ವರದಿ :ಅಶೋಕ ಸೊರಟೂರ 

ಲಕ್ಷ್ಮೇಶ್ವರ (ಆ.17):  ರೈತ ವರ್ಷವಿಡಿ ದುಡಿದು ಸಾಲ-ಸೋಲ ಮಾಡಿ ಕೈಸುಟ್ಟುಕೊಳ್ಳುವುದನ್ನೇ ಹೆಚ್ಚಾಗಿ ಕೇಳಿರುವ ನಮಗೆ, ಕೃಷಿಯಲ್ಲಿಯೂ ಉತ್ತಮ ಲಾಭ ಗಳಿಸಬಹುದು ಎಂಬುದನ್ನು ಸಮೀಪದ ಕುಂದ್ರಳ್ಳಿ ಗ್ರಾಮದ ರೈತ ಶಿವಯೋಗಿ ಹಮ್ಮಗಿ ತೋರಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ ರೈತ ಶಿವಯೋಗಿ ಹಮ್ಮಗಿ ಅವರು ತಮ್ಮ 1 ಎಕರೆ ನೀರಾವರಿ ಜಮೀನಿನಲ್ಲಿ ಚೆಂಡು ಹೂವಿನ ಕೃಷಿ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸುವ ಮಾರ್ಗ ಕಂಡುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಾಂಶ ಚೆಂಡು ಹೂವಿನ ಕೃಷಿಯಿಂದ ಸಾಧ್ಯ. 1 ಎಕರೆ ಜಮೀನಿನಲ್ಲಿ ಸುಮಾರು 20 ಟನ್‌ ಹೂವು ಬೆಳೆಯುತ್ತದೆ ಎನ್ನುವ ಶಿವಯೋಗಿ ಅವರು, 1 ಎಕರೆ ಜಮೀನಿನಲ್ಲಿ ಕೇವಲ  5ರಿಂದ 6 ಸಾವಿರ ಖರ್ಚು ಮಾಡಿ 3-4 ತಿಂಗಳ ಅವಧಿಯಲ್ಲಿ ಸುಮಾರು  1.20 ಲಕ್ಷ ರು. ಆದಾಯ ಗಳಿಸಬಹುದಾಗಿದೆ ಎಂದು ಅವರು ಹೇಳಿದರು.

ರೈತರಿಗೆ ಸಂತಸದ ಸುದ್ದಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್.

ಲಕ್ಷ್ಮೇಶ್ವರ ಮತ್ತು ಶಿರಹಟ್ಟಿತಾಲೂಕಿನಲ್ಲಿ ಒಟ್ಟು 800ರಿಂದ 1000 ಎಕರೆ ಪ್ರದೇಶದಲ್ಲಿ ಚೆಂಡು ಹೂವನ್ನು ಬೆಳೆಯಲಾಗುತ್ತಿದ್ದು, ಕೆಜಿಯೊಂದಕ್ಕೆ . 5.75ನಂತೆ ಹೂವುನ್ನು ಕೊಂಡು ಕೊಳ್ಳಲಾಗುತ್ತಿದೆ. ಸುಮಾರು 40-50 ದಿನಗಳ ನಂತರ ಹೂವು ಬಿಡಲು ಆರಂಭಿಸಿದ ಚೆಂಡು ಹೂವಿನ ಗಿಡದಿಂದ ಸುಮಾರು 20 ಬಾರಿ ಹೂವಿನ ಕೊಯ್ಲು ಮಾಡಿ ಕಂಪನಿಯು ತೆಗೆದುಕೊಂಡು ಹೋಗುತ್ತಿದ್ದು, ಪ್ರತಿ ಕೆಜಿಗೆ . 25 ಪೈಸೆ ಪ್ರೋತ್ಸಾಹಧನ ನೀಡುವ ಮೂಲಕ ರೈತರ ಬಾಳಿಗೆ ಚೆಂಡು ಹೂವಿನ ಕೃಷಿ ಆರ್ಥಿಕ ಸಂಜೀವಿನಿಯಾಗಿದೆ ಎನ್ನುತ್ತಾರೆ.

ಕಿಸಾನ್ ಸಮ್ಮಾನ್ ಯೋಜನೆ: 1 ಸಾವಿರ ಕೋಟಿ ರೂ ರಿಲೀಸ್, ಚೆಕ್ ಮಾಡಿಕೊಳ್ಳುವಂತೆ ರೈತರಿಗೆ ಮನವಿ...

ತೋಟಗಾರಿಕೆ ಬೆಳೆಯಾಗಿರುವ ಚೆಂಡು ಹೂವನ್ನು ಚಿಕ್ಕ ಮಕ್ಕಳಿಗೆ ಬೇಕಾಗುವ ಔಷಧ ತಯಾರಿಕೆಗೆ ಹಾಗೂ ಚರ್ಮರೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಳೆದ 25 ವರ್ಷಗಳಿಂದ ಕೇರಳ ಮೂಲದ ಎವಿಟಿ ಕಂಪನಿಯು ಕರ್ನಾಟಕದಲ್ಲಿ ತನ್ನ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದೆ.

ಕರಿಯಪ್ಪ ಇಂಗಳಗಿ, ಫೀಲ್ಡ್‌ ಆಫೀಸರ್‌, ಖಾಸಗಿ ಕಂಪನಿ