ರೇಷ್ಮೆ ಬೆಲೆ ಕುಸಿತ: ಸಂಕಷ್ಟದಲ್ಲಿ ಬೆಳೆಗಾರರು

ರೇಷ್ಮೆ ಬೆಲೆ ದಿಢೀರ್‌ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿ ಕಿಲೋ ದ್ವಿತಳಿ ರೇಷ್ಮೆ ಗೂಡಿಗೆ 800 ರು., ಸಿಬಿ ಗೂಡಿಗೆ 600 ರು. ಬೆಲೆ ನಿಗದಿಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟ ಮತ್ತು ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಗುಡಿದೊಡ್ಡಿ ಶಿವಲಿಂಗಯ್ಯ ಎಚ್ಚರಿಕೆ ನೀಡಿದರು.

Fall in silk prices: Growers in trouble  snr

 ಮಂಡ್ಯ :  ರೇಷ್ಮೆ ಬೆಲೆ ದಿಢೀರ್‌ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿ ಕಿಲೋ ದ್ವಿತಳಿ ರೇಷ್ಮೆ ಗೂಡಿಗೆ 800 ರು., ಸಿಬಿ ಗೂಡಿಗೆ 600 ರು. ಬೆಲೆ ನಿಗದಿಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟ ಮತ್ತು ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಗುಡಿದೊಡ್ಡಿ ಶಿವಲಿಂಗಯ್ಯ ಎಚ್ಚರಿಕೆ ನೀಡಿದರು.

ಈವರೆಗೆ ಪ್ರತಿ ಕಿಲೋ ದ್ವಿತಳಿ ರೇಷ್ಮೆ ಗೂಡಿಗೆ 800 ರು.ರಿಂದ 900ರು., ಸಿಬಿ ಗೂಡಿಗೆ 600-700 ರು. ಬೆಲೆ ಇತ್ತು. ಆದರೆ, ಪ್ರಸ್ತುತ ಈ ಬಗ್ಗೆ 400-500 ರೂ.ನಷ್ಟುದಿಢೀರನೆ ಕುಸಿತ ಕಂಡಿದೆ. ವರ್ತಕರು ಕಡಿಮೆ ಬೆಲೆಗೆ ರೇಷ್ಮೆಗೂಡು ಖರೀದಿಸುತ್ತಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಸಂಕಷ್ಟತೋಡಿಕೊಂಡರು.

ಹಿಂದಿ ಪ್ರತಿ ಕಿಲೋ ರೇಷ್ಮೆ ನೂಲಿಗೆ 8ರಿಂದ 9ಸಾವಿರ ರೂ. ಬೆಲೆಯಿತ್ತು. ಆದರೀಗ ಅದು 3ರಿಂದ 4 ಸಾವಿರ ರು.ಗೆ ಕುಸಿದಿದೆ. ನೂಲು ಬಿಚ್ಚಣಿಕೆದಾರರ ಕುಟುಂಬಗಳು ತೊಂದರೆಗೆ ಸಿಲುಕಿವೆ. ಹೀಗಾಗಿ ರೇಷ್ಮೆ ಗೂಡಿನ ಬೆಲೆ ಕುಸಿತದಿಂದಾಗಿ ಆರ್ಥಿಕವಾಗಿ ನಲುಗಿರುವ ರೇಷ್ಮೆ ಬೆಳೆಗಾರರು ಮತ್ತು ಬಿಚ್ಚಾಣಿದಾರರ ಹಿತ ಕಾಯಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಹಿಂದಿನಂತೆ ರೇಷ್ಮೆ ಗೂಡಿನ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು. ಇಲ್ಲವೇ ಸರ್ಕಾರವೇ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು.

