ಪ್ರತಿಭಟನೆ ವೇಳೆ ರೈತರೋರ್ವರು ಅಧಿಕಾರಿಯೋರ್ವರ ಕಾಲಿಗೆ ಬಿದ್ದ ಪ್ರಸಂಗ ನಡೆಯಿತು. ಈ ಘಟನೆ ಬೆಳಗಾವಿಯಲ್ಲಿ ನಡೆಯಿತು.
ಬೆಳಗಾವಿ (ಸೆ.29) : ಬೆಳಗಾವಿಯಲ್ಲಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಬಂದ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಪೊಲೀಸ್ ಬೆಂಗಾವಲಿನೊಂದಿಗೆ ಸಾರಿಗೆ ಬಸ್‌ಗಳ ಸಂಚಾರ ಆರಂಭಿಸಲಾಗಿತ್ತು.
ಈ ವೇಳೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನಾನಿರತ ರೈತ ಮುಖಂಡ ಚೂನಪ್ಪ ಪೂಜಾರಿ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಅವರ ಕಾಲಿಗೆ ಬಿದ್ದು, ಬಸ್ ಸಂಚಾರ ಬಂದ್ ಮಾಡುವಂತೆ ಒತ್ತಾಯಿಸಿದರು.
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಸೋಮವಾರ ನಡೆಸಿದ ಕರ್ನಾಟಕ ಬಂದ್‌ಗೆ ಅನೇಕ ಕಡೆ ಬೆಂಬಲ ದೊರೆಯಿತು.
ಸರ್ಕಾರ ನಮ್ಮ ಜೊತೆ ಚರ್ಚೆ ನಡೆಸಿಲ್ಲ, ನಮಗೆ ಈ ಕಾಯ್ದೆ ಬೇಡ : ರೈತ ಮಹಿಳೆ ..
ರೈತ, ದಲಿತ, ಕಾರ್ಮಿಕ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಹೋರಾಟ ಸಮಿತಿ ಹೆಸರಿನಲ್ಲಿ ಬಂದ್‌ಗೆ ಕೊಡಲಾಗಿತ್ತು. ಎಲ್ಲ ಸಂಘಟನೆಗಳು ಒಂದಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂದ್‌ನ್ನು ಯಶಸ್ವಿಗೊಳಿಸಿದವು.
ಅಂಗಡಿ ಮುಂಗಟ್ಟುಗಳು ಕೆಲವೆಡೆ ಮುಚ್ಚಿದ್ದವು. ಖಾಸಗಿ ಬಸ್ಸುಗಳು ರಸ್ತೆಗಿಳಿಯಲಿಲ್ಲ, ಆಟೋ ಚಾಲನೆ ಅಲ್ಲಲ್ಲಿ ಕಂಡು ಬಂತು, ಪ್ರತಿಭಟನಾಕಾರರು ಅವುಗಳನ್ನು ತಡೆಯುತ್ತಿದ್ದುದು ಕಂಡು ಬಂತು. ಹೋಟೆಲ್‌ಗಳು, ತರಕಾರಿ ಮಾರುಕಟ್ಟೆ, ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಕೆಲವೆಡೆ ಬಂದ್ ಮಾಡಿದ್ದರು.
