ಚಿತ್ರದುರ್ಗ: ಸೊಪ್ಪಿನ ಬೆಲೆ ಕುಸಿತದಿಂದ ಕಂಗಾಲಾದ ರೈತ..!

ಸೊಪ್ಪಿನ ಬೆಲೆ ನೆಲಕ್ಕೆ‌ಕುಸಿದಿದೆ. ಶ್ರಾವಣ ಮಾಸದ ಆರಂಭದಲ್ಲೇ ಬೆಲೆ ಏರಿಕೆಯಾಗಬೇಕಿದ್ದ ಸೊಪ್ಪನ್ನು ಇದೀಗ ಖರೀದಿಸುವರು ಇಲ್ಲದಂತಾಗಿದೆ. ಹೀಗಾಗಿ ಕಂಗಾಲಾದ ಸಣ್ಣ, ಅತಿಸಣ್ಣ  ರೈತರು  ಬಾರಿ ಸಂಕಷ್ಟಕ್ಕೆ‌ ಸಿಲುಕಿದ್ದು, ಸೂಕ್ತ ಪರಿಹಾರ‌ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. 
 

Farmer Faces Problems For Price Deceased in Chitradurga grg

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜು.20):  ಚಿತ್ರದುರ್ಗ ಹೇಳಿ ಕೇಳಿ‌ ಬರದನಾಡು ಎಂಬ ಹಣೆ ಪಟ್ಟಿ ಹೊಂದಿದೆ. ಹೀಗಾಗಿ ಅತಿ ಸಣ್ಣ ರೈತರು, ತುಂಡು ಭೂಮಿಯಲ್ಲಿ ಸೊಪ್ಪು ಬೆಳೆದು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ರು. ಆದ್ರೆ ತರಕಾರಿ ಬೆಲೆ ಗಗನಕ್ಕೇರಿರುವ ವೇಳೆಯೇ ದಿಢೀರ್ ಅಂತ ಸೊಪ್ಪಿನ ಬೆಲೆ ನೆಲಕ್ಕೆ ಕುಸಿದಿದೆ.‌ ಹೀಗಾಗಿ ಸೊಪ್ಪನ್ನೇ ನಂಬಿದ್ದ ರೈತರು ತೀವ್ರ ನಷ್ಟ ಎದುರಿಸುವಂತಾಗಿದೆ. ಈ ಕುರಿತು ವರದಿ ಇಲ್ಲಿದೆ.

ನೋಡಿ ಹೀಗೆ ಸೊಪ್ಪನ್ನು‌ ಮೇಯುತ್ತಿರೊ ಜಾನುವಾರುಗಳು. ಸೊಪ್ಪನ್ನು ಕಟಾವು ಮಾಡದೇ ನಾಶಪಡಿಸ್ತಿರುವ ರೈತರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಹಂಪಯ್ಯನಮಾಳಿಗೆ ಗ್ರಾಮದಲ್ಲಿ. ಹೌದು, ಚಿತ್ರದುರ್ಗ ತಾಲ್ಲೂಕಿನಾದ್ಯಂತ ಸೊಪ್ಪುನ್ನು ಹೇರಳವಾಗಿ ಬೆಳೆಯುತ್ತಾರೆ. ಸಣ್ಣ, ಅತಿಸಣ್ಣ ರೈತರ ಪಾಲಿಗೆ   ಸೊಪ್ಪು ಜೀವನಾಧಾರವಾಗಿದೆ. ಈ ಸೊಪ್ಪು ರಾಜ್ಯದ ವಿವಿದೆಡೆಗೆ ಸೇರಿದಂತೆ ಹೊರರಾಜ್ಯಗಳಿಗೂ ರಫ್ತಾಗಲಿದೆ.ಅಲ್ದೇ  ಕೋಟೆ‌ನಾಡಿನ ಪಾಲಕ್, ಮೆಂತ್ಯೆ, ಕೊತ್ತುಂಬರಿ ಹಾಗು ಸಬ್ಬಾಕ್ಷಿ ಸೊಪ್ಪಿಗೆ ಎಲ್ಲಿಲ್ಲದ  ಬಹುಬೇಡಿಕೆ ಇದೆ.ಆದರೆ ಕಳೆದ ಎರಡು ದಿನಗಳಿಂದ‌ ಸೊಪ್ಪಿನ  ಬೆಲೆ‌ ದಿಢೀರ್ ಅಂತ‌ನೆಲಕ್ಕೆ ‌ಕುಸಿದಿದೆ. ಹೀಗಾಗಿ ಸೊಪ್ಪನ್ನೇ ನಂಬಿ‌ ದೈನಂದಿನ ಬದುಕು ಕಟ್ಟಿಕೊಂಡಿದ್ದ ಸಣ್ಣ‌ ರೈತರ‌ ಬದುಕು‌ ದುಸ್ತರವಾಗಿದೆ. ಇದನ್ನೇ ನಂಬಿ ಸಾಲ ಸೂಲ‌ ಮಾಡಿ‌ ಸೊಪ್ಪು‌ಬೆಳೆದಿದ್ದ  ರೈತರು, ಸಂಪಾಗಿ ಬೆಳೆದು ನಿಂತಿದ್ದ  ಸೊಪ್ಪಿನ ಹೊಲಕ್ಕೆ ಜಾನುವಾರುಗಳನ್ನು ಮೇಯಲು ಬಿಟ್ಟು, ಬೆಳೆ‌ನಾಶಪಡಿಸಿ ಎಂದು ರೈತ ಮುಖಂಡ ಧನಂಜಯ ಆಕ್ರೋಶ ಹೊರಹಾಕಿದ್ದಾರೆ.

