Vijayapura: ಕೃಷಿಯೊಂದಿಗೆ ಮೀನುಕೃಷಿಗೆ ಆದ್ಯತೆ ನೀಡಿ: ಸಚಿವ ಎಸ್.ಅಂಗಾರ
ಆಲಮಟ್ಟಿಯಲ್ಲಿ 25 ಎಕರೆ ಪ್ರದೇಶದಲ್ಲಿ ಮೀನುಮರಿ ಉತ್ಪಾದನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು,ರಾಜ್ಯದಲ್ಲಿ 60 ಕೋಟಿ ಮೀನುಮರಿ ಬೇಡಿಕೆ ಇದೆ. ಈಗಾಗಲೆ 40ಕೋಟಿ ನಮ್ಮಲ್ಲಿ ಉತ್ಪಾದನೆ ಮಾಡುತ್ತೇವೆ.
ಇಂಡಿ (ಡಿ.25): ಆಲಮಟ್ಟಿಯಲ್ಲಿ 25 ಎಕರೆ ಪ್ರದೇಶದಲ್ಲಿ ಮೀನುಮರಿ ಉತ್ಪಾದನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು,ರಾಜ್ಯದಲ್ಲಿ 60 ಕೋಟಿ ಮೀನುಮರಿ ಬೇಡಿಕೆ ಇದೆ. ಈಗಾಗಲೆ 40ಕೋಟಿ ನಮ್ಮಲ್ಲಿ ಉತ್ಪಾದನೆ ಮಾಡುತ್ತೇವೆ. ಇನ್ನೂಳಿದ 20 ಕೋಟಿ ಹೊರಗಿನಿಂದ ತರಬೇಕಾಗುತ್ತದೆ. ಮುಂಬರುವ ದಿನದಲ್ಲಿ ಹೊರಗಿನಿಂದ ಮೀನುಮರಿ ತರುವುದಕ್ಕಿಂತ ನಮ್ಮಲ್ಲಿ ಮೀನುಮರಿ ಉತ್ಪಾದನೆ ಮಾಡುವ ಕಾರ್ಯಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಮೀನುಗಾರಿಕೆ,ಬಂದರು,ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಪಟ್ಟಣದ ಹಂಜಗಿ ರಸ್ತೆಯಲ್ಲಿ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದಿ ಅಧುನಿಕ ಮೀನುಮಾರುಕಟ್ಟೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರಧಾನಮಂತ್ರಿ ಮತ್ಸ್ಯ ಸಂಪದ್ ಯೋಜನೆಯ ಮೂಲಕ ಮೀನುಗಾರಿಕೆ ಕೃಷಿಯನ್ನು ಬೆಳವಣಿಗೆ ಮಾಡುವುದರ ಮೂಲಕ ದೇಶದಲ್ಲಿಯೇ ಮೀನುಗಾರಿಕೆ ಕೃಷಿಯಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ ಅವರು, ನರೇಗಾ ಯೋಜನೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡರೆ,ಕೃಷಿ ಹೊಂಡದಲ್ಲಿ ಮೀನುಮರಿ ಸಾಕಾಣಿಕೆ ಮಾಡಲು ಉಚಿತ ಮೀನುಮರಿ ನೀಡಲಾಗುತ್ತದೆ.ಹೀಗಾಗಿ ನರೇಗಾ ಯೋಜನೆಯಲ್ಲಿ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಾಣಕ್ಕೆ ಆಧ್ಯತೆ ನೀಡಬೇಕು ಎಂದು ಹೇಳಿದರು.
