Asianet Suvarna News Asianet Suvarna News

ರಾಯಚೂರು: 2ನೇ ಪುಣ್ಯಸ್ಮರಣೆ, ಭತ್ತದ ಪೈರಿನಲ್ಲಿ ಅರಳಿದ ಪುನೀತ್ ರಾಜ್‌ಕುಮಾರ್‌..!

ಅ.29ರಂದು ಪುನೀತ್ ರಾಜಕುಮಾರ್ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಅವರಿಗೆ ವಿಶೇಷ ಗೌರವ ಸಲ್ಲಿಸಲು  ಈ ಕಾರ್ಯ ಕೈಗೊಂಡ ಸತ್ಯನಾರಾಯಣ

Fan Sathyanarayana Sketched Puneeth Rajkumar's Photo on Paddy in Raichur grg
Author
First Published Oct 14, 2023, 6:45 AM IST

ರಾಯಚೂರು(ಅ.14):  ಅ.29ಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮನ್ನಗಲಿ 2 ವರ್ಷವಾಗಲಿದ್ದು, ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ರಾಯಚೂರು ಜಿಲ್ಲೆಯ ಅಭಿಮಾನಿಯೊಬ್ಬರು ತಮ್ಮ ಎರಡು ಎಕರೆ ಜಮೀನಲ್ಲಿ ವಿವಿಧ ಭತ್ತದ ತಳಿಗಳ ಮೂಲಕ ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ಪೈರಿನಲ್ಲಿ ಅರಳಿಸಿ ಅಭಿಮಾನ ಮೆರಿದಿದ್ದಾರೆ.

ಜಿಲ್ಲೆ ಮಾನ್ವಿ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪಿನಲ್ಲಿ ರೈತ ಸತ್ಯನಾರಾಯಣ ಅವರು ಈ ರೀತಿ ಪುನೀತ್‌ ಮೇಲಿನ ಅಭಿಮಾನ ಮೆರೆದವರು. ಇದಕ್ಕಾಗಿ ಸತ್ಯನಾರಾಯಣ ಅವರು ಅವರು ತಮ್ಮ 6 ಎಕರೆ ಪೈಕಿ 2 ಎಕರೆ ಜಮೀನಿನಲ್ಲಿ ಗುಜರಾತ್‌ ರಾಜ್ಯದಿಂದ ತಂದ ಗೋಲ್ಡನ್‌ ರೋಸ್‌ ಹಾಗೂ ಕಾಲಾ ಭಟ್ಟಿ ಕಪ್ಪು ಬಣ್ಣದ ಭತ್ತದ ತಳಿ ಜೊತೆ ಸೋನಾಮಸೂರಿ ತಳಿಯ 100 ಕೆಜಿ ಭತ್ತದ ಬೀಜ ಬಿತ್ತಿ ಬೆಳೆ ಬೆಳೆದಿದ್ದಾರೆ. ಇದಕ್ಕಾಗಿ ಸುಮಾರು 3 ಲಕ್ಷ ರು. ಖರ್ಚು ಮಾಡಿದ್ದಾರೆ.

'ರಾಜ್' ಕುಟುಂಬದಲ್ಲಿ ನಿರಂತರ ಗಂಡಾಂತರ: ಈ ಸಂಕಷ್ಟಕ್ಕೆ ಪರಿಹಾರ ಏನು?

ಚೀನಾ ಮತ್ತು ಜಪಾನ್‌ ದೇಶಗಳ ರೈತರು ತಮ್ಮ ಜಮೀನಿನಲ್ಲಿ ರೈಸ್ ಪ್ಯಾಡಿ ಆರ್ಟ್‌ ಹೆಸರಿನಲ್ಲಿ ವಿವಿಧ ಬಣ್ಣದ ಭತ್ತದ ತಳಿಗಳನ್ನು ಬಳಸಿ ಚಿತ್ರ ಬಿಡಿಸುವ ಮಾದರಿಯಲ್ಲಿ ಸತ್ಯನಾರಾಯಣ ಅವರು ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರವನ್ನು ಹೊಲದಲ್ಲಿ ಮೂಡಿಸಿದ್ದಾರೆ.

ಇದೇ ಅ.29ರಂದು ಪುನೀತ್ ರಾಜಕುಮಾರ್ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಅವರಿಗೆ ವಿಶೇಷ ಗೌರವ ಸಲ್ಲಿಸಲು ಸತ್ಯನಾರಾಯಣ ಈ ಕಾರ್ಯ ಕೈಗೊಂಡಿದ್ದಾರೆ.

Follow Us:
Download App:
  • android
  • ios