ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಇರಲಿದೆ ಬಸ್‌ ಸೇವೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಡರಾತ್ರಿವೆಗೂ ಕೂಡ ಬಸ್ ಸೇವೆ ಇರಲಿದೆ. ಹೊಸ ವರ್ಷ ಆಚರಣೆ ಮಾಡುವವರ ಅನುಕೂಲದ ದೃಷ್ಟಿಯಿಂದ ಬಸ್ ಸೇವೆ ವಿಸ್ತರಿಸಲಾಗಿದೆ. 

Extra BMTC buses for new year celebrations Bengaluru

ಬೆಂಗಳೂರು [ಡಿ.31]:  ಡಿಸೆಂಬರ್‌ 31ರ ರಾತ್ರಿ ಹೊಸ ವರ್ಷಾಚರಣೆಗಾಗಿ ನಗರದ ವಿವಿಧ ಭಾಗಗಳಲ್ಲಿ ಹೆಚ್ಚಿನ ಜನರು ಸೇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಿಗೆ ತಡರಾತ್ರಿವರೆಗೂ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡುವುದಾಗಿ ಬಿಎಂಟಿಸಿ ತಿಳಿಸಿದೆ. 

ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ, ಕೆಂಪೇಗೌಡ ಬಸ್‌ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆಯಿದೆ. ಬಿಎಂಆರ್‌ಸಿಎಲ್‌ ತಡರಾತ್ರಿವರೆಗೂ ಮೆಟ್ರೋ ರೈಲು ಸೇವೆ ನೀಡಲು ಮುಂದಾಗಿದೆ. ಹಾಗಾಗಿ ಬಿಎಂಟಿಸಿ ಸಹ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮದ್ಯ ವಹಿವಾಟಿಗೆ ಶುಕ್ರದೆಸೆ! ಮಾರಾಟ ಹೆಚ್ಚಳ...

ಬಿಎಂಟಿಸಿ ಪ್ರಸ್ತುತ ರಾತ್ರಿ ವೇಳೆ ನಗರದ ವಿವಿಧ ಸ್ಥಳಗಳಿಗೆ 143 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ವಿಜಯನಗರ ಮೆಟ್ರೋ ನಿಲ್ದಾಣದಿಂದ ಬನಶಂಕರಿ ಮೆಟ್ರೋ ನಿಲ್ದಾಣ, ಉಲ್ಲಾಳು ಉಪನಗರ, ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ಕೆಂಗೇರಿ, ಬಿಇಎಂಎಲ್‌ 5ನೇ ಹಂತ, ಬನಶಂಕರಿ ಮೆಟ್ರೋ ನಿಲ್ದಾಣದಿಂದ ಕಗ್ಗಲೀಪುರ, ಜಯನಗರ ಮೆಟ್ರೋ ನಿಲ್ದಾಣದಿಂದ ವಡ್ಡರಹಳ್ಳಿ, ಜಂಬೂ ಸವಾರಿ ದಿಣ್ಣೆ, ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ವಿದ್ಯಾರಣ್ಯಪುರ, ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ವಿದ್ಯಾರಣ್ಯಪುರ, ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಚಿಕ್ಕಬಾಣಾವಾರ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ವೈಟ್‌ಫೀಲ್ಡ್‌ ಟಿಟಿಎಂಸಿ, ಕೆ.ಆರ್‌.ಪುರಂ, ಸೆಂಟ್ರಲ್‌  ಸಿಲ್ಕ್ ಬೋರ್ಡ್‌ಗೆ ಈ ಫೀಡರ್‌ ಬಸ್‌ಗಳು ಸೇವೆ ನೀಡಲಿವೆ ಎಂದು ಬಿಎಂಟಿಸಿ ತಿಳಿಸಿದೆ.

Latest Videos
Follow Us:
Download App:
  • android
  • ios