ಜನಾರ್ದನ ರೆಡ್ಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಿದ್ಧತೆ: ಸಚಿವ ಶ್ರೀರಾಮುಲು
ಪ್ರಧಾನಮಂತ್ರಿ ಮತ್ಸ್ಯ ಸಂಪದ್ ಯೋಜನೆ ಅಡಿಯಲ್ಲಿ 25 ಲಕ್ಷದವರೆಗೆ ಪ್ರೊಜೆಕ್ಟಮಾಡಲು ಅವಕಾಶ ಇದೆ.ಕೃಷಿ ಜೊತೆಗೆ ಮೀನುಕೃಷಿಗೆ ಒತ್ತು ನೀಡಿ,ಆರ್ಥಿಕ ಬೆಳವಣಿಗೆ ಹೊಂದಬೇಕು ಎಂದು ಹೇಳಿದರು. ಮೀನು ಸ್ಟೋರೇಜ್ ಮಾಡುವುದರ ಮೂಲಕ ಅಧುನಿಕ ಯಂತ್ರಗಳನ್ನು ಬಳಕೆ ಮಾಡಿಸಕೊಂಡು ಮೀನು ಬಹುದಿನಗಳ ವರೆಗೆ ಉಳಿಸಿಕೊಳ್ಳಬಹುದು. ಇಂಡಿಯಲ್ಲಿ ನಿರ್ಮಾಣವಾದ ಅಧುನಿಕ ಮೀನುಮಾರುಕಟ್ಟೆಬಳಕೆ ಮಾಡಿಕೊಂಡು ಮೀನುಕೃಷಿ ಬೆಳವಣಿಗೆಯ ಜೊತೆಗೆ ಗ್ರಾಹಕರಿಗೆ ಹಾಗೂ ಮಾರುವವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಂಡಿಯಲ್ಲಿ ಇನ್ನಷ್ಟುಸ್ಥಳ ಒದಗಿಸಿಕೊಟ್ಟರೆ ಮೀನಿನಿಂದ ತಯಾರಾಗುವ ಇತರೆ ಉತ್ಪನ್‌ಗಳ ತಯಾರಿಕೆ ಘಟಕಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಮೀನುಕೃಷಿ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು.ಅವರಿಗೆ ಮೀನುಕೃಷಿ ಮಾಡುವಂತೆ ಆಸಕ್ತಿ ಮೂಡುವಂತೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ,ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವ ಎಲ್ಲ ಕಚೇರಿಗಳು ಒಂದೇ ಸ್ಥಳದಲ್ಲಿ ಬರುವಂತೆ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಕೃಷಿ ಡಿಡಿ-2 ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗಿದೆ.ಮೀನು ಕೃಷಿ ಚಟುವಟಿಕೆ ಕೈಗೊಳ್ಳಲು ಸ್ಥಳವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದರು. ಬಿಸಿಲು ಪ್ರದೇಶವಾದ ನಮ್ಮ ಭಾಗದಲ್ಲಿ ಐಸ್ ಸ್ಟೋರೇಜ್ ಅವಶ್ಯಕವಾಗಿದೆ.
ಕರಾವಳಿ ಭಾಗದ ಮೀನು ತಳಿಗಳನ್ನು ನಮ್ಮ ಭಾಗದಲ್ಲಿ ತರುವ ಕೆಲಸ ಇಲಾಖೆ ವತಿಯಿಂದ ನಡೆಯಬೇಕು ಎಂದು ಹೇಳಿದರು. ರೈತರು ಸಹ ಕೃಷಿಯ ಜೊತೆಗೆ ಉಪಕಸಬಾಗಿ ಮೀನುಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಭಾರತ ದೇಶದಲ್ಲಿ ಶೇ, 85 ರಷ್ಟುಜನರು ಕೃಷಿ ಮೇಲೆ ಅವಲಂಭಿತರಾಗಿದ್ದು ಕೃಷಿಯ ಜೊತೆ ಜೊತೆಗೆ ಮಿಶ್ರಬೇಸಾಯ ಪದ್ದತಿಗಳಾದ ಹೈನುಗಾರಿಕೆ, ಮಿನುಗಾರಿಕೆ,ರೇಷ್ಮೆ ಸಾಗಾಣಿಕೆಯಂತಹ ಪದ್ದತಿಗಳನ್ನು ಬೆಳೆಸಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು ಎಂದು ಹೇಳಿದರು.ಒಂದು ದೇಶದ ಅಭಿವೃದ್ದಿಗೆ ಸಾರಿಗೆ ಸಂಪರ್ಕ ರಸ್ತೆಗಳು ಕೂಡಾ ಅಷ್ಠೇ ಪ್ರಮುಖವಾಗಿದ್ದು.