ಬಸ್‌ ಉಚಿತ ಆಯ್ತು,ಈಗ ಗರ್ಭಿಣಿಯರಿಗೆ ಆಟೋಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಚಾಲನೆ ಜಿಲ್ಲಾಧಿಕಾರಿ ದಿವ್ಯಪ್ರಭು

ಇನ್ನು ಎಲ್ಲೆಡೆ  ತರಕಾರಿ ಬೆಲೆ‌ ಗಗನಕ್ಕೇರಿದೆ.ಆದರೆ  ಸೊಪ್ಪಿನ ಬೆಲೆ  ಕುಸಿತವಾಗಿರೋದು ಕೋಟೆನಾಡಿನ ರೈತರಲ್ಲಿ ಬಾರಿ ಅಂತಕ ಸೃಷ್ಟಿಸಿದೆ.ಶ್ರಾವಣ ಮಾಸದ ಆರಂಭಕ್ಕೆ ದುಬಾರಿಯಾಗಬೇಕಿದ್ದ ಸೊಪ್ಪು ಒಂದು ರೂಪಾಯಿ ಗಡಿ ದಾಟ್ತಿಲ್ಲ.ಹೀಗಾಗಿ ಸೊಪ್ಪು ಬೆಳೆಗಾರರ  ನಿರೀಕ್ಷೆ  ಹುಸಿಯಾಗಿದೆ. ಸೊಪ್ಪು  ಬೆಳೆಯಲು ಹೂಡಿದ್ದ  ಬಂಡವಾಳ‌ ಸಹ ವಾಪಸ್ ಸಿಗಲಾರದ ಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆಗೆ ಮಾಡಿದ ಸಾಲ ತೀರಿಸಲಾಗದೇ ಅನ್ನದಾತರು ಕಂಗಾಲಾಗಿದ್ದು, ಸೊಪ್ಪು ಬೆಳೆಗಾರರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ರೈತ ಚಿದಾನಂದ್ ಆಗ್ರಹಿಸಿದ್ದಾರೆ.

ಒಟ್ಟಾರೆ ಸೊಪ್ಪಿನ ಬೆಲೆ ನೆಲಕ್ಕೆ‌ಕುಸಿದಿದೆ. ಶ್ರಾವಣ ಮಾಸದ ಆರಂಭದಲ್ಲೇ ಬೆಲೆ ಏರಿಕೆಯಾಗಬೇಕಿದ್ದ ಸೊಪ್ಪನ್ನು ಇದೀಗ ಖರೀದಿಸುವರು ಇಲ್ಲದಂತಾಗಿದೆ. ಹೀಗಾಗಿ ಕಂಗಾಲಾದ ಸಣ್ಣ, ಅತಿಸಣ್ಣ  ರೈತರು  ಬಾರಿ ಸಂಕಷ್ಟಕ್ಕೆ‌ ಸಿಲುಕಿದ್ದು, ಸೂಕ್ತ ಪರಿಹಾರ‌ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. 

Latest Videos
Follow Us:
Download App:
  • android
  • ios