ಕೊರೋನಾ ಕುರಿತು ಸುಳ್ಳು ಮಾಹಿತಿ : ಭೀತಿ ಸೃಷ್ಟಿಸಲೆತ್ನಿಸಿದ ಬುರ್ಖಾಧಾರಿ ಮಹಿಳೆ

 ಕೊರೋನಾಕ್ಕೆ ವೈದ್ಯರ ಬಳಿ ಲಸಿಕೆ ಪಡೆಯಲು ಹೋದರೆ ಜನರು ಸಾಯುತ್ತಾರೆ ಎಂದು ಮಹಿಳೆ  ಅಪಪ್ರಚಾರ ಮಾಡಿದ್ದಾರೆ. ಇದರಿಂದ ಕೊರೋನಾ ಸಂಬಂಧ ಸುಳ್ಳು ಮಾಹಿತಿ ಹಬ್ಬಿಸಿ  ಭೀತಿ ಸೃಷ್ಟಿಸಲೆತ್ನಿಸಿದ ಅಪರಿಚಿತ ಮಹಿಳೆ ವಿರುದ್ಧ ದೂರು ದಾಖಲಾಗಿದೆ. 

Fake news Spreads About Covid 19 Case Registered Against Bhatkal woman snr

 ಕಾರವಾರ (ಮೇ.02): ದೇಶದಲ್ಲಿ ಕೊರೋನಾ ಮಹಾಮಾರಿ ಉಲ್ಬಣವಾಗುತ್ತಿದೆ. ಇದರ ಬೆನ್ನಲ್ಲೇ ಅನೇಕ ರೀತಿಯ ಊಹಾಪೋಹಳು ಹಬ್ಬುತ್ತಿವೆ. ಕಾರವಾರದಲ್ಲಿ ಬುರ್ಖಾದಾರಿ  ಮಹಿಳೆಯೋರ್ವರು ಕೊರೊನಾ ಕುರಿತು ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸಿ, ಭೀತಿ ಸೃಷ್ಠಿಸಲೆತ್ನಿಸಿದ ಘಟನೆ ಬೆಳಕಿಗೆ ಬಂದಿದೆ. 

ಕೊರೋನಾಕ್ಕೆ ವೈದ್ಯರ ಬಳಿ ಲಸಿಕೆ ಪಡೆಯಲು ಹೋದರೆ ಜನರು ಸಾಯುತ್ತಾರೆ ಎಂದು ಮಹಿಳೆ  ಅಪಪ್ರಚಾರ ಮಾಡಿದ್ದು, ಯೂಟ್ಯೂಬ್‌ನಲ್ಲಿ ತಪ್ಪು ಮಾಹಿತಿ ನೀಡಿ ಜನತಾ ಕರ್ಫ್ಯೂ ವಿರುದ್ಧವೂ ಕಿಡಿಕಾರಿದ್ದಾರೆ  ಬುರ್ಖಾಧಾರಿ ಮಹಿಳೆ. ಆಕೆಯ ಅಸಂಬದ್ಧ ಹೇಳಿಕೆ ರೆಕಾರ್ಡ್ ಮಾಡಿರುವ  "ಶಾಬಂದ್ರಿ ಆನ್‌ಲೈನ್ ಭಟ್ಕಳ‌ ನ್ಯೂಸ್"  ಎ. 28ರಂದು ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿದೆ.

3ನೇ ಅಲೆ ತಡೆಗೆ ಈಗಲೇ ಪ್ಲಾನ್‌: ಸಿಬ್ಬಂದಿ ಕೊರತೆ ನೀಗಿಸಲೂ ಮಹತ್ವದ ಹೆಜ್ಜೆ!

ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದು,  ಲಿಂಕ್‌ ಅನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಆಕೆ ಮಾತನಾಡಿ ದೇವರ ದಯೆಯಿಂದ ಕೊರೋನಾ ಈಗಾಗಲೇ ಖತಂ ಆಗಿದೆ.  ಆಂಧ್ರದಲ್ಲಿ, ಮಹಾರಾಷ್ಟ್ರದಲ್ಲಿ, ಎಷ್ಟು ಜನ ಸತ್ತಿದ್ದಾರೆ ಎಂದು ಮಾಧ್ಯಮಗಳು ಸುಮ್ಮನೆ ಜನರಿಗೆ ಹೆದರಿಸುತ್ತಿವೆ. ಮಾಧ್ಯಮಗಳು ಕಾಲು ಭಾಗ ಸತ್ಯಹೇಳಿ, ಮುಕ್ಕಾಲು ಭಾಗ ಸುಳ್ಳು ಹೇಳುವ ಮೂಲಕ ಜನರಿಗೆ ಫಿಲಂ ತೋರಿಸ್ತಿವೆ. ಜನರು ಕೊರೊನಾಕ್ಕೆ ಹೆದರದೆ ಮನೆಯಲ್ಲಿ ಇದ್ದು, ಮನೆ ಮದ್ದೇ ಮಾಡಿಕೊಳ್ಳಿ ಎಂದಿದ್ದಾರೆ.

ರಿಲಯನ್ಸ್ ದೇಶದ ಅತಿದೊಡ್ಡ ಆಕ್ಸಿಜನ್ ತಯಾರಕ..ಒಂದೇ ಘಟಕ

ಕೊರೋನಾ ಎಂದು ಯಾರೂ ಆಸ್ಪತ್ರೆಗೆ ಹೋಗಬೇಡಿ, ಹೋದಲ್ಲಿ ಇಂಜೆಕ್ಷನ್ ಕೊಟ್ಟು ಜನರಿಗೆ ನಿಶ್ಯಕ್ತಿ ಆಗುವಂತೆ ಮಾಡುತ್ತಾರೆ. ಇಂಜೆಕ್ಷನ್ ಕೊಟ್ಟ ನಂತರ ಮೂಳೆ ಸವೆಯುತ್ತವೆ, ಬಳಿಕ ಜನರು ಸಾಯುತ್ತಾರೆ. ಆದ್ದರಿಂದ ಯಾರೂ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಇರಿ. 

"

ರಂಝಾನ್ ಒಳ್ಳೆಯ ವ್ಯಾಪಾರದ ಸಮಯವಾಗಿದ್ದು, ನಮ್ಮ ಜನರಿಗೆ ವ್ಯಾಪಾರವಿಲ್ಲದಂತಾಗಿದೆ. ರಂಝಾನ್ ಸಮಯದಲ್ಲಿ ಲಾಕ್‌ಡೌನ್ ಮಾಡ್ತಾರೆ, ಹಿಂದೂಗಳ ಹಬ್ಬದ ಸಮಯದಲ್ಲಿ ಏನೂ ಇಲ್ಲ.  ಕೊರೋನಾ ಅನ್ನೋದೆ ಸುಳ್ಳಾಗಿದ್ದು, ಜನರು ಲಾಕ್‌ಡೌನ್ ಬಿಸಾಕಿ ಹೊರಬರಬೇಕು.  ಭಟ್ಕಳದ ತಂಜೀಂನ ಜನರು ಹಾಗೂ  ಜಮಾಅತ್ ಈ ಬಗ್ಗೆ ಸುಮ್ಮನಿರದೆ ಧ್ವನಿ‌ ಎತ್ತಬೇಕು ಎಂದು ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಮಾತನಾಡಿ ಮಹಿಳೆ ಜನರ ‌ದಾರಿ ತಪ್ಪಿಸಲೆತ್ನಿಸಿದ್ದಾರೆ. 

ಈ ಅಪರಿಚಿತ ಮಹಿಳೆಯ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಸುವೋ ಮೋಟೊ ಪ್ರಕರಣ ದಾಖಲಿಸಿದ ಪಿಎಸ್‌ಐ ಸುಮಾ.ಬಿ. ತನಿಖೆಗೆ ಆದೇಶಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios