Asianet Suvarna News Asianet Suvarna News

ಸಮರ್ಪಕ ವಿದ್ಯುತ್ ಕಲ್ಪಿಸುವಂತೆ ರೈತರ ಆಗ್ರಹ

ತಾಲೂಕಿನ ಕಡಬ ಬೆಸ್ಕಾಂ ಕಚೇರಿಯ ಮುಂದೆ ಸಮರ್ಪಕ ವಿದ್ಯುತ್ ಕಲ್ಪಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು. ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರಹಸಂದ್ರ ಮತ್ತು ಕುಣಾಘಟ್ಟ ಗ್ರಾಮಗಳ ರೈತರ ಪಂಪ್‌ಸೆಟ್ ಗಳಿಗೆ ಸಮರ್ಪಕವಾಗಿ ತ್ರೀ ಫೇಸ್ ವಿದ್ಯುತ್ ಅನ್ನು 7 ಗಂಟೆಗಳ ಕಾಲ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದರು.

Farmers demand to provide adequate electricity snr
Author
First Published Mar 13, 2024, 10:22 AM IST

ಗುಬ್ಬಿ: ತಾಲೂಕಿನ ಕಡಬ ಬೆಸ್ಕಾಂ ಕಚೇರಿಯ ಮುಂದೆ ಸಮರ್ಪಕ ವಿದ್ಯುತ್ ಕಲ್ಪಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು. ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರಹಸಂದ್ರ ಮತ್ತು ಕುಣಾಘಟ್ಟ ಗ್ರಾಮಗಳ ರೈತರ ಪಂಪ್‌ಸೆಟ್ ಗಳಿಗೆ ಸಮರ್ಪಕವಾಗಿ ತ್ರೀ ಫೇಸ್ ವಿದ್ಯುತ್ ಅನ್ನು 7 ಗಂಟೆಗಳ ಕಾಲ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದರು.

ಪೆದ್ದನಹಳ್ಳಿ ಫೀಡರ್‌ನಿಂದ ವರಾಹಸಂದ್ರ ಮತ್ತು ಕುಣಾಘಟ್ಟ ಗ್ರಾಮದ ರೈತರಿಗೆ ಬೆಳಗ್ಗೆ 3 ಗಂಟೆ, ರಾತ್ರಿ ತ್ರಿ ಫೇಸ್ ವಿದ್ಯುತ್ ಅನ್ನು ದಿನ ಬಿಟ್ಟು ದಿನ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಸಮಸ್ಯೆ ಬಗೆಹರಿಸದೆ ಹೋದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯಇರ್ಫಾನ್, ಕುಮಾರ್, ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು.

ವಿದ್ಯುತ್ ದರ ಇಳಿಕೆ ಬಂಪರ್

ಬೆಂಗಳೂರು  (ಫೆ.28): ರಾಜ್ಯದಲ್ಲಿ ಜನಸಾಮಾನ್ಯರು, ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವತಿಯಿಂದ ಪ್ರತಿ ಯೂನಿಟ್‌ಗೆ 1ರೂ. 10 ಪೈಸೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಒಂದು ಷರತ್ತು ವಿಧಿಸಲಾಗಿದ್ದು, ಈ ವಿದ್ಯುತ್ ದರ ಇಳಿಕೆ 100 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಮಾತ್ರ ಅನ್ವಯ ಆಗುತ್ತದೆ.

ಈ ದರ ಇಳಿಕೆಯ ಆದೇಶವು 2024-25ನೇ ಆರ್ಥಿಕ ವರ್ಷ ಅಂದರೆ ಮಾ.1ರಿಂದ ಅನ್ವಯ ಆಗುತ್ತದೆ. ವಾಣಿಜ್ಯ, ಕೈಗಾರಿಕಾ  ಮತ್ತು ಸ್ಥಳೀಯ ವಸತಿ ಉದ್ದೇಶದ ಮನೆಗಳ ಗ್ರಾಹಕರಿಗೆ ವಿದ್ಯುತ್ ದರ ಇಳಿಕೆಯ ಆದೇಶವು ಅನ್ವಯವಾಗುತ್ತದೆ. ಇಲ್ಲಿ ಮುಖ್ಯವಾಗಿ ಪ್ರತಿ ತಿಂಗಳಿಗೆ 100 ಯೂನಿಟ್‌ಗಳಿಗಿಂತ ಹೆಚ್ಚಿನ ವಿದ್ಯುತ್ ಉಪಯೋಗಿಸುವವರಿಗೆ ಮಾತ್ರ ಈ ಹೊಸ ದರ ಇಳಿಕೆಯು ಅನ್ವಯ ಆಗುತ್ತದೆ ಎಂದು ತಿಳಿಸಲಾಗಿದೆ.

