ಬೇಲೂರು (ಆ.27):  ಗಂಡನಿಗೆ ಅನೈತಿಕ ಸಂಬಂಧವಿದೆ ಎಂಬ ಹಿನ್ನೆಲೆಯಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ರಾತ್ರಿಯಿಡೀ ಶವದೊಡನೆ ಮಲಗಿ ಬೆಳಿಗ್ಗೆ ಪೊಲೀಸ್‌ ಠಾಣೆಯಲ್ಲಿ ಶರಣಾದ ಘಟನೆ ತಾಲೂಕಿನ ಕಲ್ಲಹಳ್ಳಿ ವಾಗಿನಕೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಚಂದ್ರೇಗೌಡ(52) ಕೊಲೆಗೀಡಾದ ವ್ಯಕ್ತಿ. ಇಂದ್ರಮ್ಮ ಎಂಬುವರು ಕೊಲೆ ಮಾಡಿದ ಹೆಂಡತಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಗಂಡನಿಗೆ ಅನೈತಿಕ ಸಂಬಂಧವಿದ್ದು, ಮನೆಗೆ ಸರಿಯಾಗಿ ಬರುತ್ತಿಲ್ಲ ಎಂದು ಜಗಳ ನಡೆಯುತ್ತಲೇ ಇತ್ತು.

ಪಿಶಾಚಿಯೂ ನಾಚುವಂಥ ಹೀನ ಕೃತ್ಯ! ಕೊಲೆ ಮಾಡಿ ರೇಪ್, ಸಿಸಿಟಿವಿಯಲ್ಲಿ ಸೆರೆ...

ಇದೇ ವಿಚಾರಕ್ಕೆ ಮಂಗಳವಾರ ರಾತ್ರಿ ಕೂಡ ಜಗಳ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಹಿಳೆಯ ಕೋಪ ವಿಕೋಪಕ್ಕೆ ತಿರುಗಿದ್ದು, ಪತಿ  ಚಂದ್ರೇಗೌಡ ಮಲಗಿದ ಮೇಲೆ ಮಚ್ಚಿನಿಂದ ಕತ್ತು ಹಾಗೂ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.

ಪತಿಯನ್ನು ಕೊಲೆ ಮಾಡಿದ್ದಲ್ಲದೇ ಬೆಳಗಿನ ಜಾವದವರೆಗೂ ರಕ್ತಸಿಕ್ತವಾದ ಶವದ ಜೊತೆಗೇ ಪತ್ನಿ ಇಂದ್ರಮ್ಮ ಇದ್ದಳು. ನಂತರ ಬೆಳಗ್ಗೆ ಠಾಣೆಗೆ ಬಂದು ಶರಣಾದ ಇಂದ್ರಮ್ಮನನ್ನು ಪೊಲೀಸರು ಬಂಧಿ​ಸಿ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ಚೇಂಬರ್‌ಲ್ಲೇ ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ತಹಶೀಲ್ದಾರ್ ಕಿಸ್ಸಿಂಗ್ ವಿಡಿಯೋ ವೈರಲ್

"