ಕೋವಿಡ್‌ ಸಮಯದಲ್ಲಿ ನಗರ/ಪಟ್ಟಣಗಳಿಂದ ಹಳ್ಳಿಗಳಿಗೆ ವಾಪಾಸ್ಸಾಗಿದ್ದ ಎಷ್ಟೋ ಯುವಜನರು ಬದುಕಿಗಾಗಿ ರೇಷ್ಮೆ ಕೃಷಿ ಆರಂಭಿಸಿದ್ದರು. ಅವರೆಲ್ಲರೂ ಈಗ ಮತ್ತೊಂದು ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬಗಳು ಕಂಗಾಲಾಗಿವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ಬೂದನೂರು ಅಪ್ಪಾಜಿಗೌಡ, ದುಂಡನಹಳ್ಳಿ ಅಪ್ಪಾಜಿ, ಕಾಗೇಹಳ್ಳದದೊಡ್ಡಿ ಚನ್ನಪ್ಪ, ಕೋಣಸಾಲೆ ಮರಿಸ್ವಾಮಿಗೌಡ, ಮುದ್ದುಂಗೆರೆ ಪುಟ್ಟೇಗೌಡ ಹಾಜರಿದ್ದರು.

ಕಡಿಮೆ ಖರ್ಚು -  ಆದಾಯ ಅಧಿಕ

  ಕೆ.ಆರ್‌. ನಗರ :  ಇಲಾಖೆಯವರ ಮಾರ್ಗದರ್ಶನ ಪಡೆದು ತಾಂತ್ರಿಕತೆ ಅಳವಡಿಸಿಕೊಂಡು ರೇಷ್ಮೆ ಬೆಳೆಯನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂದು ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿ ಮೀನಾಳ್‌ ಹೇಳಿದರು.

ಸಾಲಿಗ್ರಾಮ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ನಡೆದ ರೇಷ್ಮೆ ದ್ವಿತಳಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಈ ಬೆಳೆಯು ಉತ್ತಮ ಆದಾಯ ತರುವುದಾಗಿದ್ದು, ಇತರ ಬೆಳೆಗಳ ಜತೆಗೆ ಬೆಳೆದು ಆರ್ಥಿಕವಾಗಿ ಅಭಿವೃದ್ದಿ ಹೊಂದಬಹುದು ಎಂದರು.

ರೇಷ್ಮೆ ಹುಳುಗಳಿಗೆ ತಗಲುವ ರೋಗ ಮತ್ತು ಅದರ ಹತೋಟಿಗೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ರೈತರಿಗೆ ಸವಿಸ್ತಾರವಾದ ಮಾಹಿತಿ ನೀಡಿದ ಅವರು, ಬೆಳೆಗಾರರು ನಿಯಮಿತವಾಗಿ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ತಜ್ಞರ ಮಾರ್ಗದರ್ಶನ ಪಡೆಯಬೇಕೆಂದು ಸಲಹೆ ನೀಡಿದರು.

ಕುದೇರು ರೇಷ್ಮೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ಹಿಪ್ಪುನೇರಳೆ ತೋಟ ನಿರ್ವಹಣೆ ಮತ್ತು ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಅನುಸರಿಸಬಹುದಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಕೆ.ಆರ್‌. ನಗರ ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ ಎಂ. ಶಿವಮೂರ್ತಿ ಮಾತನಾಡಿ, ಸರ್ಕಾರದ ವತಿಯಿಂದ ಬೆಳೆಗಾರರಿಗೆ ದೊರೆಯುವ ಸವಲತ್ತು ಹಾಗೂ ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಮಾಯಗೌಡನಹಳ್ಳಿ ಗ್ರಾಪಂ ಉಪಾಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ರಾಣಿಗಣೇಶ್‌, ಸ್ವಾಮೀಗೌಡ, ಗ್ರಾಮದ ಮುಖಂಡರಾದ ದಾಸೇಗೌಡ, ನಿಂಗೇಗೌಡ, ರೇಷ್ಮೆ ವಿಸ್ತರಣಾಧಿಕಾರಿ ಕೆ.ಎಂ. ರವೀಶ್‌ಕುಮಾರ್‌, ರೇಷ್ಮೆ ನೀರೀಕ್ಷಕಿ ಎಸ್‌. ಆತ್ಮರಾಗಿಣಿ ಮತ್ತು ರೈತರು ಇದ್ದರು.

Latest Videos
Follow Us:
Download App:
  • android
  • ios