹೀನಾ (ತೋಟಗಾರಿಕೆ) ತಿಳಿಸಿದ್ದಾರೆ. 

Follow Us:
Download App:
  • android
  • ios