Chitradurga: ಕೋಡಿ ಬಿದ್ದ ವಾಣಿ ವಿಲಾಸ ಸಾಗರ ಡ್ಯಾಂ: ಸಂತಸ ಪಡ್ತಿರೋ ಅನ್ನದಾತರು

ಕೋಟೆನಾಡಿನ ಅನ್ನದಾತರ ಪಾಲಿನ ಅಕ್ಷಯಪಾತ್ರೆ ಆಗಿರುವ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಕ್ಷಣಗಣನೆ ಶುರುವಾಗಿದ್ದು, ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸುಮಾರು ನೂರು ವರ್ಷಗಳಲ್ಲಿ ಮೂರನೇ ಬಾರಿಗೆ ಕೋಡಿ ಬೀಳಲು ಡ್ಯಾಂ ಸಜ್ಜಾಗಿದ್ದು, ರೈತರಿಗೆ ಕೃಷಿ ಕೆಲಸಕ್ಕೆ ಅನುಕೂಲವಾಗಲಿದೆ ಎಂದು ಸಂತಸದಲ್ಲಿ ಇದ್ದಾರೆ. 
 

Farmers are happy that the Vani Vilasa Sagara Dam has Full

ಚಿತ್ರದುರ್ಗ (ಜ.13): ಕೋಟೆನಾಡಿನ ಅನ್ನದಾತರ ಪಾಲಿನ ಅಕ್ಷಯಪಾತ್ರೆ ಆಗಿರುವ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಕ್ಷಣಗಣನೆ ಶುರುವಾಗಿದ್ದು, ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸುಮಾರು ನೂರು ವರ್ಷಗಳಲ್ಲಿ ಮೂರನೇ ಬಾರಿಗೆ ಕೋಡಿ ಬೀಳಲು ಡ್ಯಾಂ ಸಜ್ಜಾಗಿದ್ದು, ರೈತರಿಗೆ ಕೃಷಿ ಕೆಲಸಕ್ಕೆ ಅನುಕೂಲವಾಗಲಿದೆ ಎಂದು ಸಂತಸದಲ್ಲಿ ಇದ್ದಾರೆ. ಕಳೆದ‌ ಎರಡ್ಮೂರು ವರ್ಷಗಳ ಹಿಂದಷ್ಟೇ ಡ್ಯಾಂ ಸಂಪೂರ್ಣ ಖಾಲಿಯಾಗಿದ್ದಾಗ ಇಡೀ ಜಿಲ್ಲೆಯ ರೈತರು ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಈ ರೀತಿಯ ಬರಗಾಲ ಬಂತಲ್ಲ ಮುಂದೆ ನಮ್ಮ ಜೀವನದ ಗತಿಯೇನು ಎಂದು ಗಂಭೀರ ಆಲೋಚನೆಯಲ್ಲಿ ತೊಡಗಿದ್ದರು. 

ಆದ್ರೆ ಹಿಂದಿನ ಸರ್ಕಾರದ ಬೊಮ್ಮಾಯಿ ಸಿಎಂ ಆಗಿದ್ದಾಗ ಡ್ಯಾಂ ಮೈದುಂಬಿದ ಪರಿಣಾಮ, ಸ್ವತಃ ಅವರೇ ಆಗಮಿಸಿ ಡ್ಯಾಂ ಗೆ ಬಾಗಿನ ಅರ್ಪಿಸಿದ್ದರು. ಅದೇ ರೀತಿ ಈ ಬಾರಿಯೂ ಡ್ಯಾಂ ತುಂಬಿ ಕೋಡಿ ಬೀಳಲು ಶುರುವಾಗಿರೋದ್ರಿಂದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದು ಆಹ್ವಾನಿಸಿದ್ದು, ಎಲ್ಲರೂ ಬರುವ ನಿರೀಕ್ಷೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಒಂದ್ಕಡೆ ರೈತರು ಡ್ಯಾಂ ತುಂಬಿದ ಖುಷಿಯಲ್ಲಿ ಇದ್ದರೆ, ಡ್ಯಾಂನ ಹಿನ್ನೀರಿನ ಭಾಗದಲ್ಲಿ ಇರುವ ಕೆಲ ಗ್ರಾಮದ ರೈತರು ಮಾತ್ರ ಡ್ಯಾಂ ತುಂಬಿದಾಗಲೆಲ್ಲಾ ಕೋಡಿ ಬಿದ್ದ ನೀರು ನೂರಾರು ಎಕರೆ ರೈತರ ಜಮೀನಿಗೆ ನುಗ್ಗಿ ಇದ್ದ ಅಲ್ಪ ಸ್ವಲ್ಪ ಬೆಳೆಯನ್ನ ನಾಶ ಪಡಿಸುತ್ತದೆ. ಆದ್ದರಿಂದ ಆ ಭಾಗದ ರೈತರು ಬೇಸರಗೊಂಡು ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದ್ರು ಕೋಡಿ ಪ್ರಮಾಣ ಅರಿತು, ನಮಗೆ ಯಾವುದೇ ತೊಂದರೆ ಆಗದ ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಹಿಳೆಯರನ್ನು ಸಬಲರನ್ನಾಗಿ ಮಾಡುವುದು ನಮ್ಮ ಗುರಿ: ವೀರೇಂದ್ರ ಹೆಗ್ಗಡೆ

ಪ್ರತೀ ಬಾರಿಯೂ ಡ್ಯಾಂ ತುಂಬಿದಾಗ ಹೊಸದುರ್ಗ ತಾಲ್ಲೂಕಿನ ಹಿನ್ನೀರ ಭಾಗದಲ್ಲಿ ಇರುವ ಜನರು ಮಾತ್ರ ಅಕ್ಷರಶಃ ಕಣ್ಣೀರಲ್ಲಿಯೇ ಕೈತೊಳೆಯುತ್ತಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಡ್ಯಾಂ ನ ಸಾಮರ್ಥ್ಯ 130 ಅಡಿಯಾಗಿದ್ದು, ತುಂಬಿದ ಕೂಡಲೇ ಕೋಡಿಯ ರಭಸವಯೂ ಅಷ್ಟೇ ಜೋರಾಗಿ ಅರಿಯುವುದ್ರಿಂದ ಸುತ್ತಮುತ್ತ ಇದ್ದ ಯಾವುದೇ ಜಮೀನು ನೀರಿಗೆ ಅಡ್ಡಿಯಾಗುವುದಿಲ್ಲ. ಎಲ್ಲಾ ಜಮೀನಿನ ಬೆಳೆಯೂ ನೀರಲ್ಲಿ ಕೊಚ್ಚಿ ಹೋಗಿ ನಾಶವಾಗುತ್ತವೆ.‌ಅದೇ ರೀತಿ ಕೆಲ ಗ್ರಾಮದ ಮನೆಗಳು ಕೂಡ ನೀರಿಗೆ ಆವುತಿಯಾಗಿ ಜಲಾವೃತ ಆಗುವ ಭಯವೂ ಹಿನ್ನೀರಿನ ಭಾಗದ ಜನರಲ್ಲಿ ಇರುವಂತದ್ದು. ಆದುದರಿಂದ ಇನ್ನಾದ್ರು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Latest Videos
Follow Us:
Download App:
  • android
  • ios