ನಮ್ಮ ಭಾಗದ ಚಿಕ್ಕಮಣೂರದಿಂದ ವಿಜಯಪುರದವರೆಗೆ ರಾಷ್ಟ್ರೀಯ ಹೆದ್ದಾರಿ ಸುಧಾರಣೆಗೆ ಕೇಂದ್ರ ಸಚಿವ ನೀತಿನ ಗಡ್ಕರಿ ಅವರು ಅನುಮೋದನೆ ನೀಡಿದ್ದಾರೆ.ರಿಂಗ್ ರಸ್ತೆಯೂ ಆಗುತ್ತದೆ.ಹೀಗಾಗಿ ಕೇಂದ್ರ ಸಚಿವರ ಗಡ್ಕರಿ ಅವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು. ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ,ಮೀನುಗಾರಿಕೆ ಇಲಾಖೆಯ ನಿರ್ದೇಶಕ ರಾಮಾಚಾರ್ಯ ಮಾತನಾಡಿದರು.ಮೀನುಗಾರಿಕೆ ಅಭಿವೃದ್ದಿ ನಿಗಮದ ನಿರ್ದೇಶಕ ದಿನೇಶಕಮಾರ ಕಳ್ಳೇರ್ ಪ್ರಸ್ತಾವಿಕ ಮಾತನಾಡಿದರು.
ಶಾಸಕಿಯಾದ ತಾಸಲ್ಲಿ ಹೆಬ್ಬಾಳ್ಕರ್ ತಲೆ ಏರಿ ಕೂತರು: ರಮೇಶ್ ಜಾರಕಿಹೊಳಿ
ಪುರಸಭೆ ಅಧ್ಯಕ್ಷೆ ಬನ್ನೆಮ್ಮಾ ಹದರಿ, ತಹಶೀಲ್ದಾರ ನಾಗಯ್ಯಾ ಹಿರೇಮಠ, ತಾ.ಪಂ ಇಒ ಸುನೀಲ ಮದ್ದಿನ, ಕೆಆರ್‌ಐಡಿಎಲ್ ಎಇಇ ರಾಜಶೇಖರ ಜೊತಗೊಂಡ,ಎಇ ರಾಜೇಶ ಹೂಗಾರ,ಶ್ರೀಕಾಂತ ಕುಡಿಗನೂರ, ಸಿದ್ದಲಿಂಗ ಹಂಜಗಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ,ಭೀಮಾಶಂಕರ ಮೂರಮನ, ಪ್ರಶಾಂತ ಕಾಳೆ,ಅವಿನಾಶ ಬಗಲಿ,ಶಿವು ಬಿಸನಾಳ, ಸತೀಶ ಕುಂಬಾರ, ಜೈನುದೀನ ಭಾಗವಾನ, ಭೀಮಾಶಂಕರ ಮೂರಮನ್, ಉಮೇಶ ದೇಗಿನಾಳ, ಭೀಮಣ್ಣಾ ಕೌಲಗಿ, ಅಸ್ಲಮ ಕಡಣಿ, ಲಿಂಬಾಜಿ ರಾಠೋಡ, ಅಯುಬ ಬಾಗವಾನ,ಶಬ್ಬಿರ ಖಾಜಿ, ಹುಚ್ಚಪ್ಪ ತಳವಾರ, ಸತ್ತಾರ ಬಾಗವಾನ, ನಿರ್ಮಲಾ ತಳಕೇರಿ, ರಷೀದ ಅರಬ, ಇಲಿಯಾಸ ಬೋರಾಮಣಿ.ಆನಂದ ಹೊಟಗಾರ ಸೇರಿದಂತೆ ಪುರಸಭೆ ಸದಸ್ಯರು ,ತಾಲೂಕಿನ ವಿವಿಧ ಮೀನುಗಾರರ ಸಂಘಗಳ ಅಧ್ಯಕ್ಷರು.ಸದಸ್ಯರು ಉಪಸ್ಥಿತರಿದ್ದರು.