ಅವ್ನಲ್ಲಾ.. ಅವ್ನಲ್ಲಾ.. ಇಲ್ಲಿದ್ದಾನೆ ನೋಡಿ, ಪಾಕ್ ಪರ ಘೋಷಣೆ ಕೂಗಿದ ಆರೋಪಿ; ಬಿಜೆಪಿ ಆರೋಪ

ಎಲ್‌ಟಿ ಡೊಮೆಸ್ಟಿಕ್ ಸಂಪರ್ಕ: 100 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗಾಗಿ ಪ್ರತಿ ಯೂನಿಟ್‌ಗೆ 110 ಪೈಸೆಗಳಷ್ಟು (1 ರೂ. 10 ಪೈಸೆ) ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲಾಗಿದೆ.

ಹೆಚ್‌ಟಿ ಕಮರ್ಷಿಯಲ್ ಸಂಪರ್ಕ: ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 125 ಪೈಸೆ (1 ರೂ.25 ಪೈಸೆ) ಕಡಿಮೆ ಮಾಡಲಾಗಿದೆ. ಅಂದರೆ ಪ್ರತಿ ಕಿಲೋವೋಲ್ಟ್‌ ಆಂಪಿಯರ್‌ (ಕೆವಿಎ)ಗೆ ರೂ.10 ಕಡಿಮೆಯಾಗುತ್ತದೆ.

ಹೆಚ್‌ಟಿ ಇಂಡಸ್ಟ್ರಿಯಲ್ ಸಂಪರ್ಕ: ಪ್ರತಿ ಯೂನಿಟ್‌ಗೆ 50 ಪೈಸೆಗಳಷ್ಟು ಕಡಿಮೆ ಮಾಡಲಾಗಿದೆ. ಪ್ರತಿ ಕೆವಿಎಗೆ ರೂ.10 ಕಡಿಮೆಯಾಗಲಿದೆ.

ಹೆಚ್‌ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಸಂಪರ್ಕ: ಪ್ರತಿ ಯೂನಿಟ್‌ಗೆ 40 ಪೈಸೆ ಕಡಿಮೆ ಮಾಡಲಾಗಿದೆ. ಪ್ರತಿ ಕೆವಿಎಗೆ ರೂ.10 ಕಡಿಮೆಯಾಗಲಿದೆ.

ಹೆಚ್‌ಟಿ ಖಾಸಗಿ ಏತ ನೀರಾವರಿ: ಪ್ರತಿ ಯೂನಿಟ್‌ಗೆ 200 ಪೈಸೆ (2 ರೂ.) ವಿದ್ಯುತ್ ದರ ಕಡಿತ ಮಾಡಲಾಗುತ್ತದೆ.

ಹೆಚ್‌ಟಿ ವಸತಿ ಅಪಾರ್ಟ್‌ಮೆಂಟ್‌ಗಳ ಸಂಪರ್ಕ: ಪ್ರತಿ ಪ್ರತಿ ಕಿಲೋವೋಲ್ಟ್‌ ಆಂಪಿಯರ್‌ (ಕೆವಿಎ)ಗೆ ರೂ.10 ಕಡಿಮೆಯಾಗುತ್ತದೆ.

ಎಲ್‌ಟಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 50 ಪೈಸೆ ಕಡಿತ ಮಾಡಲಾಗುತ್ತದೆ.

ಎಲ್‌ಟಿ ಕೈಗಾರಿಕಾ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 100 ಪೈಸೆಗಳಷ್ಟು ದರವನ್ನು ಕಡಿಮೆ ಮಾಡಲಾಗುತ್ತದೆ

 

Follow Us:
Download App:
  • android
  • ios