ಅಣ್ಣ ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯದಲ್ಲಿ ನಡೆದಿದೆ ಅಣ್ಣನ ಎದೆಗೆ ಚಾಕು ಇರಿದು ತಮ್ಮನೇ  ಕೊಲೆಗೈದ

ಮಂಡ್ಯ (ಸೆ.26):  ಅಣ್ಣ ತಮ್ಮಂದಿರ ಜಗಳ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯಲ್ಲಿಂದು ನಡೆದಿದೆ. 

ಅಣ್ಣನ ಎದೆಗೆ ಚಾಕು ಇರಿದು ತಮ್ಮನೇ ಕೊಲೆಗೈದಿದ್ದಾನೆ. ಮಂಡ್ಯದ (Mandya) ವಿದ್ಯಾನಗರದಲ್ಲಿ ಈ ದುರ್ಘಟನೆಯಾಗಿದೆ.

ಅಣ್ಣ ಮಹೇಶ್ (45) ನನ್ನು ತಮ್ಮ ರೇಣುಕಾ ಪ್ರಸಾದ್ ಕೊಲೆ ಮಾಡಿದ್ದಾರೆ. ಅಣ್ಣ ಮಹೇಶ್ ಕೊಲೆ ಬಳಿಕ ತಮ್ಮ ಸ್ಥಳದಿಂದ ಪರಾರಿಯಾಗಿದ್ದಾನೆ. ತಲೆ ಮರೆಸಿಕೊಂಡಿರೊ ರೇಣುಕಾ ಪ್ರಸಾದ್ಗಾಗಿ ಶೋಧ ನಡೆಯುತ್ತಿದೆ. 

ಅಣ್ಣ ಮಹೇಶ್ ಗೆ ಖಾಸಗಿ ಸಹಕಾರ ಸಂಘದಲ್ಲಿ ಜಾಮೀನಿನ ಮೇಲೆ ತಮ್ಮ ರೇಣುಕಾ ಪ್ರಸಾದ್ ಸಾಲ (Loan) ಕೊಡಿಸಿದ್ದ. ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ಅಣ್ಣ ಮಹೇಶ್ ನಷ್ಟದಿಂದಾಗಿ ಸಾಲ ಮರುಪಾವತಿ ಮಾಡಿರಲಿಲ್ಲ. 

ಚಿಕ್ಕಬಳ್ಳಾಪುರದಲ್ಲಿ ಕೈದಿ ಲಾಕಪ್‌ ಡೆತ್‌: ಆತ್ಮಹತ್ಯೆ?

ಈ ಸಾಲ ಮರು ಪಾವತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ ತಮ್ಮಂದಿರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದೆ ಜಗಳ ವಿಕೋಪಕ್ಕೆ ತಿರುಗಿ ಅಣ್ಣನಿಗೆ ಚಾಕು ಇರಿದು ರೇಣುಕಾ ಪ್ರಸಾದ್ ಎಸ್ಕೇಪ್ ಆಗಿದ್ದಾನೆ

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹೇಶ್ ನನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹೇಶ್ ಸಾವಿಗೀಡಾಗಿದ್ದಾರೆ. 

ಈ ಪ್ರಕರಣ ಸಂಬಂಧ ಮಂಡ್ಯದ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ನಾಪತ್ತೆಯಾಗಿರುವ ತಮ್ಮನ ಶೋಧಕ್ಕೆ ಪೊಲೀಸರು ಇಳಿದಿದ್ದಾರೆ. 

ಶೀಲ ಶಂಕೆ: ಪತ್ನಿ ಕೊಂದು ಧರ್ಮಸ್ಥಳದಲ್ಲಿ ಹರಕೆ ತೀರಿಸಿದ ಪಾಪಿ ಗಂಡ..!

ಅತ್ತ ಮೈಸೂರಿನಲ್ಲಿ ಅಣ್ಣನ ಸಾವಿನ ದುಃಖ ತಾಳದೆ ತಮ್ಮ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಇಲ್ಲಿ ಸ್ವಂತ ಅಣ್ಣನೇ ತಮ್ಮನ ಕೈಯಿಂದಲೇ ಕೊಲೆಯಾಗಿದ್ದಾರೆ. 

ಅಣ್ಣ- ತಮ್ಮ ಸಾವು

ಮನೆಯಲ್ಲಿ ಅಣ್ಣ ತಮ್ಮ ಇಬ್ಬರೂ ಆತ್ಮಹತ್ಯೆ (Suicide) ಶರಣಾಗಿ ಸಾವಿನಲ್ಲೂ ಸಹೋದರರು ಒಂದಾದ ಘಟನೆ ಮೈಸೂರಲ್ಲಿ (mysuru) ನಡೆದಿದೆ. 

ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಅಣ್ಣ ಸಿದ್ದರಾಜು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಸಾವಿನ ಸುದ್ದಿ ತಿಳಿದು ಕ್ರಿಮಿನಾಶಕ ಸೇವಿಸಿ ತಮ್ಮ‌ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಮ್ಮ ನಾಗರಾಜು ವಿಷ ಸೇವನೆ ಮಾಡಿದ್ದು ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ (hospital) ದಾಖಲಿಸಲಾಗಿತ್ತು. ಅದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.