Asianet Suvarna News Asianet Suvarna News

ಅಂತಾರಾಷ್ಟ್ರೀಯ ಮಾರ್ಕೆಟ್‌ನಲ್ಲಿ ಭರ್ಜರಿ ಬೇಡಿಕೆ: ಕೊಪ್ಪಳದಿಂದ ಮೆಕ್ಕೆಜೋಳ ರವಾನೆ

ಅತಿಯಾದ ಮಳೆಯಿಂದಾಗಿ ಇಳುವರಿ ಕುಸಿತವಾಗಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಳವಾಗಿದೆ. ಈಗಾಗಲೇ ಕೊಪ್ಪಳದಿಂದ ನಾನಾ ರಾಜ್ಯಗಳಿಗೆ ಮೆಕ್ಕೆಜೋಳ ರವಾನೆಯಾಗುತ್ತಿದೆ. 

Export of Maize from Koppal Due to Huge demand in International Market grg
Author
First Published Oct 25, 2022, 2:25 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.25):  ಮೆಕ್ಕೆಜೋಳ ಖರೀದಿಗೆ ನಾನಾ ದೇಶಗಳು ಮುಂದೆ ಬಂದಿವೆ. ಹೀಗಾಗಿ ಅತಿಯಾದ ಮಳೆಯಿಂದಾಗಿ ಇಳುವರಿ ಕುಸಿತವಾಗಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಳವಾಗಿದೆ. ಈಗಾಗಲೇ ಕೊಪ್ಪಳದಿಂದ ನಾನಾ ರಾಜ್ಯಗಳಿಗೆ ಮೆಕ್ಕೆಜೋಳ ರವಾನೆಯಾಗುತ್ತಿದ್ದು, ಭಾನುವಾರ ಕೊಪ್ಪಳದಿಂದ ತಮಿಳುನಾಡಿಗೆ ರೈಲ್ವೆ ಮೂಲಕ ಮೆಕ್ಕೆಜೋಳ ರವಾನೆಗೆ ಚಾಲನೆ ದೊರೆಯಿತು.

ಮೆಕ್ಕೆಜೋಳದ ಇಳುವರಿ ಪ್ರತಿವರ್ಷಕ್ಕಿಂತಲೂ ಈ ವರ್ಷ ತಗ್ಗಿದೆ. ಏರಿಯಾ ಅಧಿಕವಾಗಿದ್ದರೂ ಇಳುವರಿ ಪ್ರಮಾಣ ಇಳಿದಿದೆ. ಆದರೂ ಜಿಲ್ಲಾ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಅತ್ಯುತ್ತಮವಾಗಿ ಬಂದಿದೆಯಾದರೂ ಇತರ ಜಿಲ್ಲೆಯಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚಳವಾಗುತ್ತಿದೆ. ಈ ನಡುವೆ ನಾನಾ ದೇಶಗಳಿಂದಲೂ ಮೆಕ್ಕೆಜೋಳ ಖರೀದಿಗೆ ಮುಂದಾಗಿರುವುದರಿಂದ ಇನ್ನಷ್ಟುದರ ಏರಿಕೆಯಾಗುವ ಸಾಧ್ಯತೆ ಇದೆ.

ಕುಷ್ಟಗಿ: ಎತ್ತಿನ ಮೈ ತೊಳೆಯಲು ಹೋಗಿ ಕಲ್ಲು ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

ಬೆಂಬಲ ಬೆಲೆ ಮೀರಿದ ದರ:

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿಯೇ ಬೆಲೆ ಹೆಚ್ಚಳವಾಗಿರುವುದರಿಂದ ರೈತರು ಫುಲ್‌ ಖುಷಿಯಾಗಿದ್ದಾರೆ. ಅದು ಕಳೆದ ಆರು ತಿಂಗಳಿಂದಲೂ ಬೆಲೆಯಲ್ಲಿ ಇಳಿಕೆಯಾಗಿಯೇ ಇಲ್ಲ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬೇಡಿಕೆ ಬಂದಿರುವುದರಿಂದ ಇನ್ನಷ್ಟುಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರಫ್ತುದಾರರು. ಈಗ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ .2250 ಪ್ರತಿ ಕ್ವಿಂಟಲ್‌ಗೆ ಮಾರಾಟವಾಗುತ್ತಿದೆ. .2100ರಿಂದ .2250 ರ ವರೆಗೂ ಮಾರಾಟವಾಗುತ್ತಿದ್ದು, ಮೆಕ್ಕೆಜೋಳ ಬೆಳೆ ಬೆಳೆದ ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಬೇಡಿಕೆಯಂತೆ ರಫ್ತು ಪ್ರಾರಂಭವಾದರೆ ಇನ್ನಷ್ಟುದರ ಹೆಚ್ಚಳವಾಗಲಿದೆ. ಅತಿಯಾದ ಮಳೆಯಿಂದಾಗಿ ಬಹುತೇಕ ಬೆಳೆ ನಾಶವಾಗಿದ್ದು, ಮೆಕ್ಕೆಜೋಳ ಬೆಳೆದ ರೈತರೆ ಅಲ್ವಸ್ವಲ್ಪ ಲಾಭವನ್ನು ಕಾಣುವುದಕ್ಕೆ ಕಾರಣವಾಗಿದೆ.

ಮೊದಲ ರೇಖ್‌ ರವಾನೆ:

ಕೊಪ್ಪಳದಿಂದ ಪ್ರಸಕ್ತ ವರ್ಷ ಮೊದಲ ರೈಲ್ವೆ ರೇಖ್‌ ಮೂಲಕ ರವಾನೆಗೆ ಚಾಲನೆ ನೀಡಲಾಯಿತು. ಸಾವಿರಾರು ಕ್ವಿಂಟಲ್‌ ಹೊತ್ತೊಯ್ಯುವ ರೈಲ್ವೆ ರೇಖ್‌ ಭರ್ತಿಗೊಳಿಸಿ ಪೂಜೆ ಸಲ್ಲಿಸಿ ಮೆಕ್ಕೆಜೋಳವನ್ನು ತಮಿಳುನಾಡಿಗೆ ರವಾನೆ ಮಾಡಲಾಯಿತು.

ದೀಪಾವಳಿ ಸಂಭ್ರಮಕ್ಕೆ ಬತ್ತದ ತೋರಣದ ಸೊಬಗು!

ಮೆಕ್ಕೆಜೋಳಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಬೇಡಿಕೆ ಇದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದಲೂ ಬೇಡಿಕೆ ಬರುತ್ತಿದೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿಯೇ ಬೇಡಿಕೆ ಇರುವುದರಿಂದ ಇನ್ನು ರಫ್ತು ಮಾಡಿಲ್ಲ ಅಂತ ಮೆಕ್ಕೆಜೋಳ ವ್ಯಾಪಾರಿ ಗೌತಮ ಜಾಂಗಡ ತಿಳಿಸಿದ್ದಾರೆ. 

ಪ್ರಸಕ್ತ ವರ್ಷ ಮೆಕ್ಕೆಜೋಳಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬೇಡಿಕೆ ಬರುತ್ತಿದೆ. ಈಗಾಗಲೇ ಅನೇಕ ರಫ್ತು ಕಂಪನಿಗಳು ಸಂಪರ್ಕ ಮಾಡಿ, ವಿಚಾರಣೆಯನ್ನು ನಡೆಸಿದ್ದಾರೆ ಅಂತ ರಫ್ತುದಾರ ಪ್ರಭು ಹೆಬ್ಬಾಳ ಹೇಳಿದ್ದಾರೆ. 
 

Follow Us:
Download App:
  • android
  • ios