ಬೆಂಗಳೂರು (ಅ.06): ಬಿಬಿಎಂಪಿ ಪಕ್ಕದ ರಸ್ತೆಗೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಹೆಸರು ಇಡಲಾಗಿದೆ. ಹೀಗೊಂದು ಫೊಟೊ ವೈರಲ್ ಆಗಿದೆ. 

ಬಿಬಿಎಂಪಿ ಆಯುಕ್ತರ ಗಮನಕ್ಕೂ ಬಾರದೇ ಈ ಘಟನೆ ನಡೆದು ಹೋಗಿದೆಯಾ..? ಅಥವಾ ಬಿಬಿಎಂಪಿ ಸದ್ದಿಲ್ಲದೇ ರಸ್ತೆಗೆ ಹೆರಿಡುವ ಕೆಲಸ ನಡೆಸಿತಾ ಎನ್ನುವ ಪ್ರಶ್ನೆ ಎದ್ದಿದೆ. 

ಆದರೆ ಈ ಫೊಟೊದಿಂದ ಬಿಬಿಎಂಪಿ ಆಯುಕ್ತರೇ ತಬ್ಬಿಬ್ಬಾಗಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೆಸರಿನ ಎಡಿಟೆಡ್ ಫೊಟೊ ವೈರಲ್ ಆಗಿದೆ ಎಂದು ಹೇಳಿದ್ದಾರೆ. ಈ ಫೋಟೊ ಬಿಬಿಎಂಪಿ ಪಕ್ಕದ ರಸ್ತೆ, ಕೆಂಗೇರಿ ರಸ್ತೆ ಎನ್ನುವಂತೆ ವೈರಲ್ ಆಗಿದೆ.

ಸೈಟ್ ಮಾರಾಟ : ಮೂಲ ಬೆಲೆಗಿಂತ 85 ಕೋಟಿ ಲಾಭ ...

ಆದರೆ ಇದೊಂದು ನಕಲಿ ಫೊಟೊ ಎಂದು ಬಿಬಿಎಂಪಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.