Asianet Suvarna News Asianet Suvarna News

Nargund: ಮುಸ್ಲಿಂ ಯುವಕನ ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ: ಸಿದ್ದರಾಮಯ್ಯ

*  ಕೊಲೆಯಾದ ಮುಸ್ಲಿಂ ಯುವಕ ಶಹಪೂರನ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಿದ್ದು ಸಾಂತ್ವನ
*  ಯುವಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲು ಅಧಿವೇಶನದಲ್ಲಿ ಆಗ್ರಹಿಸಲಾಗುವುದು
*  ಪೊಲೀಸರು ಏಕೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ

Failure of the Police Was the Reason for the Muslim Young Man Murder Says Siddaramaiah grg
Author
Bengaluru, First Published Jan 26, 2022, 12:49 PM IST

ನರಗುಂದ(ಜ.26):  ಪೊಲೀಸರ(Police) ವೈಫಲ್ಯದಿಂದ ಮುಸ್ಲಿಂ(Muslim) ಯುವಕನ ಕೊಲೆ(Murder) ನಡೆದಿದೆ. ಇದನ್ನು ವಿಧಾನಸಭೆ ಅಧಿವೇಶನದಲ್ಲಿ ಸಮಗ್ರ ಚರ್ಚೆಗೆ ಒತ್ತಾಯಿಸುವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ಇತ್ತೀಚೆಗೆ ಕೊಲೆಯಾದ ಮುಸ್ಲಿಂ ಯುವಕ ಸಮೀರ ಶಹಪೂರನ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರನ್ನು ಸಂತೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಯುವಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ(compensation) ನೀಡಲು ಅಧಿವೇಶನದಲ್ಲಿ(Assembly Session) ಆಗ್ರಹಿಸಲಾಗುವುದು. ಪ್ರಕರಣದ ಕುರಿತು ಗದಗ ಎಸ್ಪಿ ಯೊಂದಿಗೆ ಮಾತನಾಡಿದ್ದೇನೆ. ಇದಕ್ಕೆ ಪೊಲೀಸರ ವೈಫಲ್ಯವೇ ಆಗಿದೆ ಎಂದು ತಿಳಿಸಿದ್ದೇನೆ. ಇದರಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಸರ್ಕಾರಕ್ಕೆ ಒತ್ತಾಯಿಸುವೆ. ಜತೆಗೆ ಯಾವುದಾದರೂ ತನಿಖಾ ಸಂಸ್ಥೆಯಿಂದ ಅಥವಾ ಸಿಬಿಐಗೆ ವಹಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆಡಳಿತ ಪಕ್ಷ ಬಿಜೆಪಿ(BJP) ಬಜರಂಗದಳ, ಸಂಘ ಪರಿವಾರವನ್ನು ಪ್ರೋತ್ಸಾಹಿಸುತ್ತಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಘಟನೆ ನಡೆಯಲು ಪ್ರಚೋದನೆ ನೀಡಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಈ ರೀತಿ ಘಟನೆಗಳು ಮರುಕಳಿಸದಂತೆ ಪೊಲೀಸ್‌ ಇಲಾಖೆ(Police Department) ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.

Mekedatu project ಮೇಕೆದಾಟು ವಿರೋಧಿಸಲು ತಮಿಳನಾಡಿಗೆ ಹಕ್ಕಿಲ್ಲ, ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದು ಕಿಡಿ!

ಈ ಯುವಕನ ಮನೆಗೆ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಾದ ಸಿ.ಸಿ. ಪಾಟೀಲ(CC Patil) ಭೇಟಿ ನೀಡಬೇಕಿತ್ತು. ಭೇಟಿ ನೀಡದೇ ಇರುವುದು ರಾಜ್ಯ ಸರ್ಕಾರದ(Government of Karnataka) ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ತಂದೆಗೆ ಸಾಂತ್ವನ:

