Asianet Suvarna News Asianet Suvarna News

ಕೊರೋನಾದಿಂದ ಮೃತಪಟ್ಟ ರೈತರ ನೆರವಿಗೆ ಸರ್ಕಾರ, ಸಹಕಾರಿ ಸಾಲ ಮನ್ನಾ!

* ಕೊರೋನಾದಿಂದ ಮೃತಪಟ್ಟ 10187 ರೈತರ 79.47 ಕೋಟಿ ರೂ. ಸಾಲ ಮನ್ನಾಕ್ಕೆ ಚಿಂತನೆ
* ಸಾಲ ಮನ್ನಾಕ್ಕೆ ಮುಖ್ಯಮಂತ್ರಿಗಳ ಚಿಂತನೆ; ಸಚಿವರು
*  2-4 ದಿನದಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನ
*  ರೈತರ ಸಹಾಯಕ್ಕೆ ನಮ್ಮ ಸರ್ಕಾರ, ಮುಖ್ಯಮಂತ್ರಿಗಳು ಸದಾ ಬದ್ಧ; ಸಹಕಾರ ಸಚಿವರು

Farm loan waiver for COVID-19 victims in Karnataka says ST Somashekar mah
Author
Bengaluru, First Published Jul 14, 2021, 7:39 PM IST

ಬೆಂಗಳೂರು (ಜು. 14)  ಅಪೆಕ್ಸ್, ಡಿಸಿಸಿ ಬ್ಯಾಂಕ್  ಗಳಲ್ಲಿ ಸಾಲ ಪಡೆದಿದ್ದ, ಕೊರೋನಾದಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಗ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಇನ್ನು ಮೂರರಿಂದ ನಾಲ್ಕು ದಿನದಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಹ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಾಫಿ ಬೆಳೆಗಾರರ ನೆರವಿಗೆ ಸರ್ಕಾರ

ಕಳೆದ ಸಾಲಿನಲ್ಲಿ ಸಾಲ ಪಡೆದವರ ಮಾಹಿತಿ

ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಚಿಂತನೆಯನ್ನು ನಡೆಸಿದ್ದಾರೆ.

ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗಳಲ್ಲಿ ಎಷ್ಟು ರೈತರು, ಎಷ್ಟು ಸಾಲ ಮನ್ನಾ ಎಂಬ ಮಾಹಿತಿ ಈ ಕೆಳಗಿನಂತಿದೆ.

1.    ಬಾಗಲಕೋಟೆ - 672 ರೈತರ 54226261 ರೂಪಾಯಿ ಸಾಲ

2.    ಬೆಳಗಾವಿ – 3334 ರೈತರ 23,84,51,700 ರೂಪಾಯಿ ಸಾಲ

3.    ಬಳ್ಳಾರಿ – 357 ರೈತರ 36598411 ರೂಪಾಯಿ ಸಾಲ

4.    ಬೆಂಗಳೂರು – 381 ರೈತರ 23672500 ರೂಪಾಯಿ ಸಾಲ

5.    ಬೀದರ್ – 824 ರೈತರ 54768271 ರೂಪಾಯಿ ಸಾಲ

6.    ಚಿಕ್ಕಮಗಳೂರು – 113 ರೈತರ 20386020 ರೂಪಾಯಿ ಸಾಲ

7.    ಚಿತ್ರದುರ್ಗ – 156 ರೈತರ 16371000 ರುಪಾಯಿ ಸಾಲ

8.    ದಾವಣಗೆರೆ – 402 ರೈತರ 26622071 ರುಪಾಯಿ ಸಾಲ

9.    ಹಾಸನ – 454 ರೈತರ 28642000 ರುಪಾಯಿ ಸಾಲ

10.    ಕಲಬುರಗಿ – 224 ರೈತರ 8738776.43 ರೂಪಾಯಿ ಸಾಲ

11.    ಕೆನರಾ ಶಿರಸಿ (ಉತ್ತರ ಕನ್ನಡ)- 186 ರೈತರ 17098364 ರೂಪಾಯಿ ಸಾಲ

12.    ಕೆಸಿಸಿ ಬ್ಯಾಂಕ್ ಧಾರವಾಡ – 376 ರೈತರ 20710455 ರೂಪಾಯಿ ಸಾಲ

13.    ಕೊಡಗು – 113 ರೈತರ 18299040 ರೂಪಾಯಿ ಸಾಲ

14.    ಕೋಲಾರ – 147 ರೈತರ 25409639 ರೂಪಾಯಿ ಸಾಲ

15.    ಮಂಡ್ಯ – 410 ರೈತರ 27328268 ರೂಪಾಯಿ ಸಾಲ

16.    ಮೈಸೂರು – 281 ರೈತರ 31399000 ರೂಪಾಯಿ ಸಾಲ

17.    ರಾಯಚೂರು- 237 ರೈತರ 19203700 ರೂಪಾಯಿ ಸಾಲ

18.    ಶಿವಮೊಗ್ಗ – 307 ರೈತರ 32701000 ರೂಪಾಯಿ ಸಾಲ

19.    ದಕ್ಷಿಣ ಕನ್ನಡ – 152 ರೈತರ 24063450 ರೂಪಾಯಿ ಸಾಲ

20.    ತುಮಕೂರು – 307 ರೈತರ 18722000 ರೂಪಾಯಿ ಸಾಲ

21.    ವಿಜಯಪುರ – 754 ರೈತರ 51340000 ರೂಪಾಯಿ ಸಾಲ

ಒಟ್ಟಾರೆಯಾಗಿ 10187 ರೈತರ 794751926.43 ರೂಪಾಯಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿ ಸಿದ್ಧವಾಗಿದೆ.

ಕೊರೋನಾ ಸಂಕಷ್ಟದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ರೈತರ ಸಹಾಯಕ್ಕೆ ಧಾವಿಸಬೇಕೆಂಬುದು ಮುಖ್ಯಮಂತ್ರಿಗಳ ಅಭಿಲಾಷೆಯಾಗಿದೆ. ಇಂತಹ ಸಂಕಷ್ಟದಲ್ಲಿರುವ ರೈತ ಕುಟುಂಬಕ್ಕೆ ಸಹಾಯ ಮಾಡಬೇಕು. ಅವರ ಸಂಕಷ್ಟದಲ್ಲೂ ಭಾಗಿಯಾಗಬೇಕು ಎಂಬುದು ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಇಂಥದ್ದೊಂದು ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಸಹಕಾರ ಸಚಿವ  ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.

Follow Us:
Download App:
  • android
  • ios