ಯುವಕನ ತಂದೆ ಸುಬಾನಸಾಬನ್ನು ಸಂತೈಸಿ ಯುವಕನ ಬಗ್ಗೆ ಮಾಹಿತಿ ಪಡೆದರು. ನಂತರ ಎಸ್ಪಿಗೆ ಪೋನ್‌ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯ ಪೊಲೀಸರು ಏಕೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು. ಕೂಡಲೇ ಕ್ರಮಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಆರ್‌. ಯಾವಗಲ್‌, ಎನ್‌.ಎಚ್‌. ಕೋನರಡ್ಡಿ, ವಿಧಾನಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ, ರಾಜು ಕಲಾಲ, ಡಾ. ಸಂಗಮೇಶ ಕೊಳ್ಳಿಯವರ, ಸಿಕಂದರ ಪಠಾಣ, ಸಮದ್‌ ಮುಲ್ಲಾ, ಪ್ರವೀಣ ಯಾವಗಲ್‌, ಗುರಪಾದಪ್ಟ, ಕೃಷ್ಣಾ ಗೊಂಬಿ, ಖಲೀಫ, ಡಿ.ಎಂ. ನಾಯ್ಕರ. ದಾವಲ್‌ ಹೂಲಿ, ಸಾಠೆ, ಶಿವಾನಂದ ಬನಹಟ್ಟಿ, ಎಂ.ಎಂ. ಜಾವೂರ ಮುಸ್ಲಿಂ ಸಮಾಜದ ಹಿರಿಯರು, ಕಾಂಗ್ರೆಸ್‌ ಮುಖಂಡರಿದ್ದರು.

ಹಳೆ ವೈಷಮ್ಯಕ್ಕೆ ಯುವಕನ ಬಲಿ: ನರ​ಗುಂದ​ದಲ್ಲಿ ಬಿಗು​ವಿನ ವಾತಾ​ವ​ರಣ

ನರಗುಂದ: ಪಟ್ಟಣದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆ ಜ.18 ರ ರಾತ್ರಿ ಪುರಸಭೆ ಹಿಂದೆ ಒಂದು ಕೋಮಿನ ಯುವಕರು, ಮತ್ತೊಂದು ಕೋಮಿನ ಇಬ್ಬರು ಯುವಕರನ್ನು ಚೂರಿಯಿಂದ ಇರಿದಿದ್ದು, ಘಟನೆಯಲ್ಲಿ ಗಾಯಗೊಂಡ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ(Hubballi) ಕಿಮ್ಸ್‌ನಲ್ಲಿ(KIMS) ಜ.18 ರ ಬೆಳಗ್ಗೆ ಮೃತಪಟ್ಟಿದ್ದನು(Death).

Karnataka Politics: ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಸಮೀರ ಸುಬಾನಸಾಬ್‌ ಶಹಪುರ (20) ಎಂಬಾತನೇ ಮೃತಪಟ್ಟ ಯುವಕ. ಇನ್ನು ಶಮಸೀರಖಾನ್‌ ನಾಸಿರಖಾನ್‌ ಪಠಾಣ ತೀವ್ರ ಗಾಯಗೊಂಡಿದ್ದು(Injured), ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಘಟನೆ ಕುರಿತು ನರ​ಗುಂದ(Nargund) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು ನಾಲ್ವರು ಆರೋಪಿಗಳನ್ನು(Accused) ಬಂಧಿಸಿದ್ದರು(Arrest). ನರಗುಂದ ಪಟ್ಟಣದ ಮಲ್ಲಿಕಾರ್ಜುನ ಹಿರೇಮಠ, ಸಕ್ರಪ್ಪ ಕಾಕನೂರ, ಚನ್ನು ಅಕ್ಕಿ, ಸಂಜು ನಲವಡೆ ಎಂಬ​ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ದೇವರಾಜು ತಿಳಿಸಿದ್ದರು.

ಘಟನೆ ಪರಿ​ಣಾಮ ಪಟ್ಟಣದ ದಂಡಾಪುರ, ಲೋದಿಗಲ್ಲಿ ಕೆಲವು ಮಾರುಕಟ್ಟೆ ಪ್ರದೇಶಗಳಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾ​ಣ​ವಾ​ಗಿತ್ತು. ಪುರಸಭೆ ಸಮೀಪದ ಸರ್ಕಾರಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು(Students) ಮಧ್ಯಾಹ್ನವೇ ಮನೆಗೆ ಕಳಿಸಿ ಶಾಲೆ ಬಂದ್‌ ಮಾಡಲಾಗಿದ್ದು, ನರ​ಗುಂದದಲ್ಲಿ ಬಿಗು​ವಿನ ವಾತಾ​ವ​ರಣ ಸೃಷ್ಟಿ​ಯಾ​ಗಿತ್ತು.
 

Follow Us:
Download App:
  • android
  • ios